alex Certify BIG NEWS: ಫಾರ್ಮ್ 16 ಇಲ್ಲದೆಯೂ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಐಟಿ ರಿಟರ್ನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಫಾರ್ಮ್ 16 ಇಲ್ಲದೆಯೂ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು ಐಟಿ ರಿಟರ್ನ್

ಐಟಿ ರಿಟರ್ನ್ ಸಲ್ಲಿಸುವ ಬಗ್ಗೆ ಸಾಮಾನ್ಯರಲ್ಲಿ ಗೊಂದಲ ಇದ್ದೇ ಇದೆ. ಫಾರ್ಮ್ 16 ಇಲ್ಲದೇ ಐಟಿ ರಿಟರ್ನ್ ಸಲ್ಲಿಸಬಹುದೇ ಎಂಬ ಪ್ರಶ್ನೆಯೂ ಅನೇಕರಲ್ಲಿದೆ.

ಪ್ರತಿ ಸಂಬಳ ಪಡೆಯುವ ವ್ಯಕ್ತಿಗೆ ತೆರಿಗೆ ವಿಧಿಸಬಹುದಾದ ಆದಾಯ ಮತ್ತು ಟಿಡಿಎಸ್ ಕಾಂಪೊನೆಂಟ್ ತೋರ್ಪಡಿಕೆಯಾಗುವ ಮಹತ್ವದ ದಾಖಲೆ ಫಾರ್ಮ್ 16.

ಸಾಮಾನ್ಯವಾಗಿ ಪ್ರತಿ ಉದ್ಯೋಗದಾತನು ತನ್ನ ಉದ್ಯೋಗಿಗಳಿಗೆ ಫಾರ್ಮ್ 16 ಅನ್ನು ಒದಗಿಸುತ್ತಾನೆ. ಕೆಲವು ಅಪರೂಪದ ಸಂದರ್ಭಗಳಲ್ಲಿ ಉದ್ಯೋಗಿಗೆ ಐಟಿ ಫಾರ್ಮ್ ಸಿಗದಿರಬಹುದು. ಆದರೂ ಉದ್ಯೋಗಿ ಆದಾಯ ತೆರಿಗೆ ರಿಟರ್ನ್ಸ್ ಇ-ಫೈಲ್ ಮಾಡಲು ಅವಕಾಶವಿದೆ.

ಪೇ ಸ್ಲಿಪ್‌ನಲ್ಲಿ ಟೇಕ್ ಹೋಂ ಸಂಬಳ, ಒಟ್ಟು ಸಂಬಳ ಮತ್ತು ಪಿಎಫ್, ಮೆಡಿ-ಕ್ಲೈಮ್, ಟಿಡಿಎಸ್ ಕಡಿತಗಳ ವಿವರ ಒಳಗೊಂಡಿರುತ್ತದೆ. ಅದೇ ರೀತಿ ತೆರಿಗೆ ವಿನಾಯಿತಿ ವಿವರಗಳಿಗಾಗಿ ಫಾರ್ಮ್ 26 ಎಎಸ್ ಅನ್ನು ನೋಡಬಹುದು. ಮತ್ತು ಅದನ್ನು ಪೇ ಸ್ಲಿಪ್‌ನೊಂದಿಗೆ ಹೊಂದಿಸಿದಾಗ ಒಂದು ಚಿತ್ರಣ ಲಭ್ಯವಾಗಲಿದೆ.

ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸುವುದು ತಪ್ಪು; ಸಿಎಂ ಬದಲಾವಣೆ ಮಾಹಿತಿ ಇಲ್ಲ ಎಂದ ರೇಣುಕಾಚಾರ್ಯ

ಸಂಬಳ ಪಡೆಯುವ ನೌಕರರು ತಮ್ಮ ಸಂಬಳದ ಒಂದು ಭಾಗವನ್ನು ಎಚ್‌ಆರ್‌ಎ, ಎಲ್‌ಟಿಎ, ಶಿಕ್ಷಣ ಭತ್ಯೆ, ಮನರಂಜನೆ, ಸಾಗಣೆ ಭತ್ಯೆಗಳಂತೆ ಪಡೆಯುತ್ತಾರೆ. ಐಟಿಆರ್ ಅನ್ನು ಭರ್ತಿ ಮಾಡುವಾಗ ಭತ್ಯೆ ಭಾಗದಲ್ಲಿ ಅವುಗಳ ವಿವರ ದಾಖಲು ಮಾಡಿದ ನಂತರ ತೆರಿಗೆಯನ್ನು ಲೆಕ್ಕಾಚಾರ ಮಾಡಬೇಕು.

ಪಾವತಿಸಬೇಕಾದ ಎಲ್ಲಾ ತೆರಿಗೆ ಕಾಂಪೊನೆಂಟ್ ಆಧಾರದ ಮೇಲೆ ನಿವ್ವಳ ತೆರಿಗೆಯ ಆದಾಯ ಲೆಕ್ಕಹಾಕಬೇಕಾಗುತ್ತದೆ. ಎಲ್ಲಾ ತೆರಿಗೆ ಹೊಣೆಗಾರಿಕೆಯನ್ನು ಲೆಕ್ಕಾಚಾರ ಮಾಡುವ ಪ್ರಕ್ರಿಯೆಯನ್ನುಪೂರ್ಣಗೊಳಿಸಿದ ನಂತರ ಅದನ್ನು ಫಾರ್ಮ್ 26 ಎಎಸ್‌ನಲ್ಲಿ ತೋರಿಸುವವರೆಗೆ ಕಾಯಬೇಕಾಗುತ್ತದೆ. ಅದು ಪಾವತಿಸಿದ ತೆರಿಗೆಗೆ ಹೊಂದಿಕೆಯಾದರೆ, ಐಟಿಆರ್ ಅನ್ನು ಇ-ಫೈಲ್ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...