alex Certify ಅದೃಷ್ಟದ ಜೀವನ ಶುರುವಾಗಲಿದೆ ಎಂಬ ಸಂಕೇತ ನೀಡುತ್ತವೆ ಈ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟದ ಜೀವನ ಶುರುವಾಗಲಿದೆ ಎಂಬ ಸಂಕೇತ ನೀಡುತ್ತವೆ ಈ ಘಟನೆ

ಜೀವನ ಸುಖಕರವಾಗಿರಲಿ, ಸದಾ ಸಂಪತ್ತು ಮನೆಯಲ್ಲಿ ನೆಲೆಸಿರಲಿ, ಅದೃಷ್ಟದ ದೇವತೆ ಜೊತೆಗಿರಲಿ ಎಂದು ಎಲ್ಲರೂ ಬಯಸ್ತಾರೆ. ಆದ್ರೆ ಎಲ್ಲರಿಗೂ ಅದೃಷ್ಟ ಬರೋದಿಲ್ಲ. ಕೆಲವೊಮ್ಮೆ ತಾಯಿ ಲಕ್ಷ್ಮಿ ಸೇರಿದಂತೆ ದೇವರ ಕೃಪೆ ನಿಮ್ಮ ಮೇಲಾದ್ರೆ ಕೆಲ ಸೂಚನೆಗಳು ಸಿಗುತ್ತವೆ. ಆ ಸೂಚನೆ ಮೂಲಕ ನಿಮ್ಮ ಮುಂದಿನ ದಿನಗಳು ಶುಭವಾಗಿರಲಿವೆ ಎಂದು ನೀವು ಊಹಿಸಬಹುದು.

ಅಚಾನಕ್ ಆಗಿ ನಮ್ಮ ಕಣ್ಣಿಗೆ ಗೂಬೆ ಕಾಣಿಸಿಕೊಂಡ್ರೆ ಶೀಘ್ರವೇ ನಿಮ್ಮ ಅದೃಷ್ಟ ಬದಲಾಗಲಿದೆ ಎಂಬ ಸೂಚನೆಯಾಗಿದೆ. ನಿಮ್ಮ ಮನೆಗೆ ಆದಷ್ಟು ಬೇಗ ಲಕ್ಷ್ಮಿ ಬರ್ತಾಳೆ.

ಅಚಾನಕ್ ಆಗಿ ನಿಮ್ಮ ವ್ಯಕ್ತಿತ್ವದಲ್ಲಿ ಬದಲಾವಣೆ ಕಂಡು ಬರ್ತಿದ್ದರೂ ನಿಮ್ಮ ಮನೆಗೆ ಸಂಪತ್ತು ಬರಲಿದೆ ಎಂಬ ಸೂಚನೆಯೇ ಆಗಿದೆ. ನಿಮಗೆ ಹಸಿವು ಕಡಿಮೆಯಾಗ್ತಿದ್ದರೆ ಅಥವಾ ಸಾತ್ವಿಕ ಆಹಾರದ ಮೇಲೆ ಪ್ರೀತಿ ಹೆಚ್ಚಾಗಿದ್ದರೆ ಲಕ್ಷ್ಮಿಯ ಆಗಮನ ಸನ್ನಿಹಿತವಾಗಿದೆ ಎಂದುಕೊಳ್ಳಿ.

ಬೆಳಿಗ್ಗೆ ಮನೆಯಿಂದ ಹೊರಗೆ ಬರ್ತಿದ್ದಂತೆ ರಸ್ತೆ ಸ್ವಚ್ಛಗೊಳಿಸುತ್ತಿರುವುದು ಕಂಡ್ರೆ ಅಥವಾ ಪೊರಕೆ ಕಂಡ್ರೆ ಕೂಡ ಮಂಗಳಕರ ಸೂಚನೆಯಾಗಿದೆ.

ಬೆಳಿಗ್ಗೆ ಹಾಸಿಗೆಯಿಂದ ಏಳ್ತಿರುವಾಗ ನಿಮ್ಮ ಕಿವಿಗೆ ಶಂಖದ ಶಬ್ಧ ಕೇಳಿದ್ರೆ ಸಂತೋಷಪಡಿ. ಇದು ಕೂಡ ನಿಮ್ಮ ಮನೆಗೆ ಬೇಗನೇ ಹಣ ಬರ್ತಿದೆ ಎಂಬ ಸೂಚನೆಯಾಗಿದೆ.

ಬೆಳಿಗ್ಗೆ ಬಾಲೆ ಅಥವಾ ಹಸು ಕಣ್ಣಿಗೆ ಬಿದ್ರೂ ಅದನ್ನು ಶಾಸ್ತ್ರಗಳಲ್ಲಿ ಶುಭವೆಂದು ಪರಿಗಣಿಸಲಾಗಿದೆ. ನೀವು ಹೋಗುವ ಕೆಲಸದಲ್ಲಿ ಯಶಸ್ಸು ಸಿಗಲಿದೆ ಎಂಬ ಅರ್ಥವಾಗಿದೆ.

ಕನಸಿನಲ್ಲಿ ನೋಟುಗಳ ಕಂತೆ ಕಂಡ್ರೆ ಲಕ್ಷ್ಮಿ ಮನೆಗೆ ಬರುವ ಸಂಕೇತವಾಗಿದೆ. ಕನಸಿನಲ್ಲಿ ಬಂಗಾರ – ಬೆಳ್ಳಿ ಕಾಣಿಸಿದ್ರೂ ನೀವು ಮುಂದೆ ಸಂಪತ್ತು ಬರಲಿದೆ ಎಂದು ಊಹಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...