alex Certify ʼವಾರಿಸುʼ ಚಿತ್ರದ ಹಾಡಿಗೆ ಚಿತ್ರಮಂದಿರದಲ್ಲಿಯೇ ಎದ್ದು ಕುಣಿದ ವೃದ್ಧೆ: ಆಹಾ…! ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾರಿಸುʼ ಚಿತ್ರದ ಹಾಡಿಗೆ ಚಿತ್ರಮಂದಿರದಲ್ಲಿಯೇ ಎದ್ದು ಕುಣಿದ ವೃದ್ಧೆ: ಆಹಾ…! ಎಂದ ನೆಟ್ಟಿಗರು

ದಳಪತಿ ವಿಜಯ್ ಅಭಿನಯದ ʼವಾರಿಸುʼ ಚಿತ್ರವು ಭಾರೀ ಹಿಟ್ ಆಗುತ್ತಿದೆ. ಕಳೆದ ವಾರ ಬಿಡುಗಡೆಯಾದ ಈ ಚಿತ್ರವು ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳಿಂದ ಸಾಕಷ್ಟು ಪ್ರೀತಿಯನ್ನು ಗಳಿಸುತ್ತಿದೆ. ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದು, ವಂಶಿ ಪೈಡಿಪಲ್ಲಿ ನಿರ್ದೇಶನದ ಫ್ಯಾಮಿಲಿ ಎಂಟರ್‌ಟೈನರ್ ಆಗಿದೆ.

ಹಾಡುಗಳು, ವಿಶೇಷವಾಗಿ ಜನರನ್ನು ಕುಣಿಯುವಂತೆ ಮಾಡುತ್ತಿವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಥಿಯೇಟರ್‌ನಲ್ಲಿ ಹಾಡನ್ನು ನೋಡುತ್ತಿರುವಾಗ ಈ ವಯಸ್ಸಾದ ಮಹಿಳೆಯೂ ಹಾಡಿಗೆ ಹೆಜ್ಜೆ ಹಾಕಿದ್ದು, ಅದೀಗ ನೆಟ್ಟಿಗರನ್ನು ನಕ್ಕು ನಗಿಸುತ್ತಿದೆ.

ವಾರಿಸು ಚಿತ್ರದ ರಂಜಿತಾಮೆ ಹಾಡಿಗೆ ವಯಸ್ಸಾದ ಮಹಿಳೆಯೊಬ್ಬರು ಕುಣಿದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆಯು ಹೊಸದಾಗಿ ಬಿಡುಗಡೆಯಾದ ಚಲನಚಿತ್ರವನ್ನು ವೀಕ್ಷಿಸಲು ಥಿಯೇಟರ್‌ಗೆ ಹೋಗಿರುವಂತೆ ತೋರುತ್ತಿದೆ ಮತ್ತು ಈ ಹಾಡು ತೆರೆಯ ಮೇಲೆ ಪ್ಲೇ ಮಾಡಿದಾಗ, ಮಹಿಳೆ ಡಾನ್ಸ್​ ಮಾಡಿದ್ದು, ಉಳಿದವರೂ ಅದಕ್ಕೆ ಸಾಥ್​ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...