alex Certify ಸುರಕ್ಷತೆಗಾಗಿ ಸಣ್ಣ ಕಾರುಗಳಲ್ಲೂ ಆರು ಏರ್‌ ಬ್ಯಾಗ್‌ಗಳಿದ್ದರೆ ಸೂಕ್ತ ಎಂದ ಸಚಿವ ಗಡ್ಕರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುರಕ್ಷತೆಗಾಗಿ ಸಣ್ಣ ಕಾರುಗಳಲ್ಲೂ ಆರು ಏರ್‌ ಬ್ಯಾಗ್‌ಗಳಿದ್ದರೆ ಸೂಕ್ತ ಎಂದ ಸಚಿವ ಗಡ್ಕರಿ

ಕಾರುಗಳಲ್ಲಿ ಕಂಡುಬರುವ ಸುರಕ್ಷತಾ ಉಪಕರಣಗಳ ಪೈಕಿ ಏರ್‌ಬ್ಯಾಗ್‌ಗಳು ಅಪಘಾತಗಳ ಸಂದರ್ಭದಲ್ಲಿ ಜೀವ ಉಳಿಸಲು ವಹಿಸುವ ನಿರ್ಣಾಯಕ ಪಾತ್ರಕ್ಕೆ ಬೆಲೆ ಕಟ್ಟಲಾಗದು.

ಭಾರತದಲ್ಲಿ ದೊಡ್ಡ ಕಾರುಗಳಿಗೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿದೆ.

ರಸ್ತೆ ಅಪಘಾತಗಳಿಂದ ಜೀವ ಉಳಿಸುವ ನಿಟ್ಟಿನದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಎಂಟ್ರಿ ಲೆವೆಲ್ ಕಾರುಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಏರ್‌ಬ್ಯಾಗ್‌‌ ಗಳಿರಬೇಕೆಂದು ಹೇಳಿದ್ದಾರೆ.

ಸಿರಿವಂತರು ಮಾತ್ರವೇ ಖರೀದಿ ಮಾಡಬಹುದಾದ ದೊಡ್ಡ ಕಾರುಗಳಿಗೆ ದೊಡ್ಡ ಪ್ರಮಾಣದಲ್ಲಿ ಏರ್‌ಬ್ಯಾಗ್‌ ಗಳನ್ನು ಕೊಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಸಚಿವರು ಪುಟ್ಟ ಕಾರುಗಳಲ್ಲೂ ಕನಿಷ್ಠ ಆರು ಏರ್‌ ಬ್ಯಾಗ್‌ ಗಳನ್ನು ಕೊಡುವ ಮೂಲಕ ದೇಶದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳಿಂದ ಇನ್ನಷ್ಟು ಜೀವಗಳನ್ನು ಉಳಿಸಲು ಮುಂದೆ ಬರಬಾರದೇ ಎಂದು ಕಾರು ಉತ್ಪಾದಕರನ್ನು ಕೇಳಿದ್ದಾರೆ.

ಚಾಲಕರ ಪಾಲಿಗೆ ಸವಾಲೊಡ್ಡುವ ವಿಶ್ವ ನಗರಗಳ ಪಟ್ಟಿಯಲ್ಲಿ ಮುಂಬೈಗೆ ಪ್ರಥಮ ಸ್ಥಾನ

ದೇಶದಲ್ಲಿ ಕಾರುಗಳ ಬೆಲೆ ಏರಿಕೆಯ ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಏರ್‌ಬ್ಯಾಗ್ ಅಳವಡಿಸುವುದು ಕಾರು ಉತ್ಪಾದಕರು ಹಾಗೂ ಗ್ರಾಹಕರಿಗೂ ಹೆಚ್ಚಿನ ಖರ್ಚಿನ ತಲೆ ನೋವು ತಂದಿಟ್ಟಿದೆ. ಅದಾಗಲೇ ಅಧಿಕ ತೆರಿಗೆ ಹೊರೆಯಿಂದಾಗಿ ಕಾರು ಖರೀದಿದಾರರು ಹೆಚ್ಚಿನ ಮೊತ್ತ ಪಾವತಿ ಮಾಡಿ ಹೈರಾಣಾಗಿರುವ ನಡುವೆಯೇ ದೇಶದಲ್ಲಿ ಮಾರಾಟವಾಗುವ ಎಲ್ಲಾ ಆಟೋಮೊಬೈಲ್‌ಗಳ ಮೇಲೆ 28 ಪ್ರತಿಶತದಲ್ಲಿ ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದರೊಂದಿಗೆ ರಸ್ತೆ ತೆರಿಗೆ ಹಾಗೂ 22 ಪ್ರತಿಶತ ಸೆಸ್‌ ಇರುವ ಕಾರಣ ವಾಹನಗಳ ಬೆಲೆಗಳು ಗಗನ ಮುಟ್ಟುತ್ತಿವೆ.

ಇದರೊಂದಿಗೆ ಎಲೆಕ್ಟ್ರಾನಿಕ್ ಸ್ಥಿರತೆ ಹಾಗೂ ಸ್ವಾಯತ್ತ ತುರ್ತು ಬ್ರೇಕಿಂಗ್ ವ್ಯವಸ್ಥೆಯನ್ನು ಎಲ್ಲಾ ವಾಹನಗಳಲ್ಲೂ ಕಡ್ಡಾಯವಾಗಿ 2022-23ರಿಂದ ಒದಗಿಸಬೇಕೆಂದು ಭಾರತ ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ದೇಶದಲ್ಲಿ ಕಾರುಗಳ ಬೆಲೆಯಲ್ಲಿ ವಿಪರೀತ ಏರಿಕೆಯಾಗುತ್ತಿರುವುದು ಭಾರೀ ತಲೆನೋವೇ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...