alex Certify ರಸ್ತೆ ಮಧ್ಯದಲ್ಲಿ ಕಾದಾಟಕ್ಕಿಳಿದ ದೈತ್ಯ ಹಲ್ಲಿಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮಧ್ಯದಲ್ಲಿ ಕಾದಾಟಕ್ಕಿಳಿದ ದೈತ್ಯ ಹಲ್ಲಿಗಳು…!

ರಸ್ತೆಯ ಮಧ್ಯದಲ್ಲಿ ಎರಡು ಲಿಜರ್ಡ್‌​ (ಹಲ್ಲಿಗಳ ಜಾತಿಗೆ ಸೇರಿದ ಸರೀಸೃಪ) ಕುಸ್ತಿಯಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೊದಲ ನೋಟದಲ್ಲಿ ಅವರೆಡು ಒಂದನ್ನೊಂದು ತಬ್ಬಿಕೊಂಡಂತೆ ಕಾಣಿಸುತ್ತದೆ. ಆದರೆ, ಅವು ಪೈಪೋಟಿಗೆ ಬಿದ್ದಂತೆ ಗುದ್ದಾಡುವುದು ಕಾಣಿಸುತ್ತದೆ. ಇದು ನಡೆದಿದ್ದು ಥೈಲ್ಯಾಂಡ್​ನಲ್ಲಿ, ಈ ಬೀದಿ ಜಗಳದ ವಿಡಿಯೋವನ್ನು 8 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ತಮ್ಮ ಜಗಳವನ್ನು ಅವು 30 ನಿಮಿಷಗಳ ಕಾಲ ರಸ್ತೆ ನಡುವೆ ಮುಂದುವರಿಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಮೊದಲು ಅವೆರೆಡು ಗೆಳೆಯ – ಗೆಳತಿಯರು ಎಂದು ನಾನು ಭಾವಿಸಿದೆ. ಆದರೆ ನಂತರ ಅವರು ನಿಜವಾಗಿಯೂ ಜಗಳವಾಡುತ್ತಿದ್ದಾರೆಂದು ಯಾರೋ ಹೇಳಿದರು ಎಂದು ಪ್ರತ್ಯಕ್ಷದರ್ಶಿ ಚಾಲಕರೊಬ್ಬರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಥೈಲ್ಯಾಂಡ್​ನಲ್ಲಿ ಇದು ಸಾಮಾನ್ಯ ದೃಶ್ಯವಾಗಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ವಿಭಾಗದಲ್ಲಿ ಹೇಳಿದ್ದಾರೆ.

“ನಾನು ವಿವರಣೆಯನ್ನು ಓದುವ ಮೊದಲೇ ಅದು ಥೆೈಲ್ಯಾಂಡ್​ನದ್ದು ಎಂದು ತಿಳಿದಿತ್ತು. ನಾನು ಅಲ್ಲಿ ವಾಸಿಸುತ್ತಿದ್ದಾಗ ಇಂತವನ್ನು ನೋಡಿದ್ದೇನೆ ಎಂದು ಇನ್ನೊಬ್ಬ ನೆಟ್ಟಿಗರು ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...