ಶಾಲಾ ಮಟ್ಟದ ಶಿಕ್ಷಣವನ್ನು ದಾಟದ ಕುಟುಂಬವೊಂದರಲ್ಲಿ ಜನಿಸಿದ ಮೂವರು ಸಹೋದರಿಯರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಅಗ್ರ 100ರೊಳಗೆ ರ್ಯಾಂಕ್ ಪಡೆದ ಘಟನೆ ರಾಜಸ್ಥಾನದಲ್ಲಿ ಜರುಗಿದೆ.
ರಾಜಸ್ಥಾನದ ಆಡಳಿತ ಸೇವಾ ಪರೀಕ್ಷೆಯಲ್ಲಿ ತಮ್ಮಿಬ್ಬರು ಹಿರಿಯ ಅಕ್ಕಂದಿರಂತೆಯೇ ಒಳ್ಳೆಯ ಅಂಕ ಗಳಿಸಿರುವ ಈ ಮೂವರು ಸಹೋದರಿಯರು ಹನುಮಾನ್ಘಡ ಜಿಲ್ಲೆಯ ಭೈರುಸಾರಿ ಗ್ರಾಮದವರಾಗಿದ್ದಾರೆ. ತಾವಿರುವ ಪ್ರದೇಶದಿಂದ ಬಹಳ ದೂರವಿದ್ದ ಕಾರಣ ಈ ಸಹೋದರಿಯರಿಗೆ ಪ್ರೌಢಶಾಲಾ ಶಿಕ್ಷಣ ಕೊಡಿಸಲು ಅವರ ತಂದೆಗೆ ಸಾಧ್ಯವಾಗದೇ ಇದ್ದ ಕಾರಣ ಸಹದೇವ್ ಸಹರಣ್ ಮತ್ತು ಲಕ್ಷ್ಮಿ ಅವರ ಪುತ್ರಿಯರಾದ ರೋಮಾ, ಮಂಜು, ಅಂಶು, ರೀತು ಹಾಗೂ ಸುಮನ್ ತಮ್ಮ ಮನೆಯಲ್ಲೇ ಶಿಕ್ಷಣ ಪಡೆದಿದ್ದಾರೆ.
ಮುಕ್ತ ಶಾಲೆಯಲ್ಲಿ ಮಂಡಳಿ ಪರೀಕ್ಷೆ ತೆಗೆದುಕೊಂಡ ಈ ಸಹೋದರಿಯರು ಪಿ ಎಚ್ ಡಿ ಅಧ್ಯಯನಕ್ಕೆ ಖಾಸಗಿಯಾಗಿಯೇ ತಯಾರಿ ಮಾಡಿಕೊಂಡಿದ್ದರು. ಆ ವೇಳೆ ರಾಜ್ಯ ನಾಗರಿಕ ಸೇವಾ ಪರೀಕ್ಷೆಗಳ ಮೇಲೆ ಆಸಕ್ತಿ ಬೆಳೆಸಿಕೊಂಡ ಅಂಶು, ರಿತು ಹಾಗೂ ಸುಮನ್ ಈ ವರ್ಷದ ಪರೀಕ್ಷೆಯಲ್ಲಿ ಕ್ರಮವಾಗಿ 31ನೇ, 96ನೇ ಹಾಗೂ 98ನೇ ರ್ಯಾಂಕ್ ಪಡೆದಿದ್ದಾರೆ.
ಮಾಧ್ಯಮಗಳ ಕುರಿತು ಅಣ್ಣಾಮಲೈ ವಿವಾದಾತ್ಮಕ ಹೇಳಿಕೆ
ಹಿರಿಯ ಅಕ್ಕಂದಿರಾದ ರೋಮಾ, ಬ್ಲಾಕ್ ಅಭಿವೃದ್ಧಿ ಅಧಿಕಾರಿಯಾಗಿದ್ದರೆ, ಮಂಜು, ಸಹಕಾರೀ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಸಹೋದರಿಯರ ಏಕೈಕ ಸಹೋದರ ಸಹ ಶಿಕ್ಷಣದಲ್ಲಿ ಮುಂದಿದ್ದು, ಹಮೀರ್ಪುರದ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯದಲ್ಲಿ ಪದವಿ ಮುಗಿಸಿದ್ದು, ಆತನೂ ಸಹ ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.