alex Certify ಕೋವಿಡ್ ಸೋಂಕಿಗೊಳಗಾಗಿ ಚೇತರಿಸಿಕೊಂಡವರಿಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಸೋಂಕಿಗೊಳಗಾಗಿ ಚೇತರಿಸಿಕೊಂಡವರಿಗೆ ತಿಳಿದಿರಲಿ ಈ ಮಾಹಿತಿ

ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಮಂದಿಯಲ್ಲಿ ಉಸಿರಾಟದ ತೊಂದರೆ ಹಾಗೂ ಸುಸ್ತಿನ ಸಮಸ್ಯೆಗಳು ಒಂದು ವರ್ಷದ ಕಾಲ ಬಾಧಿಸಬಹುದು ಎಂದು ಚೀನೀಯರು ನಡೆಸಿದ ಅಧ್ಯಯನವೊಂದು ತಿಳಿಸಿದೆ.

ಸಾಂಕ್ರಮಿಕದಿಂದ ಸೋಂಕಿತರ ಮೇಲೆ ಸುದೀರ್ಘಾವಧಿಗೆ ಏನೆಲ್ಲಾ ಪರಿಣಾಮಗಳು ಆಗಬಹುದು ಎಂದು ನಡೆಸಲಾದ ಈ ಅಧ್ಯಯನದಲ್ಲಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೋಂಕಿತರದಲ್ಲಿ ಒಂದು ವರ್ಷದ ಮಟ್ಟಿಗೆ — ಸುಸ್ತು ಅಥವಾ ಸ್ನಾಯುಗಳ ದೌರ್ಬಲ್ಯ — ಎರಡರಲ್ಲಿ ಒಂದು ಸಮಸ್ಯೆ 12 ತಿಂಗಳವರೆಗೂ ಬಾಧಿಸಲಿದೆ ಎಂದು ಬ್ರಿಟೀಷ್ ವೈದ್ಯಕೀಯ ನಿಯತಕಾಲಿಕೆ ’ಡಿ ಲ್ಯಾನ್ಸೆಟ್ ಫ್ರೈಡೇ’ಯಲ್ಲಿ ಪ್ರಕಟಿಸಲಾಗಿದೆ.

ಮೈನೆ ಪ್ಯಾರ್ ಕಿಯಾ ಸುಂದರಿ ಭಾಗ್ಯಶ್ರೀ ʼಆರೋಗ್ಯ – ಸೌಂದರ್ಯʼ ಕ್ಕೆ ಕಾರಣವಂತೆ ಅಡುಗೆ ಮನೆಯ ಈ ಪದಾರ್ಥ….!

“ಸ್ಥಾಪಿತವಾದ ಚಿಕಿತ್ಸೆಗಳ ಅಲಭ್ಯತೆ ಹಾಗೂ ಪುನಶ್ಚೇತನ ಮಾರ್ಗದರ್ಶನ ಇಲ್ಲದೇ ಇದ್ದ ವೇಳೆ, ಕೋವಿಡ್‌ನಿಂದ ಚೇತರಿಸಿಕೊಂಡು ಮರಳಿ ಕೆಲಸಕ್ಕೆ ಹಾಜರಾಗಲು ಜನರಿಗೆ ಬಹಳ ಸಮಯ ಹಿಡಿಯುತ್ತದೆ” ಎಂದು ಲ್ಯಾನ್ಸೆಟ್ ತಿಳಿಸಿದೆ.

“ಕೋವಿಡ್‌ನಿಂದ ಚೇತರಿಸಿಕೊಳ್ಳಲು ಸೋಂಕಿತರಿಗೆ ಕನಿಷ್ಠ ಒಂದು ವರ್ಷ ತಗುಲುತ್ತದೆ” ಎಂದು ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...