alex Certify ಗೆಳತಿಯನ್ನೇ ವಿವಾಹವಾಗಲಿದ್ದಾರೆ ದಂಪತಿ; ಹೀಗೊಂದು ಅಚ್ಚರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯನ್ನೇ ವಿವಾಹವಾಗಲಿದ್ದಾರೆ ದಂಪತಿ; ಹೀಗೊಂದು ಅಚ್ಚರಿ….!

ಮನುಷ್ಯ ಸಂಬಂಧಗಳ ಬಗ್ಗೆ ಸಾಕಷ್ಟು ನೀತಿ ನಿರೂಪಣೆಗಳಿವೆ. ಅದನ್ನು‌ ಮೀರಿದ ಅಸಾಮಾನ್ಯ ಸಂಬಂಧ ಏರ್ಪಡುವ ಉದಾಹರಣೆ ಅಲ್ಲಲ್ಲಿ ಅಪರೂಪಕ್ಕೆ ಕಾಣ ಸಿಗುತ್ತದೆ.

ಇಂಗ್ಲೆಂಡ್‌ನಲ್ಲಿ ದಂಪತಿ ತಮ್ಮ ಗೆಳತಿಯಾಗಲು ಮಹಿಳೆಯನ್ನು ಆಹ್ವಾನಿಸಿದರು, ಅದೂ ಕುಟುಂಬದ ಭಾಗವಾಗಿ ! ಅಷ್ಟೇ ಅಲ್ಲ, ಸದ್ಯದಲ್ಲೇ ಮೂವರು ಮದುವೆಯಾಗಲಿದ್ದಾರೆ.

25 ವರ್ಷದ ಟಾಮ್ ಮತ್ತು ಲೆಸ್ಲಿ ಹಿಲ್ಯಾರ್ಡ್ 2017ರಲ್ಲಿ ವಿವಾಹವಾದರು. ನಂತರ ಲೆಸ್ಲಿ ದ್ವಿಲಿಂಗಿ ಎಂದು ಇಬ್ಬರೂ ಅರಿತುಕೊಂಡರು ಮತ್ತು ದಂಪತಿ ಸಂತೋಷದಿಂದ ಬದುಕುತ್ತಿದ್ದರು‌.

3700 ಕೆಜಿ ತೂಕದ ಘಂಟೆ ಮುಸ್ಲಿಂ ವ್ಯಕ್ತಿಯಿಂದ ಹಿಂದೂ ದೇವಾಲಯದಲ್ಲಿ ಪ್ರತಿಷ್ಠಾಪನೆ

ಅವರಲ್ಲಿ ಒಬ್ಬರು ತಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯನ್ನು ಸೇರಿಸಿಕೊಳ್ಳಲು ನಿರ್ಧರಿಸಿದ್ದಾರೆ‌. ಲೆಸ್ಲಿ ಡೇಟಿಂಗ್ ಅಪ್ಲಿಕೇಶನ್ ತೈಮಿ ಮೂಲಕ ಎಮ್ಮಾ ಕೂಂಬರ್ ಅವರನ್ನು ಭೇಟಿಯಾಗಿದ್ದು, ಎಮ್ಮಾಗೆ 31 ವರ್ಷ.‌ ಇಬ್ಬರೂ ಮಾತನಾಡಲು ಪ್ರಾರಂಭಿಸಿ ನಿರಂತರ ಭೇಟಿಯಾಗಲು ಪ್ರಾರಂಭಿಸಿದರು. ಸುಮಾರು ಒಂದು ತಿಂಗಳ ನಂತರ ಲೆಸ್ಲಿ ಎಮ್ಮಾಳನ್ನು ಟಾಮ್‌ಗೆ ಪರಿಚಯಿಸಿದ್ದಾಳೆ.

ಟಾಮ್ ಎಮ್ಮಾಳ ವ್ಯಕ್ತಿತ್ವವನ್ನು ಇಷ್ಟಪಟ್ಟಿದ್ದು ಮತ್ತು ಮೂವರು ಅಂದಿನಿಂದಲೂ ಥ್ರೂಪಲ್ ಸಂಬಂಧದಲ್ಲಿದ್ದಾರೆ.

ಥ್ರೂಪಲ್ ದಂಪತಿ ಎಂದರೆ ಇಬ್ಬರು ವ್ಯಕ್ತಿಗಳ ನಡುವಿನ ಸಂಬಂಧದಂತೆ ಮೂರು ಜನರ ನಡುವಿನ ಸಂಬಂಧವಾಗಿದೆ. ಮೂವರೂ ಈಗ ಇದ್ದು,
ಮದುವೆ ನಿಶ್ಚಯವಾಗಿದೆ.

ಲೆಸ್ಲಿ ಹೇಳುವಂತೆ, ಮೂರನೇ ವ್ಯಕ್ತಿಯನ್ನು ಕುಟುಂಬದೊಳಗೆ ಕರೆತರುವ ಮೂಲಕ ಅಪರಾಧ ಮಾಡುತ್ತಿದ್ದಾರೆ ಎಂದು ಜನ ನಂಬುತ್ತಾರೆ. ಆದರೆ ಇಲ್ಲಿ
ಮೂವರೂ ಒಬ್ಬರನ್ನೊಬ್ಬರು ಗೌರವಿಸುತ್ತಾರೆ, ಮನೆಯಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ, ಒಬ್ಬರನ್ನೊಬ್ಬರು ಗೌರವಿಸುವ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...