alex Certify ಈ ರೋಗಿಗಳು ಅಪ್ಪಿತಪ್ಪಿಯೂ ಹೊಟ್ಟೆ ಮೇಲೆ ಮಲಗಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರೋಗಿಗಳು ಅಪ್ಪಿತಪ್ಪಿಯೂ ಹೊಟ್ಟೆ ಮೇಲೆ ಮಲಗಬೇಡಿ

ಅನೇಕರು ಹೊಟ್ಟೆಯ ಮೇಲೆ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಹೊಟ್ಟೆ ಕೆಳಗೆ ಹಾಕಿ ಮಲಗದೆ ಹೋದ್ರೆ ಅವರಿಗೆ ನಿದ್ರೆ ಬರುವುದಿಲ್ಲ. ಆದ್ರೆ ಎಲ್ಲರೂ ಹೀಗೆ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ವಿಜ್ಞಾನಿಗಳ ಪ್ರಕಾರ, ಅಪಸ್ಮಾರ ರೋಗಿಗಳು ತಮ್ಮ ಹೊಟ್ಟೆಯ ಮೇಲೆ ಮಲಗುವ ಅಭ್ಯಾಸವನ್ನು ಬಿಡುವುದು ಬಹಳ ಒಳ್ಳೆಯದು.

ಹೊಟ್ಟೆ ಕೆಳಗೆ ಹಾಕಿ ಮಲಗುವ ಅಪಸ್ಮಾರ ರೋಗಿಗಳು ಹಠಾತ್ ಸಾವಿಗೆ ಒಳಗಾಗುವುದು ಹೆಚ್ಚೆಂದು ತಜ್ಞರು ಹೇಳಿದ್ದಾರೆ. ಅಪಸ್ಮಾರವು ಮೆದುಳಿನ ಕಾಯಿಲೆಯಾಗಿದ್ದು, ರೋಗಿಯು ಆಗಾಗ್ಗೆ ಅನಾರೋಗ್ಯಕ್ಕೊಳಗಾಗ್ತಾರೆ. ಅಪಸ್ಮಾರದ ಬಹುತೇಕ ಪ್ರಕರಣಗಳ ಕಾರಣ ತಿಳಿದು ಬರುವುದಿಲ್ಲ. ಕೆಲವು ಪ್ರಕರಣಗಳಲ್ಲಿ ಮೆದುಳಿನ ಗಾಯ, ಲಕ್ವ, ಮೆದುಳಿನ ಗೆಡ್ಡೆಗಳು, ಮೆದುಳಿನ ಸೋಂಕುಗಳು ಕಾರಣವಾಗಿರುತ್ತವೆ.

ಪ್ರಪಂಚದಾದ್ಯಂತ ಸುಮಾರು 50 ಮಿಲಿಯನ್ ಜನರು ಅಪಸ್ಮಾರ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇಲಿನಾಯ್ಸ್‌ ನ ಚಿಕಾಗೋ ವಿಶ್ವವಿದ್ಯಾಲಯದ ಡಾ. ಜೇಮ್ಸ್ ಟಾವೊ ಪ್ರಕಾರ, ಅನಿಯಂತ್ರಿತ ಅಪಸ್ಮಾರದಲ್ಲಿ ಸಾವು ಸಾಮಾನ್ಯವಾಗಿ ನಿದ್ರೆಯ ಸಮಯದಲ್ಲಾಗುತ್ತದೆ. ಈ ಅಧ್ಯಯದ ಪ್ರಕಾರ, ಅಪಸ್ಮಾರದ ರೋಗಿಗಳಲ್ಲಿ ಶೇಕಡಾ 73ರಷ್ಟು  ಹೊಟ್ಟೆ ಮೇಲೆ ಮಲಗಿದಾಗ ಸಾವನ್ನಪ್ಪಿದ್ದಾರೆ. ಉಳಿದ ಶೇಕಡಾ 27ರಷ್ಟು ಸಾವು ಸಾಮಾನ್ಯ ಭಂಗಿಯಲ್ಲಿ ಮಲಗಿದಾಗ ಆಗಿದೆ.

ಅಪಸ್ಮಾರದ ಆಕಸ್ಮಿಕ ಸಾವನ್ನು ತಡೆಯಲು ಒಂದು ಪ್ರಮುಖ ತಂತ್ರವೆಂದ್ರೆ ಬೆನ್ನಿನ ಮೇಲೆ ಮಲಗುವುದು. ಮಕ್ಕಳು ಮಾತ್ರವಲ್ಲ ವಯಸ್ಕರು ಕೂಡ ಬೆನ್ನಿನ ಮೇಲೆ ಮಲಗುವುದು ಉತ್ತಮ ಅಭ್ಯಾಸವೆಂದು ತಜ್ಞರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...