alex Certify ಈ ವಿಡಿಯೋ ನೋಡಿ ಖುಷಿಪಡ್ತಿರೋ……ದುಃಖಪಡ್ತಿರೋ…….ನಿಮಗೇ ಬಿಟ್ಟದ್ದು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿ ಖುಷಿಪಡ್ತಿರೋ……ದುಃಖಪಡ್ತಿರೋ…….ನಿಮಗೇ ಬಿಟ್ಟದ್ದು…!

ಸುಂದರ ಯುವತಿಯನ್ನು ವಿವಾಹವಾದ ನಂತರ ವೃದ್ಧನೊಬ್ಬನಿಗಾದ ಸಂತೋಷವನ್ನು ಕಂಡು ಅರಗಿಸಿಕೊಳ್ಳಲಾಗದ ನೆಟ್ಟಿಗರ ಪಾಲಿನ ದುಃಖದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವರನಿಗೆ 80-90 ವರ್ಷದವರಂತೆ ಕಾಣುತ್ತಾರೆ. ಕುತ್ತಿಗೆಗೆ ಹಾರ ಹಾಕಿಕೊಂಡು ನಗುತ್ತಿರುವ ವರ ಮತ್ತು ಅವರಿಗಿಂತ ಬಹಳ ಚಿಕ್ಕವಳಾಗಿ ಕಾಣುವ ಸುಂದರ ವಧು ಪಕ್ಕದಲ್ಲಿ ಕುಳಿತಿದ್ದು, ವಧು ನಾಚಿಕೆಯಿಂದ ಇರುವಂತೆ ಕಾಣುತ್ತಾಳೆ.

ಮದುವೆ ವೇಳೆ ವರನಲ್ಲಿ ಕಾಣುವ ಉತ್ಸಾಹ ಆಕೆಯಲ್ಲಿ ಕಾಣಿಸುತ್ತಿಲ್ಲ. ವೈರಲ್ ಆಗಿರುವ ವಿಡಿಯೋದಲ್ಲಿರುವ ವಧುವಿನ ಬಗ್ಗೆ ನೆಟ್ಟಿಗರು ಅನುಕಂಪ ವ್ಯಕ್ತಪಡಿಸಿದ್ದಾರೆ. ತಾನು ಬಯಸದ ಮದುವೆಯಲ್ಲಿ ಆಕೆ ಸಿಕ್ಕಿಬಿದ್ದಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ವರನು ತನ್ನ ವೃದ್ಧಾಪ್ಯದ ನಡುವೆಯೂ ಸುಂದರ ವಧುವನ್ನು ಪಡೆದ ಸಂಭ್ರಮದಲ್ಲಿ ಕಾಣುತ್ತಾನೆ, ಈ ಮುದುಕನಿಗೆ ಅದೃಷ್ಟ ಒಲಿದು ಬಂದಿದೆ ಎಂದೆಲ್ಲಾ ಹಾಸ್ಯ ಮಾಡಿದ್ದಾರೆ. ವಿಡಿಯೋ ಲಕ್ಷಾಂತರ ವೀಕ್ಷಣೆಯಾಗಿದ್ದು, ಲೈಕ್ ಕಾಮೆಂಟ್‌ ಬರಪೂರ ಹರಿದುಬಂದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...