alex Certify ನೆಚ್ಚಿನ ಪೊಲೀಸ್​ ಅಧಿಕಾರಿಗೆ ಕಣ್ಣೀರಿಟ್ಟು ಬೀಳ್ಕೊಟ್ಟ ಜನತೆ: ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಹೃದಯಸ್ಪರ್ಶಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಚ್ಚಿನ ಪೊಲೀಸ್​ ಅಧಿಕಾರಿಗೆ ಕಣ್ಣೀರಿಟ್ಟು ಬೀಳ್ಕೊಟ್ಟ ಜನತೆ: ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಹೃದಯಸ್ಪರ್ಶಿ ವಿಡಿಯೋ

ಪೊಲೀಸ್​ ಅಧಿಕಾರಿಗಳು ಅಂದರೆ ಸಾಕು ಹೆದರುವವರೇ ಹೆಚ್ಚು. ತಮ್ಮ ಖಡಕ್​ ವರ್ತನೆಯ ಮೂಲಕವೇ ಪೊಲೀಸರು ಸಾರ್ವಜನಿಕರಲ್ಲಿ ಒಂದು ಭಯವನ್ನು ಸೃಷ್ಟಿಸಿರ್ತಾರೆ.

ಆದರೆ ಪೊಲೀಸರ ಜನಸ್ನೇಹಿ ಆಡಳಿತ ಕೂಡ ಅವರ ಮೇಲೆ ಭಯವನ್ನು ಮಾತ್ರ ಹುಟ್ಟಿಸದೇ ಗೌರವವನ್ನೂ ಹೆಚ್ಚಿಸುತ್ತದೆ. ಇದೇ ಮಾತಿಗೆ ಸಾಕ್ಷಿ ಎಂಬಂತೆ ಗುಜರಾತ್​ನಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಸಾರ್ವಜನಿಕರಿಂದ ಭಾವನಾತ್ಮಕ ವಿದಾಯವನ್ನು ಸ್ವೀಕರಿಸಿದ್ದಾರೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಗುಜರಾತ್​ ಪೊಲೀಸ್​ ಅಧಿಕಾರಿಯ ಸೇವಾ ಮನೋಭಾವವನ್ನು ಜನರು ಎಷ್ಟು ಮೆಚ್ಚಿದ್ದಾರೆ ಎಂಬುದನ್ನು ತೋರಿಸುತ್ತಿದೆ.

ಸೋಶಿಯಲ್​ ಮೀಡಿಯಾದಲ್ಲಿ ಸಬ್ ​ಇನ್​ಸ್ಪೆಕ್ಟರ್​ಗೆ ಬೀಳ್ಕೋಡುವ ವೈರಲ್​ ವಿಡಿಯೋವೊಂದನ್ನು ನೀವು ನೋಡಿದ್ದಿರಬಹುದು. ಈ ವಿಡಿಯೋದರಲ್ಲಿರುವ ಪೊಲೀಸ್​ ಅಧಿಕಾರಿ ಹೆಸರು ವಿಶಾಲ್​ ಪಟೇಲ್​. ಇವರನ್ನು ಬೀಳ್ಕೊಡುವ ವೇಳೆಯಲ್ಲಿ ಸಾರ್ವಜನಿಕರು ಕಂಬನಿ ಮಿಡಿದಿದ್ದಾರೆ.

ಪೊಲೀಸ್​ ಅಧಿಕಾರಿಯನ್ನು ಬೀಳ್ಕೊಡಲು ಸಾಕಷ್ಟು ಸಂಖ್ಯೆಯಲ್ಲಿ ನೆರೆದ ಜನರು ಪುಷ್ಪಮಳೆ ಹರಿಸಿದ್ರು. ಜನರ ಪ್ರೀತಿಗೆ ಕರಗಿದ ಪೊಲೀಸ್​ ಅಧಿಕಾರಿ ಕೂಡ ಭಾವುಕರಾಗಿದ್ದನ್ನು ಕಾಣಬಹುದಾಗಿದೆ. ಅನೇಕರು ಪಟೇಲ್​ರನ್ನು ಆಲಂಗಿಸಿದ್ರು. ಅನೇಕರು ವಿಶಾಲ್​​ ಪಟೇಲ್​ ಆಶೀರ್ವಾದವನ್ನೂ ಪಡೆದಿದ್ದಾರೆ. ಇನ್ನೂ ಕೆಲವರು ಕಂಬನಿ ಮಿಡಿದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...