alex Certify ಶಿಕ್ಷಣ ವಂಚಿತ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಯ್ತು ಈ ತಾತ್ಕಾಲಿಕ ಕಟ್ಟಡ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿಕ್ಷಣ ವಂಚಿತ ವಿದ್ಯಾರ್ಥಿಗಳ ಪಾಲಿಗೆ ಬೆಳಕಾಯ್ತು ಈ ತಾತ್ಕಾಲಿಕ ಕಟ್ಟಡ…!

ಭಾರತದಲ್ಲಿ ವಲಸಿಗರ ಮಕ್ಕಳ ಶಿಕ್ಷಣ ಕೊರತೆಯನ್ನ ನೀಗಿಸಲು ಕಡಿಮೆ ವೆಚ್ಚದ ಹಾಗೂ ನಿರ್ಮಿಸಲು ಹಾಗೂ ಕೆಡವಲು ಸುಲಭವಾದ ಶಾಲೆಗಳನ್ನ ನಿರ್ಮಿಸಬಹುದಾಗಿದೆ.

ದೆಹಲಿಯ ಯಮುನಾ ನದಿ ದಂಡೆಯಲ್ಲಿದ್ದ ಶಾಲೆಯನ್ನ ನೆಲಸಮಗೊಳಿಸಿದ ಬಳಿಕ ಇಲ್ಲಿರುವ ಕೃಷಿಕರ ಮಕ್ಕಳಿಗೆ ಅನುಕೂಲವಾಗಲಿ ಅಂತಾ ತಾತ್ಕಾಲಿಕ ಶಾಲಾ ಕಟ್ಟಡವನ್ನ ನಿರ್ಮಿಸಲಾಗಿದೆ. ಬಿದಿರು, ಒಣಗಿದ ಹುಲ್ಲುಗಳನ್ನ ಬಳಕೆ ಮಾಡಿ ಈ ಶಾಲೆಯನ್ನ ನಿರ್ಮಿಸಲಾಗಿದೆ.

ದೆಹಲಿ ಮೂಲದ ಸೋಶಿಯಲ್​ ಡಿಸೈನ್​​ ಕೋಲರೇಟಿವ್​ ಈ ಯೋಜನೆಗಾಗಿ ಕಳೆದ ತಿಂಗಳು ವಾಸ್ತು ಶಿಲ್ಪಕ್ಕೆ ನೀಡಲಾಗುವ 2020ನೇ ಸಾಲಿನ ಬೀಜ್ಲೆ ಡಿಸೈನ್ಸ್ ಪ್ರಶಸ್ತಿಯನ್ನ ಬಾಚಿಕೊಂಡಿದೆ.

ಮೊಬೈಲ್ ಗೇಮಿಂಗ್ ಪ್ರಿಯರಿಗೆ ಇಲ್ಲಿದೆ ಶುಭ ಸುದ್ದಿ‌

ಯಮುನಾ ನದಿ ದಡದಲ್ಲಿದ್ದ ಶಾಲೆಯನ್ನ 2011ರಲ್ಲಿ ನೆಲಸಮಗೊಳಿಸಿದ ಬಳಿಕ ಸುಮಾರು 200ಕ್ಕೂ ಹೆಚ್ಚು ಮಕ್ಕಳು ಕಲಿಕೆಯಿಂದ ವಂಚಿತರಾಗುವ ಅಪಾಯದಲ್ಲಿದ್ದರು. ಈ ವೇಳೆಯಲ್ಲಿ ಸಮಾಜ ಸೇವಕರೊಬ್ಬರ ಸಂಪರ್ಕದ ಬಳಿಕ ಈ ತಾತ್ಕಾಲಿಕ ಶಾಲೆಯನ್ನ ನಿರ್ಮಿಸೋದ್ರ ಮೂಲಕ ಶಿಕ್ಷಣದ ಸಮಸ್ಯೆಗೆ ಪರಿಹಾರ ಹುಡುಕಲಾಗಿದೆ.

ಸಾರ್ವಜನಿಕವಾಗಿ ದೇಣಿಗೆಯನ್ನ ಸಂಗ್ರಹಿಸಿದ ಈ ಗ್ರಾಮದ ಜನತೆ, ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು 2017ರಲ್ಲಿ ಈ ತಾತ್ಕಾಲಿಕ ಶಾಲೆಯನ್ನ ನಿರ್ಮಾಣ ಮಾಡಿದ್ದರು. ಭೂ ವಿವಾದದ ಕಾರಣದಿಂದಾಗಿ 1 ವರ್ಷದ ನಂತರ ಈ ಕಟ್ಟಡವನ್ನ ಕೆಡವಬೇಕಾಗಿ ಬಂತು ಹಾಗೂ 2019ರಲ್ಲಿ ಮತ್ತೊಂದು ಸ್ಥಳದಲ್ಲಿ ತಾತ್ಕಾಲಿಕ ಶಾಲೆಯನ್ನ ನಿರ್ಮಿಸಲಾಗಿದೆ.

ಆದರೆ ಕೊರೊನಾ ವೈರಸ್​ ಸಾಂಕ್ರಾಮಿಕದ ಭಯದಿಂದಾಗಿ ಭಾರತದಲ್ಲಿ ಸುಮಾರು 15 ಮಿಲಿಯನ್​ ಜನರು ಸ್ಥಳಾಂತರದ ಹೆದರಿಕೆಯಲ್ಲಿದೆ. ಎಲ್ಲಾ ವಿದ್ಯಾರ್ಥಿಗಳಿಗೆ ಆನ್​​ಲೈನ್​ ಕಲಿಕೆಯನ್ನ ಮಾಡಲು ಸಾಧ್ಯವಿಲ್ಲದ ಕಾರಣ ಇಂತಹ ಶಾಲೆಗಳನ್ನ ನಿರ್ಮಿಸಬಹುದು ಎಂದು ಸಂಸ್ಥೆಯ ಜಾನು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...