ಕೆಲವರು ಊಟದ ಬಗ್ಗೆ ಕಾಳಜಿ ವಹಿಸಿದರೆ, ಮತ್ತೆ ಹಲವರು ಬಾಯಿ ರುಚಿಗೂ ಆದ್ಯತೆ ಕೊಡುತ್ತಾರೆ. ಸ್ವಾದಿಷ್ಟ ತಿನಿಸುಗಳೆಂದರೆ ಅವರಿಗೆ ಸಖತ್ ಇಷ್ಟ. ಅದರಲ್ಲಿಯೂ ಎಣ್ಣೆಗಾಯಿ ಪಲ್ಯ ಎಂದರೆ ಕೆಲವರಿಗೆ ಅಚ್ಚುಮೆಚ್ಚು. ಹೀಗೆ ಸುಲಭವಾಗಿ ಮಾಡಬಹುದಾದ ಎಣ್ಣೆಗಾಯಿ ಪಲ್ಯದ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು :
ಗುಂಡು ಕಪ್ಪು ಬದನೆಕಾಯಿ-ಅರ್ಧ ಕೆಜಿ 4 ಸೀಳು ಮಾಡಿ ಇಟ್ಟುಕೊಳ್ಳಿ, ಅದರಲ್ಲಿ ಹಾಕಲು ಹುಚ್ಚೆಳ್ಳು ಪುಡಿ-ಅರ್ಧ ಬಟ್ಟಲು, ಹುರಿದ ಕಡಲೆಕಾಯಿ ಬೀಜದ ಪುಡಿ-ಅರ್ಧ ಬಟ್ಟಲು, ಬೆಲ್ಲ-2 ಚಮಚ, ಹುಣಸೇಹಣ್ಣು-ಸ್ವಲ್ಪ, ಈರುಳ್ಳಿ-2, ತೆಂಗಿನಕಾಯಿ ತುರಿ-ಅರ್ಧ ಬಟ್ಟಲು, ಹಸಿಮೆಣಸಿನ ಕಾಯಿ-6 ರಿಂದ 8, ಒಣಮೆಣಸಿನಕಾಯಿ ಪುಡಿ-1 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಲ್ಲವನ್ನು ಕಲೆಸಿಕೊಳ್ಳಿ, ಎಣ್ಣೆ -4 ಚಮಚ, ಬೆಳ್ಳುಳ್ಳಿ-ಸ್ವಲ್ಪ.
ತಯಾರಿಸುವ ವಿಧಾನ :
ಅರ್ಧ ಮಸಾಲ ಪುಡಿಯನ್ನು ಬದನೆಕಾಯಿಯಲ್ಲಿ ತುಂಬಬೇಕು, ಎಣ್ಣೆ ಬಿಸಿಮಾಡಿ ಜಜ್ಜಿದ ಬೆಳ್ಳುಳ್ಳಿ, ಸಾಸಿವೆ, ಕರಿಬೇವು, 2 ಒಣಮೆಣಸಿನಕಾಯಿ ಸೇರಿಸಿ ಹುರಿದ ನಂತರ, ಮಸಾಲೆ ತುಂಬಿದ ಬದನೆಕಾಯಿ ಎರಡು ಬಟ್ಟಲು ನೀರು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿರಿ. 5 ನಿಮಿಷದ ನಂತರ ಮಸಾಲ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಗಟ್ಟಿಯಾಗುವ ತನಕ ಬೇಯಿಸಿ ರೊಟ್ಟಿಯೊಂದಿಗೆ ಸವಿಯಿರಿ.