alex Certify ಬಳಕೆದಾರರ ಖಾಸಗಿ ಮಾಹಿತಿಗೆ ʼವಾಟ್ಸಾಪ್ʼ ಕನ್ನ.​..! ಹೊಸ ವರದಿಯಲ್ಲಿ ʼಸ್ಫೋಟಕʼ ಮಾಹಿತಿ‌ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳಕೆದಾರರ ಖಾಸಗಿ ಮಾಹಿತಿಗೆ ʼವಾಟ್ಸಾಪ್ʼ ಕನ್ನ.​..! ಹೊಸ ವರದಿಯಲ್ಲಿ ʼಸ್ಫೋಟಕʼ ಮಾಹಿತಿ‌ ಬಹಿರಂಗ

ಫೇಸ್​ಬುಕ್​ ಮಾಲೀಕತ್ವದ ವಾಟ್ಸಾಪ್​ನ ಮೂಲಕ ಕಳುಹಿಸಲಾಗುವ ಸಂದೇಶಗಳು ಗೌಪ್ಯವಾಗಿ ಇರೋದಿಲ್ಲ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಅತ್ಯಂತ ಪ್ರಸಿದ್ಧ ಚಾಟ್​ ಅಪ್ಲಿಕೇಶನ್​ಗಳಲ್ಲಿ ಒಂದಾದ ವಾಟ್ಸಾಪ್​ ಯಾವುದೇ ಕಾರಣಕ್ಕೂ ಗ್ರಾಹಕರ ಖಾಸಗಿ ಸಂದೇಶಗಳನ್ನು ಫೇಸ್​ಬುಕ್​ ಓದಲು ಸಾಧ್ಯವಿಲ್ಲ ಎಂದು ಹೇಳಿತ್ತು. ‌

ಆದರೆ ಪ್ರೋ ಪಬ್ಲಿಕಾ ನೀಡಿರುವ ವರದಿಯಲ್ಲಿ ಎಂಡ್​​​ ಟು ಎಂಡ್​ ಎನ್​ಕ್ರಿಪ್ಟೆಡ್​ ಎಂದು ವಾಟ್ಸಾಪ್​ ಹೇಳಿದ್ದರೂ ಸಹ ಫೇಸ್​ ಬುಕ್​​ ಕಂಪನಿಯೂ 1000ಕ್ಕೂ ಅಧಿಕ ಗುತ್ತಿಗೆ ಕೆಲಸಗಾರರಿಗೆ ವಾಟ್ಸಾಪ್​​ನಲ್ಲಿ ಬಳಕೆದಾರರು ಮಾಡುವ ಖಾಸಗಿ ಸಂದೇಶಗಳನ್ನು ಓದಲೆಂದೇ ನೇಮಿಸಿದೆ ಎನ್ನಲಾಗಿದೆ.

ಇದು ಮಾತ್ರವಲ್ಲದೇ ಈ ಕಂಪನಿಯು ಬಳಕೆದಾರರ ಕೆಲ ಖಾಸಗಿ ಮಾಹಿತಿಗಳನ್ನು ಅಮೆರಿಕದ ಡಿಪಾರ್ಟ್​ಮೆಂಟ್​ ಆಫ್​ ಜಸ್ಟೀಸ್​ನಂತಹ ಸಾಕಷ್ಟು ಕಾನೂನು ಜಾರಿ ಸಂಸ್ಥೆಯೊಂದಿಗೆ ಹಂಚಿಕೊಂಡಿದೆ ಎನ್ನಲಾಗಿದೆ.

ವಾಟ್ಸಾಪ್​ನಲ್ಲಿ ಬಳಕೆದಾರರ ಖಾಸಗಿ ಸಂಭಾಷಣೆಯ ಮೇಲೆ ಕಣ್ಣಿಡಲು ಸಾಧ್ಯವಿಲ್ಲ ಎಂದು ಫೇಸ್​ಬುಕ್​ ಸ್ಥಾಪಕ ಜುಕರ್​ ಬರ್ಗ್​ ಹೇಳಿಕೆ ನೀಡಿದ್ದರು. ಆದರೆ ಇದೀಗ ಪ್ರೋ ಪಬ್ಲಿಕಾ ಈ ಸ್ಪೋಟಕ ಮಾಹಿತಿ ಲಭ್ಯವಾಗಿದೆ. ವಾಟ್ಸಾಪ್​ನಲ್ಲಿ ಬಳಕೆದಾರರ ಯಾವುದೇ ಖಾಸಗಿ ವಿಚಾರಗಳನ್ನು ನಾವು ನೋಡುವುದಿಲ್ಲ ಎಂದು ಜುಕರ್​ ಬರ್ಗ್​ ಹೇಳಿದ್ದರು.

ಹೊಸ ಬಳಕೆದಾರರು ವಾಟ್ಸಾಪ್​ಗೆ ಸೈನಪ್​ ಆಗುತ್ತಿದ್ದಂತೆಯೇ, ನಿಮ್ಮ ಸಂದೇಶಗಳು ಹಾಗೂ ಕರೆಗಳು ಸುರಕ್ಷಿತವಾಗಿದೆ. ನೀವು ಸಂಭಾಷಣೆ ನಡೆಸುವ ವ್ಯಕ್ತಿಯ ಹಾಗೂ ನಿಮ್ಮ ನಡುವೆ ವಿಲೇವಾರಿ ಆಗುವ ವಿಚಾರಗಳನ್ನು ಯಾರೂ ಓದುವುದಿಲ್ಲ, ಕೇಳುವುದೂ ಇಲ್ಲ , ನಿಮ್ಮ ಮಧ್ಯೆ ಇಲ್ಲಿ ಇನ್ಯಾರೂ ಇರುವುದಿಲ್ಲ. ವಾಟ್ಸಾಪ್​ ಕೂಡ..! ಎಂದು ಗೌಪ್ಯತೆಯ ಬಗ್ಗೆ ದೃಢೀಕರಣ ನೀಡಲಾಗುತ್ತದೆ.

ಆದರೆ ಈ ಎಲ್ಲಾ ದೃಢೀಕರಣವು ಸುಳ್ಳು ಎಂದು ಸಾಬೀತಾಗಿದೆ. ಆಸ್ಟಿನ್​, ಟೆಕ್ಸಾಸ್​, ಡುಬ್ಲಿನ್​ ಹಾಗೂ ಸಿಂಗಾಪುರದಲ್ಲಿ ಈ ಮೆಸೇಜ್​ಗಳನ್ನು ಓದುವವರಿಗಾಗಿಯೇ ಕಚೇರಿ ಸ್ಥಾಪನೆ ಮಾಡಲಾಗಿದೆ.

ಇಲ್ಲಿ ಸಾವಿರಕ್ಕೂ ಅಧಿಕ ಗುತ್ತಿಗೆ ಕೆಲಸಗಾರರು ವಾಟ್ಸಾಪ್​ ಸಂಭಾಷಣೆಯನ್ನು ಕೇಳುವ ಹಾಗೂ ಓದುವ ಮೂಲಕ ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ ಎಂದು ಪ್ರೋ ಪಬ್ಲಿಕಾ ಹೇಳಿದೆ.

ಪ್ರೋ ಪಬ್ಲಿಕಾದ ಈ ವರದಿಯ ಬಳಿಕ ಸಿಗ್ನಲ್​ ಹಾಗೂ ಟೆಲಿಗ್ರಾಂನಂತಹ ಅಪ್ಲಿಕೇಶನ್​ಗಳತ್ತ ಜನರು ಇನ್ನಷ್ಟು ಮನಸ್ಸು ಮಾಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...