alex Certify ಕೊರೊನಾ ರೋಗಿಗಳ ಆಕ್ಸಿಜನ್ ಮಟ್ಟ ಕಡಿಮೆಯಾಗಲು ಕಾರಣವೇನು….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ರೋಗಿಗಳ ಆಕ್ಸಿಜನ್ ಮಟ್ಟ ಕಡಿಮೆಯಾಗಲು ಕಾರಣವೇನು….?

ಕೋವಿಡ್ 19ಗೆ ಕಾರಣವಾಗುವ SARS-CoV-2 ಎಂಬ ವೈರಸ್ ಅಪಕ್ವ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಆಮ್ಲಜನಕವನ್ನು ಕಡಿಮೆ ಮಾಡುತ್ತದೆ. ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಸ್ಟೆಮ್ ಸೆಲ್ ರಿಪೋರ್ಟ್ಸ್ ಜರ್ನಲ್ ನಲ್ಲಿ ಪ್ರಕಟವಾದ ಈ ಅಧ್ಯಯನವು ಅನೇಕ ಕೊರೊನಾ ರೋಗಿಗಳು ಏಕೆ ಹೈಪೋಕ್ಸಿಯಾದಿಂದ ಬಳಲುತ್ತಿದ್ದಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದೆ.

ರಕ್ತದಲ್ಲಿ ಆಮ್ಲಜನಕ ಮಟ್ಟವು ಕಡಿಮೆಯಾಗುವುದು ಕೊರೊನಾ ರೋಗಿಗಳಲ್ಲಿ ಗಮನಾರ್ಹ ಸಮಸ್ಯೆಯಾಗಿದೆ ಎಂದು ಕೆನಡಾದ ಆಲ್ಬರ್ಟಾ ವಿಶ್ವವಿದ್ಯಾಲಯದ ಔಷಧ ಮತ್ತು ದಂತವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಶೋಕ್ರೋಲಾ ಎಲಾಹಿ ಹೇಳಿದ್ದಾರೆ. ಕೆಂಪು ರಕ್ತ ಕಣಗಳ ಉತ್ಪಾದನೆಯ ಮೇಲೆ ವೈರಸ್ ಪರಿಣಾಮ ಬೀರಬಹುದು ಎಂದು ನಾವು ಭಾವಿಸಿದ್ದೇವೆ ಎಂದವರು ಹೇಳಿದ್ದಾರೆ.

ಅಧ್ಯಯನಕ್ಕಾಗಿ 128 ರೋಗಿಗಳ ರಕ್ತವನ್ನು ಪರೀಕ್ಷಿಸಲಾಗಿದೆ. ಇದರಲ್ಲಿ ತೀವ್ರ ಅನಾರೋಗ್ಯಕ್ಕೊಳಗಾಗಿ ಐಸಿಯುವಿನಲ್ಲಿದ್ದವರು, ಮಧ್ಯಮ ರೋಗಲಕ್ಷಣಗಳನ್ನು ಹೊಂದಿರುವವರು ಮತ್ತು ಸೌಮ್ಯ ಲಕ್ಷಣವಿದ್ದು, ಕೆಲವೇ ಗಂಟೆ ಆಸ್ಪತ್ರೆಯಲ್ಲಿದ್ದವರ ರಕ್ತ ಪರೀಕ್ಷೆ ಮಾಡಲಾಗಿದೆ.

ತೀವ್ರ ಅನಾರೋಗ್ಯಕ್ಕೊಳಗಾದ ರೋಗಿಯಲ್ಲಿ ಹೆಚ್ಚು ಅಪಕ್ವವಾದ ಕೆಂಪು ರಕ್ತ ಕಣಗಳು ರಕ್ತ ಪರಿಚಲನೆಗೆ ಸಿಲುಕಿದ್ದವು. ಕೆಲವೊಮ್ಮೆ ರಕ್ತದಲ್ಲಿನ ಒಟ್ಟು ಜೀವಕೋಶಗಳಲ್ಲಿ ಶೇಕಡಾ 60 ರಷ್ಟು ಇದೇ ಇತ್ತು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅಪಕ್ವವಾದ ಆರ್‌ಬಿಸಿಗಳು ಆರೋಗ್ಯಕರ ವ್ಯಕ್ತಿಯ ರಕ್ತದಲ್ಲಿ ಶೇಕಡಾ ಒಂದಕ್ಕಿಂತ ಕಡಿಮೆ ಇತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...