alex Certify SHOCKING: ಹಸುವಿನ ಹೊಟ್ಟೆಯಿಂದ ಬರೋಬ್ಬರಿ 71 ಕೆಜಿ ಪ್ಲಾಸ್ಟಿಕ್​ ಹೊರಕ್ಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಹಸುವಿನ ಹೊಟ್ಟೆಯಿಂದ ಬರೋಬ್ಬರಿ 71 ಕೆಜಿ ಪ್ಲಾಸ್ಟಿಕ್​ ಹೊರಕ್ಕೆ…!

ಅಪಘಾತದಲ್ಲಿ ಗಾಯಗೊಂಡಿದ್ದ ಬೀದಿ ಹಸುವಿಗೆ ಸರ್ಜರಿ ಕೈಗೊಂಡ ವೇಳೆ ಅದರ ಹೊಟ್ಟೆಯಲ್ಲಿ ಕೆಜಿಗಟ್ಟಲೇ ಪ್ಲಾಸ್ಟಿಕ್​ ಹಾಗೂ ಲೋಹದ ವಸ್ತುಗಳು ಸಿಕ್ಕ ಆಘಾತಕಾರಿ ಘಟನೆ ಗುರುಗ್ರಾಮದಲ್ಲಿ ವರದಿಯಾಗಿದೆ.

ಸುಮಾರು 4 ಗಂಟೆಗಳ ಕಾಲ ಹಸುವಿಗೆ ಚಿಕಿತ್ಸೆ ಕೈಗೊಂಡ ಪಶು ವೈದ್ಯಾಧಿಕಾರಿಗಳು ಬರೋಬ್ಬರಿ 71 ಕೆಜಿ ತೂಕದ ಪ್ಲಾಸ್ಟಿಕ್​ ಹಾಗೂ ಸೂಜಿ, ನಾಣ್ಯಗಳು, ಗಾಜಿನ ಚೂರು, ಮೊಳೆ ಸೇರಿದಂತೆ ಅಪಾಯಕಾರಿ ವಸ್ತುಗಳನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಸುವಿನ ಮೇಲೆ ಮಾಡಲಾದ ಸರ್ಜರಿ ಯಶಸ್ವಿಯಾಗಿದೆ. ಆದರೆ ಈ ಬೀದಿ ಹಸು ಮಾತ್ರ ಇನ್ನೂ ಪ್ರಾಣಾಪಾಯದಿಂದ ಪಾರಾಗಿಲ್ಲ. ಮುಂದಿನ 10 ದಿನಗಳು ಈ ಹಸುವಿನ ಪಾಲಿಗೆ ಬಹಳ ನಿರ್ಣಾಯಕವಾಗಿದೆ ಎಂದು ಪಶು ವೈದ್ಯಾಧಿಕಾರಿ ಡಾ. ಅತುಲ್​ ಮೌರ್ಯ ಮಾಹಿತಿ ನೀಡಿದ್ದಾರೆ. ಮೂವರು ವೈದ್ಯರ ತಂಡ ಈ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ.

ಫರಿದಾಬಾದ್​​ನಲ್ಲಿ ಕಾರು ಅಪಘಾತಕ್ಕೆ ಒಳಗಾಗಿದ್ದ ಈ ಹಸುವನ್ನ ರಕ್ಷಣೆ ಮಾಡಲಾಗಿದೆ. ಈ ಹಸುವನ್ನ ಕೂಡಲೇ ದೇವಾಶ್ರಯ ಪಶು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಈ ವೇಳೆ ಗಾಯಗೊಂಡ ಹಸು ತನ್ನ ಹೊಟ್ಟೆಯನ್ನ ತಾನೇ ಒದ್ದುಕೊಳ್ಳುತ್ತಿರೋದನ್ನ ಗಮನಿಸಿದ್ದಾರೆ.

ಹೀಗಾಗಿ ಹಸುವಿನ ಹೊಟ್ಟೆಯ ಎಕ್ಸ್​ ರೇ ಹಾಗೂ ಅಲ್ಟ್ರಾಸೌಂಡ್​ ಪರೀಕ್ಷೆಗಳನ್ನ ಗಮನಿಸಿದ ಬಳಿಕ ಇದರ ಹೊಟ್ಟೆಯಲ್ಲಿ ಇಂತಹ ಅಪಾಯಕಾರಿ ವಸ್ತುಗಳು ಇರೋದು ವೈದ್ಯರ ಗಮನಕ್ಕೆ ಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...