alex Certify FACT CHECK: ‘ದಿ ಓಮಿಕ್ರಾನ್ ವೇರಿಯಂಟ್’ ಎಂಬ ಸಿನಿಮಾ ಇದೆಯಾ..? ಇಲ್ಲಿದೆ ವೈರಲ್ ಆದ ಪೋಸ್ಟರ್ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

FACT CHECK: ‘ದಿ ಓಮಿಕ್ರಾನ್ ವೇರಿಯಂಟ್’ ಎಂಬ ಸಿನಿಮಾ ಇದೆಯಾ..? ಇಲ್ಲಿದೆ ವೈರಲ್ ಆದ ಪೋಸ್ಟರ್ ಹಿಂದಿನ ಅಸಲಿ ಸತ್ಯ

Omicron Fact Check: Did a film on COVID-19 variant release in 1963? Find  out here | Buzz News | Zee Newsಭಾರತದಲ್ಲಿ ಗುರುವಾರದಂದು ಕೋವಿಡ್-19 ನ ಓಮಿಕ್ರಾನ್ ರೂಪಾಂತರದ ಮೊದಲ ಎರಡು ಪ್ರಕರಣಗಳನ್ನು ವರದಿ ಮಾಡಿದ ನಂತರ ಎಲ್ಲರಲ್ಲೂ ಭೀತಿಗೆ ಕಾರಣವಾಗಿದೆ. ವೈದ್ಯರು ಭಯಬೇಡ ಎಂದು ಹೇಳಿದ್ರೂ, ಜನರು ಮಾತ್ರ ಆತಂಕದಲ್ಲಿದ್ದಾರೆ.

ಈ ಮಧ್ಯೆ ‘ದಿ ಓಮಿಕ್ರಾನ್ ವೇರಿಯಂಟ್’ ಎಂಬ ಸಿನಿಮಾ ಪೋಸ್ಟರ್ ವೈರಲ್ ಆಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಪೋಸ್ಟರ್ ನಕಲಿ ಎಂಬ ವಿಚಾರ ಬೆಳಕಿಗೆ ಬಂದಿದೆ.

ಹೌದು, ಅಸ್ತಿತ್ವದಲ್ಲಿಲ್ಲದ ಚಲನಚಿತ್ರದ ಪೋಸ್ಟರ್ ದಿ ಓಮಿಕ್ರಾನ್ ವೇರಿಯಂಟ್ ಎಂಬ ಶೀರ್ಷಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿತ್ತು. ಭಯಾನಕ ಥೀಮ್ ಹೊಂದಿರುವ ಪೋಸ್ಟರ್ ಮುಂಭಾಗದಲ್ಲಿ ಒಬ್ಬ ಯುವಕ ಹಾಗೂ ಯುವತಿ ಆಕಾಶದಲ್ಲಿ ನಕ್ಷತ್ರವನ್ನು ನೋಡುತ್ತಿರುವ ಫೋಟೋವನ್ನು ಹೊಂದಿದೆ. ಅವರ ಹಿಂದೆ ರಕ್ತಸಿಕ್ತ ಅಂಗೈ ಮಾತ್ರ ಇದ್ದು, ಅದರ ಮಧ್ಯದಲ್ಲಿ ಇರುವೆ ಇರುವುದನ್ನು ಪೋಸ್ಟರ್ ನಲ್ಲಿ ನೋಡಬಹುದು.

ಈ ಪೋಸ್ಟರ್ ಗೆ ಭೂಮಿಯು ಸ್ಮಶಾನಕ್ಕೆ ತಿರುಗಿದ ದಿನ..! ಎಂಬ ಅಡಿಬರಹವನ್ನು ನೀಡಲಾಗಿದೆ. ಈ ಪೋಸ್ಟರ್ ನೋಡಿದ ನೆಟ್ಟಿಗರು, ಸಾಂಕ್ರಾಮಿಕ ರೋಗವೊಂದು ಪಿತೂರಿ ಎಂದು ಕರೆದಿದ್ದಾರೆ. ಅಲ್ಲದೆ, ಈ ಮಹಾಮಾರಿಯನ್ನು ಬಹಳ ಹಿಂದೆಯೇ ಯೋಜಿಸಲಾಗಿದೆ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಆದರೀಗ ಈ ಪೋಸ್ಟರ್ ನಕಲಿ ಎಂಬುದು ಗೊತ್ತಾಗಿದೆ.

ಪೋಸ್ಟರ್ ಅನ್ನು ಐರಿಶ್ ನಿರ್ದೇಶಕ ಬೆಕಿ ಚೀಟಲ್ ರಚಿಸಿದ್ದಾರೆ. 1974 ರ ಸ್ಪ್ಯಾನಿಷ್ ಚಲನಚಿತ್ರದ ಸುಸೆಸೊಸ್ ಎನ್ ಲಾ ಕ್ವಾರ್ಟಾ ಫೇಸ್ (ಹಂತ IV) ನ ಪೋಸ್ಟರ್ ಅನ್ನು ನಕಲಿಯಾಗಿ ‘ದಿ ಓಮಿಕ್ರಾನ್ ವೇರಿಯಂಟ್’ ಎಂದು ರಚಿಸಲಾಗಿದೆ.

ಕೋವಿಡ್-19 ರೂಪಾಂತರವು ಕ್ಲಾಸಿಕ್ ವೈಜ್ಞಾನಿಕ-ಕಾಲ್ಪನಿಕ ಚಲನಚಿತ್ರಕ್ಕೆ ಉತ್ತಮ ಹೆಸರಿನಂತೆ ಕಂಡು ಬರುವ ಕಾರಣ ಪೋಸ್ಟರ್ ಅನ್ನು ಮೋಜಿಗಾಗಿ ಮಾಡಿದ್ದಾಗಿ ಟ್ವಿಟ್ಟರ್ ನಲ್ಲಿ ಚೀಟಲ್ ಅವರು ಟ್ವೀಟ್ ಮಾಡಿದ್ದಾರೆ. ಓಮಿಕ್ರಾನ್ ರೂಪಾಂತರವು 70ರ ದಶಕದ ವೈಜ್ಞಾನಿಕ ಚಲನಚಿತ್ರದಂತೆ ತೋರುತ್ತದೆ. ತನ್ನ ಜೋಕ್‌ನಿಂದ ದಯವಿಟ್ಟು ಅನಾರೋಗ್ಯಕ್ಕೆ ಒಳಗಾಗಬೇಡಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ದಿ ಓಮಿಕ್ರಾನ್ ವೇರಿಯೆಂಟ್ ಎಂಬ ಯಾವುದೇ ಚಲನಚಿತ್ರವಿಲ್ಲದಿದ್ದರೂ, 1963 ರಲ್ಲಿ ಬಿಡುಗಡೆಯಾದ ಓಮಿಕ್ರಾನ್ ಎಂಬ ವೈಜ್ಞಾನಿಕ ಚಲನಚಿತ್ರವಿದೆ. ಆದರೆ, ಇದು ಸಾಂಕ್ರಾಮಿಕ ರೋಗದ ಬಗ್ಗೆ ಇರುವ ಸಿನಿಮಾವಲ್ಲ.

— Becky Cheatle (@BeckyCheatle) December 1, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...