alex Certify 30 ವರ್ಷಗಳ ಬಳಿಕ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ಬಿಚ್ಚಿಟ್ಟ ಕ್ರಿಕೆಟಿಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30 ವರ್ಷಗಳ ಬಳಿಕ ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆ ಬಿಚ್ಚಿಟ್ಟ ಕ್ರಿಕೆಟಿಗ

ಮೆಲ್ಬೋರ್ನ್: 1985ರಲ್ಲಿ 19 ವರ್ಷದೊಳಗಿನವರ ಕ್ರಿಕೆಟ್ ಪ್ರವಾಸದ ವೇಳೆ ತಂಡದ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಜೇಮಿ ಮಿಚೆಲ್ ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಆಸ್ಟ್ರೇಲಿಯಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈಗ 55 ವರ್ಷದ ಮಿಚೆಲ್ ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಎಬಿಸಿ) ಸಂದರ್ಶನದಲ್ಲಿ ಈ ಆರೋಪ ಮಾಡಿದ್ದಾರೆ. ತಂಡದ ವೈದ್ಯರು ತನಗೆ ನಿದ್ರೆ ಮಾತ್ರೆ ನೀಡಿದ ಬಳಿಕ ಕಿರುಕುಳ ನೀಡಿದ್ದಾಗಿ ಅವರು ಆರೋಪಿಸಿದ್ದಾರೆ.

ಆ ಪ್ರವಾಸದಲ್ಲಿ ಮಿಚೆಲ್ ಗೆ 18 ವರ್ಷ ವಯಸ್ಸಾಗಿತ್ತು. ಶ್ರೀಲಂಕಾ ಪ್ರವಾಸವು ತನ್ನ ಜೀವನದುದ್ದಕ್ಕೂ ಆಘಾತ ಮತ್ತು ಸಂಕಟವನ್ನು ಉಂಟುಮಾಡಿದೆ. ಪ್ರವಾಸದಲ್ಲಿ ಏನಾಯಿತು ಎಂಬುದರ ಕುರಿತು ಉತ್ತರಗಳನ್ನು ಹುಡುಕುತ್ತಿದ್ದೇನೆ ಎಂದು ಹೇಳಿದ್ದಾರೆ. ಕ್ರಿಕೆಟ್ ಜೀವನದಲ್ಲಿ ಉತ್ತುಂಗಕ್ಕೆ ಏರುವ ಬದಲು, ಈ ಪ್ರವಾಸವು ತನಗೆ ಆಘಾತ ಮತ್ತು ದುಃಖವನ್ನು ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಅವರು ಕ್ರಿಕೆಟ್ ಆಸ್ಟ್ರೇಲಿಯಾದಿಂದ ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಮುಂದಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...