alex Certify ಒಂದೇ ಕುಟುಂಬದ ಈ ಐವರು ಅಕ್ಕ- ತಂಗಿಯರು ಮಾಡಿದ ಸಾಧನೆಗೆ ‌ʼಹ್ಯಾಟ್ಸಾಫ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಕುಟುಂಬದ ಈ ಐವರು ಅಕ್ಕ- ತಂಗಿಯರು ಮಾಡಿದ ಸಾಧನೆಗೆ ‌ʼಹ್ಯಾಟ್ಸಾಫ್ʼ

ಶಾಲಾ ಮಟ್ಟದ ಶಿಕ್ಷಣವನ್ನು ದಾಟದ ಕುಟುಂಬವೊಂದರಲ್ಲಿ ಜನಿಸಿದ ಮೂವರು ಸಹೋದರಿಯರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಅಗ್ರ 100ರೊಳಗೆ ರ‍್ಯಾಂಕ್ ಪಡೆದ ಘಟನೆ ರಾಜಸ್ಥಾನದಲ್ಲಿ ಜರುಗಿದೆ.

ರಾಜಸ್ಥಾನದ ಆಡಳಿತ ಸೇವಾ ಪರೀಕ್ಷೆಯಲ್ಲಿ ತಮ್ಮಿಬ್ಬರು ಹಿರಿಯ ಅಕ್ಕಂದಿರಂತೆಯೇ ಒಳ್ಳೆಯ ಅಂಕ ಗಳಿಸಿರುವ ಈ ಮೂವರು ಸಹೋದರಿಯರು ಹನುಮಾನ್‌ಘಡ ಜಿಲ್ಲೆಯ ಭೈರುಸಾರಿ ಗ್ರಾಮದವರಾಗಿದ್ದಾರೆ. ತಾವಿರುವ ಪ್ರದೇಶದಿಂದ ಬಹಳ ದೂರವಿದ್ದ ಕಾರಣ ಈ ಸಹೋದರಿಯರಿಗೆ ಪ್ರೌಢಶಾಲಾ ಶಿಕ್ಷಣ ಕೊಡಿಸಲು ಅವರ ತಂದೆಗೆ ಸಾಧ್ಯವಾಗದೇ ಇದ್ದ ಕಾರಣ ಸಹದೇವ್‌ ಸಹರಣ್‌ ಮತ್ತು ಲಕ್ಷ್ಮಿ ಅವರ ಪುತ್ರಿಯರಾದ ರೋಮಾ, ಮಂಜು, ಅಂಶು, ರೀತು ಹಾಗೂ ಸುಮನ್ ತಮ್ಮ ಮನೆಯಲ್ಲೇ ಶಿಕ್ಷಣ ಪಡೆದಿದ್ದಾರೆ.

ಮುಕ್ತ ಶಾಲೆಯಲ್ಲಿ ಮಂಡಳಿ ಪರೀಕ್ಷೆ ತೆಗೆದುಕೊಂಡ ಈ ಸಹೋದರಿಯರು ಪಿ ಎಚ್‌ ಡಿ ಅಧ್ಯಯನಕ್ಕೆ ಖಾಸಗಿಯಾಗಿಯೇ ತಯಾರಿ ಮಾಡಿಕೊಂಡಿದ್ದರು. ಆ ವೇಳೆ ರಾಜ್ಯ ನಾಗರಿಕ ಸೇವಾ ಪರೀಕ್ಷೆಗಳ ಮೇಲೆ ಆಸಕ್ತಿ ಬೆಳೆಸಿಕೊಂಡ ಅಂಶು, ರಿತು ಹಾಗೂ ಸುಮನ್ ಈ ವರ್ಷದ ಪರೀಕ್ಷೆಯಲ್ಲಿ ಕ್ರಮವಾಗಿ 31ನೇ, 96ನೇ ಹಾಗೂ 98ನೇ ರ‍್ಯಾಂಕ್ ಪಡೆದಿದ್ದಾರೆ.

ಮಾಧ್ಯಮಗಳ ಕುರಿತು ಅಣ್ಣಾಮಲೈ ವಿವಾದಾತ್ಮಕ ಹೇಳಿಕೆ

ಹಿರಿಯ ಅಕ್ಕಂದಿರಾದ ರೋಮಾ, ಬ್ಲಾಕ್ ಅಭಿವೃದ್ಧಿ ಅಧಿಕಾರಿಯಾಗಿದ್ದರೆ, ಮಂಜು, ಸಹಕಾರೀ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಸಹೋದರಿಯರ ಏಕೈಕ ಸಹೋದರ ಸಹ ಶಿಕ್ಷಣದಲ್ಲಿ ಮುಂದಿದ್ದು, ಹಮೀರ್ಪುರದ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯದಲ್ಲಿ ಪದವಿ ಮುಗಿಸಿದ್ದು, ಆತನೂ ಸಹ ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...