alex Certify ಒಮಿಕ್ರಾನ್ ಆತಂಕದಲ್ಲಿರುವವರಿಗೆ ವಿಶ್ವಸಂಸ್ಥೆ ನೀಡಿದೆ ನೆಮ್ಮದಿ ಸುದ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್ ಆತಂಕದಲ್ಲಿರುವವರಿಗೆ ವಿಶ್ವಸಂಸ್ಥೆ ನೀಡಿದೆ ನೆಮ್ಮದಿ ಸುದ್ಧಿ

ಕೋವಿಡ್-19ನ ಒಮಿಕ್ರಾನ್ ರೂಪಾಂತರಿಯಿಂದ ಅಷ್ಟೇನೂ ಗಂಭೀರ ಪರಿಣಾಮಗಳು ಸದ್ಯದ ಮಟ್ಟಿಗೆ ಆಗೋದಿಲ್ಲ ಎಂದು ಐರೋಪ್ಯ ಒಕ್ಕೂಟದ ವೈದ್ಯಕೀಯ ಅಂಗ ತಿಳಿಸಿದೆ. ಇದೇ ವೇಳೆ, ಸಿರಿವಂತ ದೇಶಗಳು ತಮ್ಮಲ್ಲಿ ಸಂಗ್ರಹಿಸಿಟ್ಟುಕೊಂಡಿರುವ ಲಸಿಕೆಗಳನ್ನು ಮತ್ತೊಮ್ಮೆ ಬಳಸುವುದರ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

ಡೆಲ್ಟಾಗಿಂತಲೂ ಒಮಿಕ್ರಾನ್ ಅಪಾಯಕಾರಿಯೇನಲ್ಲ ಎಂಬ ಬಗ್ಗೆ ಒಂದಷ್ಟು ಸಾಕ್ಷ್ಯಗಳು ಸಿಕ್ಕಿವೆ ಎಂದು ವಿಶ್ವ ಆರೋಗ್ಯ ಸಂ‌ಸ್ಥೆ ತಿಳಿಸಿದ ಬೆನ್ನಲ್ಲೇ ಐರೋಪ್ಯ ಮದ್ದು ಸಂಸ್ಥೆ ತಿಳಿಸಿದೆ.

“ಒಮಿಕ್ರಾನ್ ಪ್ರಕರಣಗಳಲ್ಲಿ ಬಹುತೇಕ ಮಂದಗಾಮಿಯಾಗಿವೆ, ಕೋವಿಡ್‌ನ ಇತರೆ ಎಲ್ಲಾ ಅವತಾರಿಗಳು ಇದುವರೆಗೂ ಮಾಡುತ್ತಿರುವ ಹಾನಿಗಿಂತ ಒಮಿಕ್ರಾನ್‌ನ ಉಪಟಳ ಭಿನ್ನವಾಗಿದೆಯೇ ಎಂದು ಅರಿಯಲು ಇನ್ನಷ್ಟು ಸಾಕ್ಷ್ಯಗಳು ಬೇಕಾಗುತ್ತವೆ,” ಎಂದು ಇಎಂಎನ ಜೀವಶಾಸ್ತ್ರ ಆರೋಗ್ಯ ವಿಪತ್ತುಗಳು ಹಾಗೂ ಲಸಿಕಾ ವ್ಯೂಹಗಳ ಇಲಾಖೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಇದೇ ವೇಳೆ, ಬ್ರಿಟನ್, ಜರ್ಮನಿಯಂಥ ಸಿರಿವಂತ ದೇಶಗಳು ಚಳಿಗಾಲದ ನಡುವೆ ಸೋಂಕಿನ ಪಸರುವಿಕೆಯಿಂದ ಪರದಾಡುತ್ತಿವೆ. ಎರಡೂ ದೇಶಗಳಲ್ಲಿ ಸೋಂಕಿನ ಪಸರುವಿಕೆ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಬಂಧಗಳನ್ನು ಹೇರಲಾಗಿದ್ದು, ಆರ್ಥಿಕ ಹಿನ್ನಡೆಯ ಭೀತಿ ಎದುರಾಗಿದೆ.

ಪೈಜ಼ರ್‌ ಹಾಗೂ ಬಯೋಎನ್‌ಟೆಕ್‌ ಕಂಪನಿಗಳು ಅದಾಗಲೇ ತಮ್ಮ ಮೂರನೇ ಚುಚ್ಚುಮದ್ದು ಅಭಿವೃದ್ಧಿಪಡಿಸಿದ್ದು, ಅದು ಒಮಿಕ್ರಾನ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ತಿಳಿಸಿವೆ.

ಆದರೆ ಒಮಿಕ್ರಾನ್‌ನ ಮೊದಲ ಪ್ರಕರಣ ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ, ’ತೀವ್ರತೆಯ ಪ್ರಕರಣಗಳು ಕಡಿಮೆ ಇವೆ’ ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಇಷ್ಟಿದ್ದರೂ ಸಹ ಆಫ್ರಿಕಾ ಖಂಡದ 1.2 ಶತಕೋಟಿ ಜನಸಂಖ್ಯೆಯ 7.8%ನಷ್ಟು ಜನರಿಗೆ ಮಾತ್ರವೇ ಕೋವಿಡ್ ಲಸಿಕೆ ನೀಡಲಾಗಿದ್ದು, ಇದೇ ವೇಳೆ ಯೂರೋಪ್ ಒಂದರಲ್ಲೇ 60 ಕೋಟಿಯಷ್ಟು ಲಸಿಕೆಗಳನ್ನು ನೀಡಲಾಗಿದೆ ಎಂದು ಇಎಂಎ ಅಂಕಿಅಂಶಗಳು ತಿಳಿಸುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...