alex Certify ದೇವಸ್ಥಾನದಲ್ಲಿ ಜಾತಿ ತಾರತಮ್ಯ ಎದುರಿಸಿದ ಸಚಿವ ಹೇಳಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇವಸ್ಥಾನದಲ್ಲಿ ಜಾತಿ ತಾರತಮ್ಯ ಎದುರಿಸಿದ ಸಚಿವ ಹೇಳಿದ್ದೇನು ಗೊತ್ತಾ…?

ತಿರುವನಂತಪುರಂ: ಕೇರಳದ ದೇವಾಲಯದ ವ್ಯವಹಾರಗಳ ಸಚಿವ ಕೆ. ರಾಧಾಕೃಷ್ಣನ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ದೇವಾಲಯದಲ್ಲಿ ಜಾತಿ ತಾರತಮ್ಯ ಎದುರಿಸಿದ್ದಾರೆ.

ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಸದಸ್ಯ, ಪಕ್ಷದ ಪ್ರಮುಖ ದಲಿತ ಮುಖವಾಗಿರುವ ರಾಧಾಕೃಷ್ಣನ್ ಅವರು ಹಿಂದೂ ಧರ್ಮದಲ್ಲಿನ ಜಾತಿ ವ್ಯವಸ್ಥೆಯನ್ನು ಟೀಕಿಸಿದ್ದಾರೆ.

ತಾರತಮ್ಯ ಮಾಡಿದ ದೇವಸ್ಥಾನದ ಹೆಸರನ್ನು ಸಚಿವರು ಹೇಳಲಿಲ್ಲ. ಆದರೆ, ರಾಧಾಕೃಷ್ಣನ್ ಅವರ ಹೇಳಿಕೆಗಳು ಕೇರಳದ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಸರ್ಕಾರಕ್ಕೆ ಮುಜುಗರ ತಂದಿದೆ.

ಭಾನುವಾರ ಕೊಟ್ಟಾಯಂನಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಜನರ ಸಂಘಟನೆಯಾದ ವೇಲನ್ ಸರ್ವೀಸ್ ಸೊಸೈಟಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಧಾಕೃಷ್ಣನ್, ನಾನು ಉದ್ಘಾಟನೆಗೆ ಸಂಬಂಧಿಸಿದ ಕಾರ್ಯಕ್ರಮಕ್ಕಾಗಿ ದೇವಸ್ಥಾನಕ್ಕೆ ಹೋಗಿದ್ದೆ. ದೇವಸ್ಥಾನದ ಮುಖ್ಯ ಅರ್ಚಕರು ದೀಪವನ್ನು ಬೆಳಗಿಸಲು ನನ್ನ ಬಳಿಗೆ ಬಂದರು. ದೀಪವನ್ನು ನನಗಾಗಿ ತರಲಾಗಿದೆ ಎಂದು ನಾನು ಭಾವಿಸಿದೆ. ಆದರೆ ಮುಖ್ಯ ಅರ್ಚಕರು ಅದನ್ನು ನನ್ನ ಕೈಗೆ ನೀಡಲಿಲ್ಲ. ಅದು ದೇವಸ್ಥಾನದ ಆಚರಣೆಯ ಭಾಗ ಎಂದು ಭಾವಿಸಿ ನಾನು ದೂರ ಉಳಿದೆ. ನಂತರ ಮುಖ್ಯ ಅರ್ಚಕರು ದೀಪವನ್ನು ಸಹಾಯಕ ಅರ್ಚಕರಿಗೆ ಹಸ್ತಾಂತರಿಸಿದರು. ನಂತರ ಆರತಿ ತೆಗೆದುಕೊಳ್ಳಲು ನನಗೆ ಅವಕಾಶ ಕೊಡದೇ ನೆಲದ ಮೇಲೆ ಇರಿಸಿದರು ಎಂದು ತಿಳಿಸಿದ್ದಾರೆ.

ದೇವಸ್ಥಾನದಲ್ಲಿ ಈ ರೀತಿ ತಾರತಮ್ಯ ಮಾಡುತ್ತಿದ್ದರೂ, ನಾನು ಮತ್ತು ನನ್ನಂತಹ ಇತರರು ದೇವಸ್ಥಾನಕ್ಕೆ ದೇಣಿಗೆ ನೀಡಿದ ಹಣಕ್ಕೆ ಯಾವುದೇ ತಾರತಮ್ಯ ಇರುವುದಿಲ್ಲ. ನಾನು ಇದನ್ನು ಆ ಮುಖ್ಯ ಅರ್ಚಕರ ಸಮ್ಮುಖದಲ್ಲಿ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.

ಜಾತಿ ವ್ಯವಸ್ಥೆಯ ದಿನಗಳಿಗೆ ಹಿಂತಿರುಗುವುದನ್ನು ನಾನು ಒಪ್ಪುವುದಿಲ್ಲ. ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದವರು ಜನರನ್ನು ವಿಭಜಿಸಲು ಸ್ಪಷ್ಟ ದೃಷ್ಟಿಕೋನ ಹೊಂದಿದ್ದರು. ಜಾತಿ ವ್ಯವಸ್ಥೆಯನ್ನು ಸೃಷ್ಟಿಸಿದವರು ಚಂದ್ರಯಾನ ಮಿಷನ್‌ ನಲ್ಲಿ ಭಾಗಿಯಾದವರಿಗಿಂತ ಬುದ್ಧಿವಂತರು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...