alex Certify ಪುತ್ರನಿಗೆ ತಂದೆ ಇಟ್ಟಿರುವ ವಿಚಿತ್ರ ಹೆಸರು ಕೇಳಿದ್ರೆ ಅಚ್ಚರಿ ಪಡ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನಿಗೆ ತಂದೆ ಇಟ್ಟಿರುವ ವಿಚಿತ್ರ ಹೆಸರು ಕೇಳಿದ್ರೆ ಅಚ್ಚರಿ ಪಡ್ತೀರಾ..!

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ವಿಭಿನ್ನವಾದ ಹೆಸರುಗಳನ್ನು ಇಡುತ್ತಾರೆ. ಬೇರೆ ಮಕ್ಕಳಂತೆ ತನ್ನ ಮಗುವಿನ ಹೆಸರು ಇರಬಾರದು ಅಂತಾ ವಿಭಿನ್ನ ಹೆಸರನ್ನು ಹುಡುಕುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗುವಿಗೆ ಇಟ್ಟ ಹೆಸರು ಕೇಳಿದ್ರೆ ಖಂಡಿತಾ ಅಚ್ಚರಿ ಪಡುತ್ತೀರಾ..!

ಇಂಡೋನೇಷ್ಯಾದಲ್ಲಿ ತಂದೆಯೊಬ್ಬರು ತಮ್ಮ ಮಗನಿಗೆ abcdef-ghijk-zuzu ಎಂಬ ವಿಶಿಷ್ಟ ಹೆಸರಿಟ್ಟಿದ್ದಾರೆ. ದಕ್ಷಿಣ ಸುಮಾತ್ರಾ ಪ್ರಾಂತ್ಯದ ಮುವಾರಾ ಎನಿನ್‌ನಲ್ಲಿ ಕೊರೋನ ವೈರಸ್ ಲಸಿಕೆ ಪಡೆಯಲು ಹೋದಾಗ ಈ ಹುಡುಗನ ವಿಶಿಷ್ಟ ಹೆಸರು ಬೆಳಕಿಗೆ ಬಂದಿದೆ.

12 ವರ್ಷದ ಹುಡುಗ ತನ್ನ ಪೂರ್ಣ ಹೆಸರನ್ನು abcdef-ghijk-zuzu ಎಂದು ಬರೆದಿದ್ದಾನೆ. ಮೊದಲಿಗೆ ಅಧಿಕಾರಿಗಳು ಇದನ್ನು ತಮಾಷೆ ಎಂದು ಭಾವಿಸಿದ್ದಾರೆ. ಆದರೆ, ಬಾಲಕನ ಜೊತೆಯಿದ್ದ ತಂದೆ ಹೆಸರನ್ನು ಸ್ಪಷ್ಟಪಡಿಸಿದಾಗ ಎಲ್ಲರಿಗೂ ಆಶ್ಚರ್ಯವಾಗಿದೆ.

ಕ್ರಾಸ್‌ವರ್ಡ್ ಪದಬಂಧಗಳ ಮೇಲಿನ ಪ್ರೀತಿಯಿಂದಾಗಿ ಬಾಲಕನಿಗೆ ಈ ಹೆಸರು ಇಡಲಾಗಿದೆ ಎಂದು ಹೇಳಲಾಗಿದೆ. ಜನ ಮಕ್ಕಳಿಗೆ ವಿಚಿತ್ರವಾದ ಹೆಸರನ್ನು ಇಡುವುದು ಇದೇ ಮೊದಲಲ್ಲ. ಫಿಲಿಪೈನ್ಸ್‌ನಲ್ಲಿ ತಂದೆಯೊಬ್ಬರು ತಮ್ಮ ಮಗುವಿಗೆ Ghlynnyl Hylhyr Yzzyghyl ಎಂದು ಹೆಸರಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...