alex Certify ಮೆರವಣಿಗೆ ವೇಳೆ ಆನೆಗೆ ವಿದ್ಯುತ್ ಸ್ಪರ್ಶ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆರವಣಿಗೆ ವೇಳೆ ಆನೆಗೆ ವಿದ್ಯುತ್ ಸ್ಪರ್ಶ; ವಿಡಿಯೋ ವೈರಲ್

ಆನೆಯೊಂದು ರಸ್ತೆಯಲ್ಲಿ ನಡೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿದ್ದು, ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದೆ.‌ ಘಟನೆ ಗುಜರಾತಿನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದ್ದು, ಕಸ್ವಾ ಗ್ರಾಮದ ವಡ್ವಾಲಾ ದೇವಸ್ಥಾನದ ಮಹಾಂತ ಕನಿರಾಮ್ ಬಾಪು ಅವರ ಮೆರವಣಿಗೆಯಲ್ಲಿ ಈ ಅವಘಡ ಸಂಭವಿಸಿದೆ.

ಕನಿರಾಮ್ ಬಾಪು ಅವರನ್ನು ಆನೆಯ ಮೇಲೆ ದೇವಸ್ಥಾನದಿಂದ ಹೊರಗೆ ಕರೆದೊಯ್ಯುವ ಕಾರ್ಯಕ್ರಮದಲ್ಲಿ ಇಬ್ಬರು ಆನೆಯ ಮೇಲೆ ಕುಳಿತಿದ್ದರು. ಇವರಿಗಾಗಿ ಅಲಂಕರಿಸಿದ ಚಾಮರವನ್ನೂ ಇರಿಸಲಾಗಿತ್ತು

ಈ ವೇಳೆ ಆನೆ ಮೇಲೆ ಸಿಗಿಸಲಾಗಿದ್ದ ಚಾಮರಕ್ಕೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿದೆ. ಇದರಿಂದ ಆನೆಗೂ ಶಾಕ್‌ ತಗುಲಿದ್ದು. ಇದರಿಂದ ಗಾಬರಿಗೊಂಡ ಅದು ಯದ್ವಾತದ್ವಾ ಓಡಡಲಾರಂಭಿಸಿದೆ. ಮಾವುತ ಕೂಡಾ ಆನೆ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾನೆ.

ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಒಂದು ವೇಳೆ ಆನೆ ಜನಸಮೂಹದ ಮೇಲೆ ನುಗ್ಗಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

https://youtu.be/POAXnpdA5vU

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...