alex Certify ವಿಶಿಷ್ಟ ಮೊಳಕೆ ಕಾಳು ಚಾಟ್ ಮಾರಾಟ ಮಾಡುವ ಹಿರಿಯ ವ್ಯಕ್ತಿ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶಿಷ್ಟ ಮೊಳಕೆ ಕಾಳು ಚಾಟ್ ಮಾರಾಟ ಮಾಡುವ ಹಿರಿಯ ವ್ಯಕ್ತಿ: ವಿಡಿಯೋ ವೈರಲ್

ಚಾಟ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಭಾರತದಲ್ಲಿ ಹಲವಾರು ರೀತಿಯ ಲೆಕ್ಕವಿಲ್ಲದಷ್ಟು ಚಾಟ್ ಗಳಿವೆ. ದಹಿ ವಡಾ ಅಥವಾ ಪಾಪ್ಡಿ ಚಾಟ್, ಸೇವ್ ಪುರಿ ಅಥವಾ ದಬೇಲಿ ಹೀಗೆ ಹಲವಾರು ರೀತಿಯಲ್ಲಿ ಲಭ್ಯ ಇವೆ. ನಗರಗಳ ಬೀದಿ-ಬೀದಿಯಲ್ಲಿ ಇಂತ ಆಹಾರ ಮಾರಾಟಗಾರರನ್ನು ಕಾಣಬಹುದು. ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಕಾನ್ಪುರದಲ್ಲಿ ವಿಶಿಷ್ಟ ಮೊಳಕೆ ಚಾಟ್ ಮಾರಾಟ ಮಾಡುತ್ತಾರೆ.

ಹೌದು, ಕಾನ್ಪುರದಲ್ಲಿ ಬೀದಿ ಆಹಾರ ಮಾರಾಟಗಾರ ವಿಶಿಷ್ಟವಾದ ಮತ್ತು ಆರೋಗ್ಯಕರವಾದ ಚಾಟ್ ಅನ್ನು ಮಾರಾಟ ಮಾಡುತ್ತಿದ್ದಾರೆ. ಇದು ಸಾಮಾನ್ಯ ಚಾಟ್ ಗಳಿಗಿಂತ ಭಿನ್ನವಾಗಿದೆ. ಗೋಪಿಲಾಲ್ ಎಂಬ ಹಿರಿಯ ವ್ಯಕ್ತಿ, ಕಾನ್ಪುರ ನಗರದಲ್ಲಿ ಮೊಳಕೆ ಚಾಟ್ ಮಾರಾಟ ಮಾಡುತ್ತಿದ್ದಾರೆ. ಅವರ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ.

ಸಂಬಂಧಿಯೊಂದಿಗೆ ಸೆಕ್ಸ್ ಗೆ ಸಹಕರಿಸುವಂತೆ ಪತ್ನಿಗೆ ಹಿಂಸೆ ನೀಡಿದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ

@youtubeswadofficial ಹ್ಯಾಂಡಲ್ ನಲ್ಲಿ ಆಹಾರ ಬ್ಲಾಗರ್ ಗೌರವ್ ವಾಸನ್ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಯಸ್ಸಾದ ವ್ಯಕ್ತಿಯ ಚಾಟ್ ಮಾರಾಟ ಮಾಡುತ್ತಿರುವ ವಿಡಿಯೊ ವೈರಲ್ ಆಗಿದ್ದು, 19.8 ಮಿಲಿಯನ್ ವೀಕ್ಷಣೆಗಳು ಮತ್ತು 1.8 ಮಿಲಿಯನ್ ಲೈಕ್‌ಗಳನ್ನು ಪಡೆದುಕೊಂಡಿದೆ.

ಬೆಲೆ ಏರಿಕೆ ಹೊತ್ತಲ್ಲೇ ಮತ್ತೊಂದು ಬಿಗ್ ಶಾಕ್: ಟಿವಿ ಚಾನಲ್ ದರ ಶೇಕಡ 50 ರಷ್ಟು ಹೆಚ್ಚಳ ಸಾಧ್ಯತೆ

ವಿಡಿಯೋದಲ್ಲಿ ಕಾನ್ಪುರದ ಚಾಟ್ ಮಾರಾಟಗಾರರು, ವಿವಿಧ ರೀತಿಯ ಮೊಳಕೆಗಳೊಂದಿಗೆ ಆರೋಗ್ಯಕರ ಮತ್ತು ರುಚಿಕರವಾದ ಚಾಟ್ ಅನ್ನು ತಯಾರಿಸುವುದನ್ನು ನಾವು ನೋಡಬಹುದು. ಅವರು ಬೇಯಿಸಿದ ಕರಿಬೇವು, ಮೊಳಕೆಯೊಡೆದ ಮೊಳಕೆ ಕಾಳುಗಳು, ಕಡಲೇಕಾಳು, ಬೇಯಿಸಿದ ಮಟರ್ ಮತ್ತು ಹುರಿದ ಕಡಲೆಕಾಯಿಯನ್ನು ಬಳಸಿದ್ದಾರೆ. ನಂತರ ತುರಿದ ಮೂಲಂಗಿ ಎಲೆಗಳು, ಹಸಿರು ಮೆಣಸಿನಕಾಯಿಗಳು, ನಿಂಬೆ ರಸ, ಮಸಾಲೆಗಳು ಮತ್ತು ಪುದೀನ ಚಟ್ನಿಯನ್ನು ಮೇಲೆ ಚಿಮುಕಿಸಲಾಗುತ್ತದೆ. ಅಲ್ಲದೆ ಈ ಆರೋಗ್ಯಕರ ಚಾಟ್ ಬೆಲೆ ಕೇವಲ 20 ರೂ. ಮಾತ್ರ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...