alex Certify 1 ಲಕ್ಷ ರೂ. ಲಂಚ ಪಡೆಯುವ ವೇಳೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಫ್‌ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1 ಲಕ್ಷ ರೂ. ಲಂಚ ಪಡೆಯುವ ವೇಳೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಪಿಎಫ್‌ ಅಧಿಕಾರಿ

ಹರಿಯಾಣದ ಜಗಧಾರಿ ಮೂಲದ ಪಿಎಫ್‌ ಇಲಾಖೆಯ ಇಪಿಎಫ್‌ಒ ಕಚೇರಿಯಲ್ಲಿ ನಿರ್ವಹಿಸುವ ಅಧಿಕಾರಿಯೊಬ್ಬರು 1 ಲಕ್ಷ ರೂ. ಲಂಚ ಪಡೆಯವ ವೇಳೆ ಸಿಬಿಐ ಅಧಿಕಾರಿಗಳಿಗೆ ಸಿಕ್ಕಿಬಿದ್ದು, ಬಂಧನಕ್ಕೆ ಒಳಗಾಗಿದ್ದಾರೆ.

ಅಧಿಕಾರಿಯನ್ನು ಅನಿಲ್‌ ಕುಮಾರ್‌ ಎಂದು ಗುರುತಿಸಲಾಗಿದೆ. ಆತನ ಸಹಚರ ಹಾಗೂ ಕಚೇರಿಯ ಸಹೋದ್ಯೋಗಿಯೊಬ್ಬರನ್ನು ಕೂಡ ಸಿಬಿಐ ಬಂಧಿಸಿದೆ, ವ್ಯಾಜ್ಯವೊಂದನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಡುವುದಾಗಿ ಹೇಳಿ, ವ್ಯಕ್ತಿಯೊಬ್ಬರಿಂದ ಅನಿಲ್‌ 1 ಲಕ್ಷ ರೂ. ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಕಂಪನಿಯೊಂದನ್ನು ನಡೆಸುತ್ತಿದ್ದ ವ್ಯಕ್ತಿ ವಿರುದ್ಧ ಇಪಿಎಫ್‌ಒ ಕಚೇರಿಯು ವಿಚಾರಣೆ ಆರಂಭಿಸಿತ್ತು. ಸಿಪಿಸಿ ಅಡಿಯಲ್ಲಿ ಕಂಪನಿಯ ಪಿಎಫ್‌ ಪಾವತಿ ವಿರುದ್ಧ ತನಿಖೆ ನಡೆಸಲಾಗುತ್ತಿತ್ತು. ಎಲ್ಲ ಪಿಂಚಣಿ ಮೊತ್ತವನ್ನು ಪಾವತಿಸಿದ್ದರೂ, ತನ್ನ ಮೇಲೆ ಯಾಕೆ ವಿಚಾರಣೆ ಎಂದು ಕಂಪನಿಯ ಮಾಲೀಕ ಪ್ರಶ್ನಿಸಿದಾಗ, ಅಧಿಕಾರಿ ಅನಿಲ್‌ ವ್ಯಾಜ್ಯ ಸೃಷ್ಟಿಯಾಗಿದೆ ಎಂದು ನಂಬಿಸಿದ್ದರು. ಇದರ ಇತ್ಯರ್ಥಕ್ಕೆ 1 ಲಕ್ಷ ರೂ. ನೀಡಲು ಬೇಡಿಕೆ ಇರಿಸಿದ್ದರು.

ಮತ್ತೊಮ್ಮೆ ಕಾಣಿಸಿಕೊಂಡು ಜನರಲ್ಲಿ ಆತಂಕ ಹೆಚ್ಚಿಸಿದ ಚಿರತೆ

ಇದನ್ನು ತೀವ್ರವಾಗಿ ಖಂಡಿಸಿದ ಕಂಪನಿ ಮಾಲೀಕ, ಸೀದಾ ಸಿಬಿಐ ಕಚೇರಿಗೆ ತೆರಳಿ ತನ್ನ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ದೂರು ನೀಡಿದ್ದ. ಪ್ರಾಥಮಿಕ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳಿಗೆ ಪಿಎಫ್‌ ಅಧಿಕಾರಿ ಮೇಲೆ ಅನುಮಾನ ಬಂದು, ಅವರು ಬಲೆಯೊಂದನ್ನು ಹೆಣೆದರು. ಕಚೇರಿಯಲ್ಲಿ ಲಂಚ ಸ್ವೀಕರಿಸುವ ವೇಳೆ ರೆಡ್‌ ಹ್ಯಾಂಡ್‌ ಆಗಿ ಅನಿಲ್‌ನನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...