alex Certify ಬೆಂಗಳೂರು: ಸೆಕ್ಸ್ ವೇಳೆಯಲ್ಲೇ ಉದ್ಯಮಿ ಸಾವು: ಪತಿ ಸಹಾಯದಿಂದ ರಸ್ತೆ ಬದಿ ಶವ ಎಸೆದ ಪ್ರಿಯತಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು: ಸೆಕ್ಸ್ ವೇಳೆಯಲ್ಲೇ ಉದ್ಯಮಿ ಸಾವು: ಪತಿ ಸಹಾಯದಿಂದ ರಸ್ತೆ ಬದಿ ಶವ ಎಸೆದ ಪ್ರಿಯತಮೆ

ಬೆಂಗಳೂರು: ಇಲ್ಲಿನ ಜೆ.ಪಿ.ನಗರದಲ್ಲಿರುವ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ವ್ಯಕ್ತಿ ಮೃತಪಟ್ಟಿದ್ದು, ಬಳಿಕ ಆತನ ಶವವನ್ನು ಎಸೆದ ಆರೋಪದ ಮೇಲೆ ಮಹಿಳೆ, ಆಕೆಯ ಪತಿ ಮತ್ತು ಸೋದರ ಮಾವನನ್ನು ಪೊಲೀಸರು ಬಂಧಿಸಿದ್ದಾರೆ.

ನವೆಂಬರ್ 17 ರಂದು 67 ವರ್ಷದ ಉದ್ಯಮಿಯ ಮೃತದೇಹವು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಂತರ ಪೊಲೀಸರು ತನಿಖೆ ಪ್ರಾರಂಭಿಸಿದರು.

ಆ ವ್ಯಕ್ತಿಯ ಗುರುತು ಪತ್ತೆ ಹಚ್ಚಿದ ಪೊಲೀಸರು ಆತನ ದೂರವಾಣಿ ಕರೆ ವಿವರಗಳನ್ನು ಪರಿಶೀಲಿಸಿದಾಗ ಆತ ತನ್ನ ಗೆಳತಿಯ ಮನೆಗೆ ಹೋಗಿರುವುದು ಪತ್ತೆಯಾಗಿದೆ.

ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಸಂತ್ರಸ್ತೆ ಮತ್ತು ಆರೋಪಿಯ ಗುರುತುಗಳನ್ನು ಪೊಲೀಸರು ತಡೆಹಿಡಿದಿದ್ದಾರೆ. ಆದರೆ ಪ್ರಾಥಮಿಕ ತನಿಖೆಯಲ್ಲಿ ವೃದ್ಧ ಉದ್ಯಮಿ ಬೆಂಗಳೂರಿನ 35 ವರ್ಷದ ಗೃಹಿಣಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ತಿಳಿದುಬಂದಿದೆ.

ನವೆಂಬರ್ 16 ರಂದು ಸಂಜೆ 5 ಗಂಟೆಯ ಸುಮಾರಿಗೆ ಉದ್ಯಮಿ ಆಕೆಯ ಮನೆಗೆ ಹೋಗಿದ್ದರು. ಅವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಆಕೆಯ ಹಾಸಿಗೆಯಲ್ಲೇ ಸಾವನ್ನಪ್ಪಿದರು. ಭಯಗೊಂಡ ಮಹಿಳೆ ತನ್ನ ಪತಿ ಮತ್ತು ಸೋದರ ಮಾವನ ಬಳಿ ವಿಷಯ ಹೇಳಿಕೊಂಡಿದ್ದಾಳೆ. ವಿಷಯ ಬೆಳಕಿಗೆ ಬಂದರೆ ತನ್ನ ಇಮೇಜ್ ಹಾಳಾಗುತ್ತದೆ ಎಂದು ಭಾವಿಸಿದ್ದಾಳೆ. ನಂತರ, ಮೂವರು ಉದ್ಯಮಿಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಜೆಪಿ ನಗರದ ಪ್ರತ್ಯೇಕ ಸ್ಥಳದಲ್ಲಿ ಎಸೆದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಚಾರಣೆ ನಡೆಸಿದಾಗ, ಉದ್ಯಮಿ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ತಕ್ಷಣವೇ ಸಾವನ್ನಪ್ಪಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಯಾರನ್ನೋ ಭೇಟಿಯಾಗುವುದಾಗಿ ಹೇಳಿ ಮನೆಯಿಂದ ಹೋಗಿದ್ದ ಆತ ವಾಪಸ್ ಬಾರದೇ ಇದ್ದಾಗ ನಾಪತ್ತೆ ದೂರು ನೀಡಿರುವುದಾಗಿ ಉದ್ಯಮಿಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ವ್ಯಕ್ತಿಗೆ ಹಲವಾರು ಆರೋಗ್ಯ ಸಮಸ್ಯೆಗಳಿದ್ದು, ಆಗಸ್ಟ್‌ ನಲ್ಲಿ ಆಂಜಿಯೋಗ್ರಫಿ ಮಾಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...