alex Certify ಗಾಯದಿಂದಾಗಿ ನೇಮಾರ್​ ಔಟ್​: ಕ್ರೀಡಾಂಗಣಕ್ಕೆ ಬಂದ ನಕಲಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಪೈಪೋಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಯದಿಂದಾಗಿ ನೇಮಾರ್​ ಔಟ್​: ಕ್ರೀಡಾಂಗಣಕ್ಕೆ ಬಂದ ನಕಲಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಪೈಪೋಟಿ

ತಮ್ಮ ನೆಚ್ಚಿನ ಸೆಲೆಬ್ರಿಟಿಯನ್ನು ಭೇಟಿಯಾದ ನಂತರ ಅನುಭವಿಸುವ ಸಂಪೂರ್ಣ ಸಂತೋಷವನ್ನು ಪದಗಳಲ್ಲಿ ವಿವರಿಸಲಾಗುವುದಿಲ್ಲ. ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಬ್ರೆಜಿಲ್-ಸ್ವಿಜರ್ಲೆಂಡ್​ ಪಂದ್ಯದ ಸಮಯದಲ್ಲಿ ಹಲವಾರು ಫುಟ್‌ಬಾಲ್ ಅಭಿಮಾನಿಗಳು ಇದೇ ರೀತಿಯ ಭಾವನೆಯನ್ನು ಅನುಭವಿಸಿದರು.

ಈ ಪಂದ್ಯದ ವೇಳೆ ಬ್ರೆಜಿಲಿಯನ್ ಫುಟ್​ಬಾಲ್​ ಆಟಗಾರ ನೇಮಾರ್‌ ಅವರನ್ನೇ ಹೋಲುವ ವ್ಯಕ್ತಿಯೊಬ್ಬ ಕ್ರೀಡಾಂಗಣದಲ್ಲಿ ಕಂಡುಬಂದ. ಸೋಸಿಯಾ ಡೋನಿ ಎಂಬ ಹೆಸರಿನ ಈ ವ್ಯಕ್ತಿಯನ್ನು ನೋಡಿದ ನೇಮಾರ್​ ಅಭಿಮಾನಿಗಳು ಪಟ್ಟ ಸಂತೋಷ ಅಷ್ಟಿಷ್ಟಲ್ಲ.

ನಿಜವಾಗಿಯೂ ನೇಮಾರ್​ನೇ ಎಂದುಕೊಂಡ ಹಲವು ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಕೆಲವರಿಗೆ ಈತ ನೇಮಾರ್​ ಅಲ್ಲ ಎಂದು ತಿಳಿದಿದ್ದರೂ, ತಮ್ಮ ಸ್ನೇಹಿತರಿಗೆ ತೋರಿಸುವುದಕ್ಕಾಗಿ ಸೆಲ್ಫಿ ತೆಗೆದುಕೊಳ್ಳಲು ದೌಡಾಯಿಸಿದರು. ಇದರ ವಿಡಿಯೋ ವೈರಲ್​ ಆಗಿದೆ.

ಡೊನಿ ಎಂಬಾತ ಇದರ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಾಕಿದ್ದು ಇದಾಗಲೇ ಈ ವಿಡಿಯೋ 9 ಲಕ್ಷಕ್ಕೂ ಅಧಿಕ ವ್ಯೂಸ್​ ಕಂಡಿದೆ.
ಅದೇ ಇನ್ನೊಂದೆಡೆ, ನೇಮಾರ್​, ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದು, ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...