alex Certify ಮತದಾರರಿಗೆ ಮುಖ್ಯ ಮಾಹಿತಿ: ಅಭ್ಯರ್ಥಿಗಳ ಮಾಹಿತಿ, ನೀತಿ ಸಂಹಿತೆ ದೂರು ಸಲ್ಲಿಸಲು ವಿಶೇಷ ಆಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತದಾರರಿಗೆ ಮುಖ್ಯ ಮಾಹಿತಿ: ಅಭ್ಯರ್ಥಿಗಳ ಮಾಹಿತಿ, ನೀತಿ ಸಂಹಿತೆ ದೂರು ಸಲ್ಲಿಸಲು ವಿಶೇಷ ಆಪ್

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ನೀತಿ ಸಂಹಿತೆ ಉಲ್ಲಂಘನೆಗಾಗಿ ಮತದಾರರು ದೂರು ಸಲ್ಲಿಸಲು ಆಯೋಗದ ವತಿಯಿಂದ ಎರಡು ವಿಶೇಷ ಅಪ್ಲಿಕೇಶನ್ ಪರಿಚಯಿಸಲಾಗಿದೆ.

ನಿಮ್ಮ ಅಭ್ಯರ್ಥಿ ಬಗ್ಗೆ ತಿಳಿಯಿರಿ -ಕೆವೈಸಿ ಹಾಗೂ ಸಿ -ವಿಜಿಲ್ ಅಪ್ಲಿಕೇಶನ್ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೆವೈಸಿ ಆಪ್ ಮೂಲಕ ಅಭ್ಯರ್ಥಿಗಳ ವಿವರಗಳನ್ನು ಸಾರ್ವಜನಿಕರು ಪಡೆಯಬಹುದು. ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿತ ದೂರುಗಳು ಕಂಡು ಬಂದಲ್ಲಿ ಸಿ -ವಿಜಿಲ್ ಆಪ್ ನಲ್ಲಿ ಮತದಾರರು ಆಯೋಗಕ್ಕೆ ದೂರು ಸಲ್ಲಿಸಬಹುದಾಗಿದೆ.

ಗೂಗಲ್ ಪ್ಲೇ ಮತ್ತು ಆಪಲ್ ಆಪ್ ಸ್ಟೋರ್ ನಲ್ಲಿ ಕೆವೈಸಿ ಆಪ್ ಲಭ್ಯವಿದೆ. ಈ ಅಪ್ಲಿಕೇಶನ್ ನಲ್ಲಿ ಅಭ್ಯರ್ಥಿಗಳ ಅಪರಾಧ ಹಿನ್ನೆಲೆಯ ಮಾಹಿತಿ ಸಿಗಲಿದ್ದು, ಮತದಾರರು ಅಭ್ಯರ್ಥಿಗಳ ಹಿನ್ನೆಲೆ ತಿಳಿಯಲು ಸಹಾಯಕವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...