alex Certify ʻFIH ಹಾಕಿ ಒಲಿಂಪಿಕ್ ಕ್ವಾಲಿಫೈಯರ್ʼ: ಇಟಲಿಯನ್ನು 5-0 ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʻFIH ಹಾಕಿ ಒಲಿಂಪಿಕ್ ಕ್ವಾಲಿಫೈಯರ್ʼ: ಇಟಲಿಯನ್ನು 5-0 ಅಂತರದಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ

ನವದೆಹಲಿ : ಎಫ್ಐಎಚ್ ಹಾಕಿ ಒಲಿಂಪಿಕ್ ಕ್ವಾಲಿಫೈಯರ್ ನಲ್ಲಿ ಭಾರತ 5-0 ಗೋಲುಗಳಿಂದ ಇಟಲಿಯನ್ನು ಸೋಲಿಸಿ ಸೆಮಿಫೈನಲ್ ಗೆ ಪ್ರವೇಶಿಸಿದೆ.

ಜನವರಿ 18ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡ ವಿಶ್ವದ 5ನೇ ಶ್ರೇಯಾಂಕಿತ ಜರ್ಮನಿ ತಂಡವನ್ನು ಎದುರಿಸಲಿದೆ.

ಮಂಗಳವಾರ ಭಾರತ ಮತ್ತು ಇಟಲಿ ನಡುವೆ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ 5-0 ಅಂತರದಿಂದ ಗೆದ್ದಿತ್ತು. ಪಂದ್ಯದ 45ನೇ ನಿಮಿಷದಲ್ಲಿ ಭಾರತ ಗೋಲು ಗಳಿಸಿ ಇಟಲಿ ಮೇಲೆ ಒತ್ತಡ ಹೇರಿತು. 100ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಉದಿತಾ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು.

ಮೊದಲಾರ್ಧದ ಅಂತ್ಯದವರೆಗೂ ಭಾರತ 1-0 ಮುನ್ನಡೆ ಸಾಧಿಸಿತ್ತು. ಪಂದ್ಯದ 41ನೇ ನಿಮಿಷದಲ್ಲಿ ಭಾರತದ ಪರ ದೀಪಿಕಾ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಗಳಿಸಿ 2-0 ಮುನ್ನಡೆ ಸಾಧಿಸಿದರು. ಸಲೀಮಾ ಟೆಟೆ ಮೂರನೇ ಗೋಲು ಗಳಿಸಿದರು. 53ನೇ ನಿಮಿಷದಲ್ಲಿ ನವನೀತ್ ಕೌರ್ ಗಳಿಸಿದ ಗೋಲಿನಿಂದ ಭಾರತ 4-0 ಮುನ್ನಡೆ ಸಾಧಿಸಿತು. ಭಾರತಕ್ಕೆ ಐದನೇ ಗೋಲು ಪೆನಾಲ್ಟಿ ಕಾರ್ನರ್ ರೂಪದಲ್ಲಿ ಬಂದಿತು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...