ಅಶ್ಲೀಲ ವಿಡಿಯೋ ಪ್ರಕರಣದ ಅಡಿಯಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬುಧವಾರ ಮತ್ತೊಬ್ಬ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿದ್ದಾರೆ.
ಪೊಲೀಸರಿಗೆ ಈ ಯುವತಿ ನೀಡಿದ ಹೇಳಿಕೆಯಲ್ಲಿ, ಆಕೆಗೆ ಕೆಲವು ದೃಶ್ಯಗಳನ್ನು ಮಾತ್ರ ಚಿತ್ರಿಕರಿಸೋದಾಗಿ ಹೇಳಲಾಗಿತ್ತು. ಮಾತ್ರವಲ್ಲದೇ ಯಾವುದೇ ಕಾರಣಕ್ಕೂ ಆಕೆಯ ಗುಪ್ತಾಂಗಗಳನ್ನು ಚಿತ್ರೀಕರಿಸೋದಿಲ್ಲ ಎಂದು ಹೇಳಿದ್ದರು. ಇದಕ್ಕಾಗಿ ಆಕೆ ಒಪ್ಪಿಗೆ ನೀಡಿದ್ದಳು.
ಈ ಶೂಟಿಂಗ್ಗಾಗಿ ಆಕೆಗೆ ಕೆಲ ಸಾವಿರ ರೂಪಾಯಿ ಸಂಭಾವನೆಯನ್ನೂ ನೀಡಲಾಗಿತ್ತು. ಇದಾಗಿ ಸ್ವಲ್ಪ ದಿನಗಳ ಬಳಿಕ ಆಕೆಯ ಸ್ನೇಹಿತರು ಆಕೆಗೆ ಕರೆ ಮಾಡಿ ನಿನ್ನ ಅಶ್ಲೀಲ ವಿಡಿಯೋ ಹಾಟ್ಶಾಟ್ ಆಪ್ನಲ್ಲಿ ಲಭ್ಯವಿದೆ ಎಂದು ಹೇಳಿದ್ದರು. ಇದಾದ ಬಳಿಕವೇ ಆಕೆಗೆ ಯಾವುದೇ ಎಡಿಟ್ ಮಾಡದೇ ಆಕೆಯ ಗುಪ್ತಾಂಗಗಳ ವಿಡಿಯೋಗಳನ್ನೆಲ್ಲ ಹರಿಬಿಟ್ಟಿರೋದು ತಿಳಿದಿದೆ.
ಕೊರೊನಾ ಸಂಕಷ್ಟದ ನಡುವೆಯೇ ಪುರಿ ಜಗನ್ನಾಥ ದೇಗುಲ ಆರಂಭಕ್ಕೆ ತಯಾರಿ: ಭಕ್ತರು ಪಾಲಿಸಬೇಕಿದೆ ಈ ಷರತ್ತು
ಸಾಕ್ಷ್ಯ ಸಂಗ್ರಹದ ಜೊತೆಯಲ್ಲಿ ಪೊಲೀಸರು ಹಾಟ್ಶಾಟ್ ಆ್ಯಪ್ನ ಆದಾಯ ಹಾಗೂ ರಾಜ್ ಕುಂದ್ರಾ ಬ್ಯಾಂಕ್ ಖಾತೆಗಳ ನಡುವಿನ ಲಿಂಕ್ನ್ನು ಜಾಲಾಡುತ್ತಿದ್ದಾರೆ. ಈ ವಿಚಾರದಲ್ಲಿ ಪೊಲೀಸರಿಗೆ ಕೆಲ ಅಡೆತಡೆಗಳು ಉಂಟಾಗುತ್ತಿದೆ. ಆದಾಯದ ಹಣ ಕುಂದ್ರಾ ಖಾತೆಗೆ ಯಾವ ಮಾರ್ಗದಲ್ಲಿ ಹೋಗುತ್ತಿತ್ತು ಅನ್ನೋದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
ಮುಂಬೈ ಪೊಲೀಸರು ಇಲ್ಲಿಯವರೆಗೆ ಹಾಟ್ಶಾಟ್ ಆದಾಯವು ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಯ ವೈಯಕ್ತಿಕ ಖಾತೆಗೆ ಸಂದಾಯವಾಗಿರೋದ್ರ ಬಗ್ಗೆ ಯಾವುದೇ ಪುರಾವೆಯನ್ನು ಪತ್ತೆ ಮಾಡಿಲ್ಲ. ಇದು ಮಾತ್ರವಲ್ಲದೇ ಹಾಟ್ ಶಾಟ್ನ ಆದಾಯ ಹಾಗೂ ರಾಜ್ಕುಂದ್ರಾ ದಂಪತಿಯ ಯಾವುದೇ ಬ್ಯಾಂಕ್ ಖಾತೆಯ ಜೊತೆ ಸಂಪರ್ಕ ಇರೋದು ಇಲ್ಲಿಯವರೆಗೂ ಪೊಲೀಸರ ಕಣ್ಣಿಗೆ ಬಿದ್ದಿಲ್ಲ. ಬ್ರಿಟನ್ ಮೂಲದ ಬಂಧಿತ ಪ್ರದೀಪ್ ಬಕ್ಷಿ ಹಾಟ್ಶಾಟ್ನ ಆರ್ಥಿಕ ವ್ಯವಹಾರಗಳನ್ನ ನೋಡಿಕೊಳ್ತಿದ್ದ.