alex Certify ’ಮೈ ಅಟಲ್ ಹೂಂ’ ಚಿತ್ರದಲ್ಲಿ ವಾಜಪೇಯಿ ಗೆಟಪ್‌ನಲ್ಲಿ ಮಿಂಚುತ್ತಿರುವ ಪಂಕಜ್ ತ್ರಿಪಾಠಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’ಮೈ ಅಟಲ್ ಹೂಂ’ ಚಿತ್ರದಲ್ಲಿ ವಾಜಪೇಯಿ ಗೆಟಪ್‌ನಲ್ಲಿ ಮಿಂಚುತ್ತಿರುವ ಪಂಕಜ್ ತ್ರಿಪಾಠಿ

’ಮೈ ಅಟಲ್ ಹೂಂ’ ಚಿತ್ರದ ಟೀಸರ್‌ಗಳ ಮೂಲಕ ತಮ್ಮ ಮುಂಬರುವ ಪ್ರಾಜೆಕ್ಟ್‌ ಬಗ್ಗೆ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಕೆರಳಿಸಿದ ನಟ ಪಂಕಜ್‌ ತ್ರಿಪಾಠಿ ಇದೀಗ ಶೂಟಿಂಗ್ ಸೆಟ್‌ನಲ್ಲಿನ ಚಿತ್ರವೊಂದನ್ನು ಮಾಧ್ಯಮಗಳಿಗೆ ಶೇ‌ರ್‌ ಮಾಡಿಕೊಂಡಿದ್ದಾರೆ.

ಚಿತ್ರದ ಭಾಗವೊಂದರ ಚಿತ್ರೀಕರಣಕ್ಕೆಂದು ಫಾರ್ಮಲ್ ಶರ್ಟ್ ಹಾಗೂ ಪ್ಯಾಂಟ್‌ನಲ್ಲಿದ್ದ ತ್ರಿಪಾಠಿ, ಕ್ಲೀನ್ ಶೇವ್‌ ಹಾಗೂ ಬಾಚಿದ ತಲೆಯೊಂದಿಗೆ ತಮ್ಮ ವ್ಯಾನಿಟಿಗೆ ತೆರಳುವವರಿದ್ದರು.

ಡಿಸೆಂಬರ್‌ 2022ರಲ್ಲಿ ಚಿತ್ರದ ಪೋಸ್ಟರ್‌ ಸರಣಿಯನ್ನು ಹಂಚಿಕೊಳ್ಳುವ ಮೂಲಕ ತಮ್ಮ ಹೊಸ ಪ್ರಾಜೆಕ್ಟ್ ಕುರಿತು ಘೋಷಣೆ ಮಾಡಿದ್ದರು ಪಂಕಜ್.

“ಇಂಥ ಮಾನವೀಯ ರಾಜಕಾರಣಿಯ ಪಾತ್ರ ನಿರ್ವಹಿಸುವುದು ಒಂದು ಗೌರವವಿದ್ದಂತೆ. ಅವರು ಬರೀ ರಾಜಕಾರಣಿ ಮಾತ್ರವಲ್ಲ, ಒಳ್ಳೆಯ ಬರಹಗಾರ ಹಾಗೂ ಕವಿ ಸಹ ಆಗಿದ್ದರು. ಅಟಲ್‌ಜೀಯವರ ವ್ಯಕ್ತಿತ್ವಕ್ಕೆ ನನ್ನನ್ನು ತಂದುಕೊಳ್ಳಲು ಬಹಳ ಶ್ರಮ ಹಾಕಬೇಕೆಂದು ನನಗೆ ಗೊತ್ತಿತ್ತು. ನನ್ನ ಹೊಸ ಪಾತ್ರಕ್ಕೆ ನನ್ನ ಉತ್ಸಾಹ ಹಾಗೂ ಬದ್ಧತೆಗಳಿಂದ ಜೀವ ತುಂಬುವ ನಿರೀಕ್ಷೆ ನನ್ನದು,” ಎಂದು ಪಂಕಜ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...