alex Certify ಟ್ವಿಟ್ಟರ್ ಸೀಟಿನಿಂದ ಕೆಳಗಿಳಿಯುತ್ತರಾ ಎಲಾನ್​ ಮಸ್ಕ್ ? ಮುಂದಿನ ನಡೆ ಕುರಿತು ತೀವ್ರಗೊಂಡ ಕುತೂಹಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವಿಟ್ಟರ್ ಸೀಟಿನಿಂದ ಕೆಳಗಿಳಿಯುತ್ತರಾ ಎಲಾನ್​ ಮಸ್ಕ್ ? ಮುಂದಿನ ನಡೆ ಕುರಿತು ತೀವ್ರಗೊಂಡ ಕುತೂಹಲ

ನ್ಯೂಯಾರ್ಕ್​: ಉದ್ಯಮಿ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ ಅನ್ನು ಖರೀದಿ ಮಾಡಿದ ಬಳಿಕ ನರಾಕಾತ್ಮಕವಾಗಿಯೇ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಅವರು ಇಡುತ್ತಿರುವ ಹೆಜ್ಜೆಗಳು ಶ್ಲಾಘನೆಗಿಂತ ಹೆಚ್ಚು ಟ್ರೋಲ್​ ಆಗುತ್ತಿವೆ. ಮಾಡುತ್ತಿರುವ ಯತ್ನಗಳು ಸೋಲುವುದೇ ಹೆಚ್ಚಾಗಿದೆ.

ಇದೀಗ ಹೊಸ ತಲೆನೋವು ಮಸ್ಕ್​ ಅವರನ್ನು ಕಾಡತೊಡಗಿದೆ. ಅದೇನೆಂದರೆ ಜಾಹೀರಾತುದಾರರು ಜಾಹೀರಾತುಗಳನ್ನು ನೀಡುತ್ತಿಲ್ಲ ಎನ್ನುವುದು. ಟ್ವಿಟರ್​ನಿಂದ ಸಾವಿರಾರು ನೌಕರರನ್ನು ಮಸ್ಕ್‌ ತೆಗೆದನಂತರ ಟ್ವಿಟರ್‌ ಕಂಪೆನಿಯು ನಷ್ಟ ಅನುಭವಿಸುತ್ತಿದೆ ಎನ್ನಲಾಗಿದೆ.

ಇದಕ್ಕಾಗಿ ಟ್ವಿಟರ್​ನಲ್ಲಿಯೇ ಒಂದು ಪ್ರಶ್ನೆಯನ್ನು ಮಸ್ಕ್​ ಮುಂದಿಟ್ಟಿದ್ದರು. ಅದೇನೆಂದರೆ, ನಾನು ಟ್ವಿಟರ್ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿಯಬೇಕೆ ಎಂಬುದು. ಸಮೀಕ್ಷೆಯ ಫಲಿತಾಂಶದ ಪ್ರಕಾರ ನಡೆದುಕೊಳ್ಳುವುದಾಗಿಯೂ ಅವರು ಹೇಳಿದ್ದರು.

ಈಗ ಸಮೀಕ್ಷೆ ಫಲಿತಾಂಶ ಹೊರಬಂದಿದೆ. ಮಸ್ಕ್ ಅವರ ಸಮೀಕ್ಷೆಯಲ್ಲಿ ಒಟ್ಟು 17 ಮಿಲಿಯನ್ ಮತಗಳು ಚಲಾವಣೆಯಾಗಿವೆ. ಈ ಪೈಕಿ ಶೇ.57.5ರಷ್ಟು ಮತಗಳು ‘ಹೌದು’ ಎಂಬುದಕ್ಕೆ ಬಿದ್ದಿವೆ. ಶೇ.42.5ರಷ್ಟು ಮತಗಳು ಅವರ ರಾಜೀನಾಮೆಗೆ ವಿರುದ್ಧವಾಗಿವೆ. ಸಮೀಕ್ಷೆಗೆ ಬದ್ಧನಾಗಿದ್ದೇನೆ ಎಂಬ ಹೇಳಿಕೆ ನೀಡಿರುವ ಮಸ್ಕ್ ಅವರ ಮುಂದಿನ ನಿರ್ಧಾರಗಳೇನು ಎಂದು ಕಾಯಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...