alex Certify ಪರಮಾಣು ಸಮ್ಮಿಲನದಿಂದ ಯುರೋಪ್‌ ವಿಜ್ಞಾನಿಗಳು ಉತ್ಪಾದಿಸಿದ ಶಕ್ತಿ ಎಷ್ಟು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಮಾಣು ಸಮ್ಮಿಲನದಿಂದ ಯುರೋಪ್‌ ವಿಜ್ಞಾನಿಗಳು ಉತ್ಪಾದಿಸಿದ ಶಕ್ತಿ ಎಷ್ಟು ಗೊತ್ತಾ….?

ಮೊದಲಿನಿಂದಲೂ ಅಣುಶಕ್ತಿ, ಅಣ್ವಸ್ತ್ರಗಳ ವಿಶ್ವಾದ್ಯಂತ ಭಾರಿ ಕುತೂಹಲದಿಂದ ಗೌಪ್ಯವಾಗಿ ಅನ್ವೇಷಣೆಗಳು ನಡೆಯುತ್ತಲೇ ಇವೆ. ಯಾರ ಬಳಿಯಲ್ಲಿ ಹೆಚ್ಚು ಅಣ್ವಸ್ತ್ರಗಳು ಇವೆಯೋ ಅವರೇ ಪ್ರಭಾವಿಶಾಲಿಗಳು, ಜಗತ್ತನ್ನು ಆಳುವವರು ಎಂಬ ಭಾವನೆ ಇದೆ. ಹಾಗಾಗಿ ಅಮೆರಿಕ, ರಷ್ಯಾ, ಸೌದಿ ಅರೇಬಿಯಾ, ಚೀನಾ, ಉತ್ತರ ಕೊರಿಯಾಗಳು ಗೌಪ್ಯವಾಗಿ ಅಣುಬಾಂಬ್‌ಗಳನ್ನು ತಯಾರಿಸಿ ಶೇಖರಿಸಿಡುತ್ತಿವೆ.

ಈ ಅಣ್ವಸ್ತ್ರಗಳಲ್ಲಿ ಮೂಲತಃ ನಡೆಯುವ ಕ್ರಿಯೆ ಎಂದರೆ ಯುರೇನಿಯಂ ಎಂಬ ರಾಸಾಯನಿಕದ ಕಣಗಳ ಬೇರ್ಪಡುವಿಕೆ ಅಥವಾ ಒತ್ತಡದ ಸಮ್ಮಿಲನ. ಎರಡೂ ಕ್ರಿಯೆಗಳಿಂದ ಭಾರಿ ಪ್ರಮಾಣದ ಶಕ್ತಿ ಉತ್ಪಾದನೆ ಆಗುತ್ತದೆ. ಇದು ವಿನಾಶಕಾರಿ ಕೂಡ ಹೌದು. ಆದರೆ, ಈ ಶಕ್ತಿಯನ್ನು ಶೇಖರಿಸಿ ವಿದ್ಯುತ್‌ ಉತ್ಪಾದನೆಗೆ ಬಳಸುವ ತಂತ್ರಜ್ಞಾನ ಅನೇಕ ಕಡೆಗಳಲ್ಲಿ ಇದೆ.

ಸಣ್ಣ ಗಾತ್ರದ ಯುರೇನಿಯಂನಿಂದ ವರ್ಷಗಟ್ಟಲೆ ವಿದ್ಯುತ್‌ ಪಡೆಯಬಹುದು ! ನಕ್ಷತ್ರಗಳು ಬೆಳಗುವಂತೆ ಮಾಡುವ ಶಕ್ತಿಯೂ ಇದೇ ಆಗಿದೆ. ವಿಶೇಷವೆಂದರೆ, ಕಿಂಚಿತ್ತೂ ಕೂಡ ನಷ್ಟವಿಲ್ಲದ ಮತ್ತು ಸ್ವಚ್ಛ ವಿದ್ಯುತ್‌ ಉತ್ಪಾದನೆ ಈ ಪ್ರಕ್ರಿಯೆಯಿಂದ ಮಾತ್ರವೇ ಸಾಧ್ಯ.

ಎಲೆಕ್ಟ್ರಿಕ್ ವಾಹನ ಖರೀದಿ ಕುರಿತಂತೆ ಅಚ್ಚರಿಯ ಮಾಹಿತಿ ಬಹಿರಂಗ

ಇತ್ತೀಚೆಗೆ ಇಂತಹದ್ದೇ ಒಂದು ಯುರೇನಿಯಂ ಕಣವನ್ನು ಬಳಸಿ ಯುರೋಪಿನಲ್ಲಿ ವಿಜ್ಞಾನಿಗಳು ಸಂಶೋಧನೆ ನಡೆಸಿ ಸಮ್ಮಿಲನ ಪ್ರಕ್ರಿಯೆ ಮೂಲಕ 59 ಮೆಗಾ ಜೌಲ್ಸ್‌ (ಎಂಜೆ) ಪ್ರಮಾಣದ ಶಕ್ತಿಯನ್ನು ಉತ್ಪಾದನೆ ಮಾಡಿದ್ದಾರೆ. ಇದು ಈವರೆಗಿನ ಅತ್ಯಂತ ಹೆಚ್ಚು ಪ್ರಮಾಣದ ಶಕ್ತಿ ಉತ್ಪಾದನೆ ಎಂಬ ದಾಖಲೆ ಕೂಡ ಬರೆದಿದೆ. ಆಕ್ಸ್‌ಫರ್ಡ್‌ ಸಮೀಪದ ಕಲ್‌ಹ್ಯಾಮ್‌ನಲ್ಲಿರುವ ಯುಕೆ ಅಟಾಮಿಕ್‌ ಎನರ್ಜಿ ಆಯೋಗದಲ್ಲಿ ಸಮ್ಮಿಲನ ಪ್ರಕ್ರಿಯೆ ನಡೆದಿದೆ.

1997 ರಲ್ಲಿ ಇದೇ ಮಾದರಿ ಪರಮಾಣು ಸಮ್ಮಿಲನದ ಮೂಲಕ 22 ಮೆಗಾ ಜೌಲ್ಸ್‌ ಶಕ್ತಿ ಉತ್ಪಾದನೆ ಮಾಡಲಾಗಿದ್ದು ಈವರೆಗಿನ ದಾಖಲೆ ಎನಿಸಿತ್ತು. ಸದ್ಯ ಯುರೋಪ್‌ನಲ್ಲಿ ನಡದಿರುವ ಸಮ್ಮಿಲನ ಪ್ರಕ್ರಿಯೆ ನೇತೃತ್ವ ವಹಿಸಿದ್ದ ವಿಜ್ಞಾನಿ ಇಯಾನ್‌ ಚಾಪ್‌ಮ್ಯಾನ್‌ ಅವರ ಪ್ರಕಾರ, ಕಾರ್ಬನ್‌ ಹೊರಸೂಸುವಿಕೆ ಗಣನೀಯವಾಗಿ ಕಡಿಮೆ ಮಾಡಿ, ಅಪಾರ ಪ್ರಮಾಣದ ಶಕ್ತಿ ಸಂಗ್ರಹ ಹಾಗೂ ವಿದ್ಯುತ್‌ ಪೂರೈಕೆಗಾಗಿ ಜಗತ್ತಿಗೆ ಇರುವ ಏಕೈಕ ಮಾರ್ಗವೆಂದರೆ ಅದು ಪರಮಾಣು ಸಮ್ಮಿಲನ ಪ್ರಕ್ರಿಯೆ ಮಾತ್ರ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...