alex Certify ಪುಟ್ಟ ಮನೆಗೆ ಶಿಫ್ಟ್‌ ಆಗಿ ಅಚ್ಚರಿ ಮೂಡಿಸಿದ ವಿಶ್ವದ ಸಿರಿವಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಮನೆಗೆ ಶಿಫ್ಟ್‌ ಆಗಿ ಅಚ್ಚರಿ ಮೂಡಿಸಿದ ವಿಶ್ವದ ಸಿರಿವಂತ

ಜಗತ್ತಿನ ಅತ್ಯಂತ ಸಿರಿವಂತರಲ್ಲಿ ಒಬ್ಬರಾದ ಸ್ಪೇಸ್‌ ಎಕ್ಸ್‌ನ ಎಲಾನ್ ಮಸ್ಕ್‌ ಜಗತ್ತಿನ ಯಾವುದೇ ಮೂಲೆಯಲ್ಲಿ ಬೇಕಾದರೂ ಐಷಾರಾಮಿ ಜೀವನ ನಡೆಸಬಲ್ಲರು ಎಂದು ಬಿಡಿಸಿ ಹೇಳಬೇಕಿಲ್ಲ.

ಇದೀಗ ಸ್ಪೇಸ್‌ ಎಕ್ಸ್‌ನ ಪ್ರಧಾನ ಕಚೇರಿ ಟೆಕ್ಸಾಸ್‌ನ ಬೊಕಾ ಚಿಕಾಗೆ ಸ್ಥಳಾಂತರಗೊಳ್ಳುತ್ತಿರುವ ಮಸ್ಕ್‌ 37 ಚದರ ಮೀಟರ್‌ ವಿಸ್ತಾರದ ಪುಟ್ಟದೊಂದು ಫ್ಲಾಟ್‌-ಪ್ಯಾಕ್ ಮನೆಗೆ ಶಿಫ್ಟ್ ಆಗುತ್ತಿದ್ದಾರೆ. ಈ ಮನೆಯ ಮೌಲ್ಯವು $50,000 ಆಗಿದೆ.

ಇದಕ್ಕೂ ಮುನ್ನ ಕ್ಯಾಲಿಫೋರ್ನಿಯಾದಲ್ಲಿದ್ದ ಮಸ್ಕ್‌, ಅಲ್ಲಿ ತಮ್ಮ ಹೆಸರಿನಲ್ಲಿರುವ ಎಲ್ಲ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಇದರಲ್ಲಿ ಆರು ಮ್ಯಾನ್ಶನ್‌ಗಳೂ ಸೇರಿವೆ.

“ಬೊಕಾ ಚಿಕಾದಲ್ಲಿರುವ ನನ್ನ ಮನೆಯನ್ನು ಸ್ಪೇಸ್‌ಎಕ್ಸ್‌ನಿಂದ ಬಾಡಿಗೆಗೆ ಪಡೆದಿದ್ದೇನೆ. ಇದು ನನ್ನ ಪ್ರಮುಖ ಮನೆಯಾಗಿದೆ” ಎಂದು ಮಸ್ಕ್‌ ತಮ್ಮ ಮನೆಯ ಬಗ್ಗೆ ಹೇಳಿದ್ದಾರೆ.

“ಬೇ ಏರಿಯಾದಲ್ಲಿರುವ ಇವೆಂಟ್ಸ್‌ ಹೌಸ್‌ ನನ್ನ ಬಳಿ ಇರುವ ಒಂದೇ ಒಂದು ಮನೆ. ನಾನು ಅದನ್ನು ಮಾರಿದರೆ, ದೊಡ್ಡ ಕುಟುಂಬವೇನಾದರೂ ಖರೀದಿ ಮಾಡದೇ ಇದ್ದಲ್ಲಿ ಆ ಮನೆ ಹೆಚ್ಚಾಗಿ ಬಳಕೆಯಾಗುವುದಿಲ್ಲ. ಅದು ಒಂದು ದಿನ ಆಗಬಹುದು’’ ಎಂದು ಮಸ್ಕ್‌ ತಮ್ಮ ಸ್ವಂತ ಮನೆಯ ಬಗ್ಗೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...