alex Certify ಮತ್ತೊಬ್ಬಳೊಂದಿಗೆ ಪತಿ ಡಾನ್ಸ್‌ ಮಾಡಿದ್ದಕ್ಕೆ ವೃದ್ದೆ ಮಾಡಿದ್ದೇನು ಗೊತ್ತಾ ? ನಗು ತರಿಸುತ್ತೆ ದಂಪತಿ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಬ್ಬಳೊಂದಿಗೆ ಪತಿ ಡಾನ್ಸ್‌ ಮಾಡಿದ್ದಕ್ಕೆ ವೃದ್ದೆ ಮಾಡಿದ್ದೇನು ಗೊತ್ತಾ ? ನಗು ತರಿಸುತ್ತೆ ದಂಪತಿ ವಿಡಿಯೋ

ವಯಸ್ಸಾದ ದಂಪತಿ ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದಾಗ ನಡೆದ ಹಾಸ್ಯ ಪ್ರಸಂಗವೊಂದರ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗುವಂತಿದೆ. ರೈಲಿನಲ್ಲಿ ಜೋರಾಗಿ ನಡೆದ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಡಿಯೋ ಇದಾಗಿದೆ.

ಮಕ್ಕಳೆಲ್ಲಾ ನರ್ತಿಸುತ್ತಿರುವಾಗ ವಯಸ್ಸಾದ ವ್ಯಕ್ತಿಗೂ ಡಾನ್ಸ್​ ಮಾಡುವ ಆಸೆಯಾಯಿತು. ಆತ ನರ್ತಿಸುತ್ತಲೇ ತನ್ನ ಜತೆ ಡಾನ್ಸ್​ಗೆ ಬಾ ಎಂದು ತನ್ನ ವಯಸ್ಸಾದ ಪತ್ನಿಯನ್ನು ಕರೆಯುತ್ತಾನೆ. ಆದರೆ ನಾಚಿಕೆಯಿಂದ ಆಕೆ ನಿರಾಕರಿಸುತ್ತಾಳೆ. ಪತ್ನಿಯ ಮನಸ್ಸನ್ನು ಅರಿತ ಈ ಪತಿ ಆಕೆಗೆ ಹೊಟ್ಟೆಕಿಚ್ಚು ಆಗಲೆಂದು ಅಲ್ಲಿಯೇ ಇದ್ದ ಬೇರೆಯ ಮಹಿಳೆಯ ಜೊತೆ ನರ್ತಿಸುತ್ತಾನೆ.

ನಿಜಕ್ಕೂ ಇದನ್ನು ನೋಡಿ ಪತ್ನಿಗೆ ಹೊಟ್ಟೆಕಿಚ್ಚು ಆಗುತ್ತದೆ. ಆಕೆ ತಡ ಮಾಡದೇ ಎದ್ದು ನಿಂತು ಅಲ್ಲಿಯೇ ಇದ್ದ ಬೇರೊಬ್ಬ ಪುರುಷನ ಜತೆ ಡಾನ್ಸ್​ ಮಾಡಲು ತೊಡಗುತ್ತಾಳೆ. ಅಲ್ಲಿದ್ದವರೆಲ್ಲಾ ಬಿದ್ದೂ ಬಿದ್ದೂ ನಗುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ಸನ್ನಿವೇಶಕ್ಕೆ ದಂಪತಿ ಇಬ್ಬರೂ ನಗುವಿನ ಅಲೆಯಲ್ಲಿ ತೇಲಿ ಹೋಗಿದ್ದು, ಇದರ ವಿಡಿಯೋ ನೋಡಿದವರೂ ನಗುವಂತಿದೆ.

ವಯಸ್ಸು ಎಷ್ಟೇ ಆದರೂ ದಂಪತಿ ನಡುವಿನ ಪರಸ್ಪರ ಅಸೂಯೆ ಹೋಗುವುದೇ ಇಲ್ಲ ಎಂದು ನೆಟ್ಟಿಗರು ಕೂಡ ತಮಾಷೆ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...