alex Certify ಮನೆಯಲ್ಲಿ ದುಡ್ಡಿನ ರಾಶಿಯನ್ನೇ ಹೊಂದಿದ್ದ ಮಹಿಳಾ IAS ಅಧಿಕಾರಿ ಅರೆಸ್ಟ್: ನಿವಾಸದಲ್ಲಿತ್ತು 20 ಕೋಟಿ ರೂ. ಕ್ಯಾಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲಿ ದುಡ್ಡಿನ ರಾಶಿಯನ್ನೇ ಹೊಂದಿದ್ದ ಮಹಿಳಾ IAS ಅಧಿಕಾರಿ ಅರೆಸ್ಟ್: ನಿವಾಸದಲ್ಲಿತ್ತು 20 ಕೋಟಿ ರೂ. ಕ್ಯಾಶ್

ನವದೆಹಲಿ: ಜಾರ್ಜಂಡ್ ಐಎಎಸ್ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯ ಇಂದು ಬಂಧಿಸಿದೆ. ಬಂಧನಕ್ಕೂ ಮುನ್ನ ಆಕೆಯನ್ನು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು.

ಜಾರಿ ನಿರ್ದೇಶನಾಲಯ(ED) ಶುಕ್ರವಾರ ಜಾರ್ಖಂಡ್ ಗಣಿ ಕಾರ್ಯದರ್ಶಿ ಪೂಜಾ ಸಿಂಘಾಲ್ ಮತ್ತು ಅವರ ಕುಟುಂಬ ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತು, ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಖುಂಟಿ ಜಿಲ್ಲೆಯಲ್ಲಿ ಸುಮಾರು 18 ಕೋಟಿ MGNREGA ನಿಧಿಯನ್ನು ದುರುಪಯೋಗಪಡಿಸಿಕೊಂಡ ಆರೋಪ ಅವರ ಮೇಲಿದೆ.

ರಾಜ್ಯ ರಾಜಧಾನಿ ರಾಂಚಿಯಲ್ಲಿ ತಪಾಸಣೆ ನಡೆಸಿದ ಸಂಸ್ಥೆಯು ಎರಡು ಸ್ಥಳಗಳಿಂದ ಒಟ್ಟು 19.31 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದೆ.

ಐಎಎಸ್ ಅಧಿಕಾರಿ ಮತ್ತು ಅವರ ಕುಟುಂಬದೊಂದಿಗೆ ಸಂಪರ್ಕ ಹೊಂದಿರುವ ರಾಂಚಿ ಮೂಲದ ಚಾರ್ಟರ್ಡ್ ಅಕೌಂಟೆಂಟ್-ಕಮ್-ಫೈನಾನ್ಷಿಯಲ್ ಅಡ್ವೈಸರ್ ಅವರ ಆವರಣದಿಂದ ಸುಮಾರು 17.51 ​​ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಮತ್ತೊಂದು ಸ್ಥಳದಿಂದ ಸುಮಾರು 1.8 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ. ಈ ಪ್ರಕರಣ ಜಾರ್ಖಂಡ್‌ ನಲ್ಲಿ ಕೋಟ್ಯಂತರ ಎಂಜಿಎನ್‌ಆರ್‌ಇಜಿಎ ನಿಧಿಯ ದುರುಪಯೋಗ ಒಳಗೊಂಡಿರುತ್ತದೆ. ಪೂಜಾ ಸಿಂಘಾಲ್ ಅವರು ಜಾರ್ಖಂಡ್‌ನಲ್ಲಿ ಗಣಿಗಾರಿಕೆ ಕಾರ್ಯದರ್ಶಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...