alex Certify ಖಾಲಿ ಖುರ್ಚಿಗಳ ನಡುವೆ ಒಬ್ಬಂಟಿಯಾಗಿ ಕುಳಿತು ಮ್ಯಾಚ್‌ ವೀಕ್ಷಿಸುತ್ತಿದ್ದ ಆರ್.‌ ಅಶ್ವಿನ್‌ ಫೋಟೋ ವೈರಲ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಖುರ್ಚಿಗಳ ನಡುವೆ ಒಬ್ಬಂಟಿಯಾಗಿ ಕುಳಿತು ಮ್ಯಾಚ್‌ ವೀಕ್ಷಿಸುತ್ತಿದ್ದ ಆರ್.‌ ಅಶ್ವಿನ್‌ ಫೋಟೋ ವೈರಲ್…!

ಟೀಂ ಇಂಡಿಯಾ ಭರವಸೆಯ ಸ್ಪಿನ್ನರ್​ ಆರ್​ ಅಶ್ವಿನ್​​ ಪಟೌಡಿ ಟ್ರೋಫಿಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೇ ಇದ್ದದ್ದು ಕಳೆದ ತಿಂಗಳು ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು.

ಪ್ರಸಕ್ತ ಸರಣಿಗೆ ಬಿಸಿಸಿಐ ಆಯ್ಕೆ ಮಾಡಿದ 20 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದ ಅಶ್ವಿನ್​​ ಜೂನ್​​ನಲ್ಲಿ ಸೌತಾಂಪ್ಟನ್​​ನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಪಂದ್ಯದಲ್ಲಿ ಭಾಗವಹಿಸಿದ್ದಾರೆ. ಇದು ಅಶ್ವಿನ್​ ಸಂಪೂರ್ಣ 2 ತಿಂಗಳ ಪ್ರವಾಸದಲ್ಲಿ ಭಾಗವಹಿಸಿದ ಏಕೈಕ ಪಂದ್ಯವಾಗಿದೆ.

ವಿಶ್ವದ ನಂ. 2 ಟೆಸ್ಟ್​ ಬೌಲರ್​ ಆಗಿರುವ ಆರ್​. ಅಶ್ವಿನ್​ ತಂಡದಲ್ಲಿ ಇಷ್ಟೊಂದು ಸೈಡ್​ಲೈನ್​ ಆಗಿರೋದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ಈ ನಡುವೆ ಇಂಗ್ಲೆಂಡ್​ನ ಓವಲ್​ ಮೈದಾನದಲ್ಲಿ ಅಶ್ವಿನ್​ ರೂಫ್​ನಲ್ಲಿ ಒಬ್ಬರೇ ಕುಳಿತಿರುವ ಫೋಟವೊಂದು ಟ್ವಿಟರ್​ನಲ್ಲಿ ವೈರಲ್​ ಆಗಿದೆ.‌

ಇದೊಂದು ಸಾಮಾನ್ಯ ಫೋಟೋ ಆಗಿದ್ದರೂ ಸಹ ಖಾಲಿ ಕುರ್ಚಿಗಳ ನಡುವೆ ಒಬ್ಬರೇ ಕುಳಿತಿರುವ ಅಶ್ವಿನ್​​ ಫೋಟೋಗೆ ಟ್ವಿಟರ್​ನಲ್ಲಿ ಸಾಕಷ್ಟು ಪ್ರತಿಕ್ರಿಯೆಗಳು ಸಿಗುತ್ತಿವೆ.

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...