alex Certify 42 ವರ್ಷಗಳ ನಂತರ ಚಿತ್ರಮಂದಿರಕ್ಕೆ ಕಾಲಿಟ್ಟ ಹಿರಿಯ ವ್ಯಕ್ತಿ, ಸಾಥ್​ ನೀಡಿದ ಮೊಮ್ಮಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

42 ವರ್ಷಗಳ ನಂತರ ಚಿತ್ರಮಂದಿರಕ್ಕೆ ಕಾಲಿಟ್ಟ ಹಿರಿಯ ವ್ಯಕ್ತಿ, ಸಾಥ್​ ನೀಡಿದ ಮೊಮ್ಮಗ

ವ್ಯಕ್ತಿಯೊಬ್ಬರು ತನ್ನ ಅಜ್ಜನೊಂದಿಗೆ ಚಿತ್ರಮಂದಿರಕ್ಕೆ ಭೇಟಿಕೊಟ್ಟ ಹೃದಯಸ್ಪರ್ಶಿ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರಲ್ಲಿನ ವಿಶೇಷವೆಂದರೆ ಆ ಹಿರಿಯರು ಬರೋಬ್ಬರಿ 42 ವರ್ಷಗಳ ನಂತರ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು!
ವಿಡಿಯೋವನ್ನು ಡಾ.ದೀಪಕ್​ ಅಂಜನಾ ಹಂಚಿಕೊಂಡಿದ್ದಾರೆ.

ಸಾಂಪ್ರದಾಯಿಕ ಕುರ್ತಾ ಮತ್ತು ಧೋತಿಯನ್ನು ಧರಿಸಿರುವ ದೀಪಕ್​ ಅವರ ಅಜ್ಜ ಮೊದಲು ಎಸ್ಕಲೇಟರ್​ ಅನ್ನು ಬಳಸುವುದು ಕಾಣಬಹುದು.

ನಂತರ ಇಬ್ಬರೂ ಥಿಯೇಟರ್​ಗೆ ಹೋಗಿ ಸಿನಿಮಾ ವೀಕ್ಷಿಸಲು ಮುಂದಾದರು. ಹಿರಿಯಜ್ಜ ಅತ್ತಿಂದಿತ್ತ ಓಡಾಡುವುದು ಆ ಹೊಸ ವಾತಾವರಣ ಇಷ್ಟಪಡುವುದು ವಿಡಿಯೋದಲ್ಲಿ ಕಾಣಿಸುತ್ತದೆ.

“ನೀವು ನಿಮ್ಮ ಅಜ್ಜನೊಂದಿಗೆ ಥಿಯೇಟರ್​ಗೆ ಹೋಗುತ್ತೀದ್ದಿರ, ನನ್ನ ಅಜ್ಜ ಕೊನೆಯ ಬಾರಿಗೆ 1980ರಲ್ಲಿ ಥಿಯೇಟರ್​ಗೆ ಹೋಗಿದ್ದರು” ಎಂದು ದೀಪಕ್​ ಶೀರ್ಷಿಕೆ ನೀಡಿದ್ದಾರೆ.

ಈ ವಿಡಿಯೋ ಕಂಡ ನೆಟ್ಟಿಗರು ಭಾವನಾತ್ಮಕವಾಗಿ ತೆಗೆದುಕೊಂಡಿದ್ದು ಅನೇಕರು ಕಾಮೆಂಟ್​ ಮಾಡಿ ಖುಷಿಪಟ್ಟಿದ್ದಾರೆ. ಇನ್ನು ಕೆಲವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...