alex Certify ʼಬಿಸ್ಕೆಟ್ʼ ಕುರಿತ ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಿಸ್ಕೆಟ್ʼ ಕುರಿತ ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಬಿಸ್ಕೆಟ್​​​ ಸೇವನೆಯಿಂದ ಕ್ಯಾನ್ಸರ್​ ಸಂಭವಿಸುತ್ತದೆ ಎಂಬ ಆಘಾತಕಾರಿ ಮಾಹಿತಿಯನ್ನು ಹಾಂಕಾಂಗ್​​ನ ಅಧ್ಯಯನವೊಂದು ಬಯಲಿಗೆಳೆದಿದೆ. 60 ವಿವಿಧ ಬಿಸ್ಕೆಟ್​​​ ಮಾದರಿಗಳನ್ನು ಅಧ್ಯಯನ ಮಾಡಿದ ಬಳಿಕ ಈ ವಿಚಾರ ತಿಳಿದು ಬಂದಿದೆ ಎನ್ನಲಾಗಿದೆ.

ಮೊದಲೇ ಪ್ಯಾಕ್​ ಮಾಡಿ ಇಡಲಾದ ಬಿಸ್ಕೆಟ್​​​ ಗಳಲ್ಲಿ ಗ್ಲೈಸಿಡಾಲ್​ ಹಾಗೂ ಅಕ್ರಿಲಾಮೈಡ್​ ಎಂಬ ಕ್ಯಾನ್ಸರ್​ ಉಂಟು ಮಾಡುವ ಪದಾರ್ಥಗಳು ಇರುವುದು ಪತ್ತೆಯಾಗಿದೆ. ಈ ಎರಡೂ ರಾಸಾಯನಿಕಗಳು ಕ್ಯಾನ್ಸರ್​​​ನ್ನು ತಂದೊಡ್ಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ.

ಬಿಸ್ಕೆಟ್​​ ​ಗಳನ್ನು ತಯಾರು ಮಾಡುವವರಿಗೆ ಗ್ಲೈಸಿಡಾಲ್​ ಹಾಗೂ ಅಕ್ರಿಲಾಮೈಡ್​ಗಳನ್ನು ಬಳಕೆ ಮಾಡಲು ಅನುಮತಿ ಇದ್ದರೂ ಸಹ ಇಷ್ಟೇ ಪ್ರಮಾಣದಲ್ಲಿ ಬಳಕೆ ಮಾಡಬೇಕೆಂಬ ಮಿತಿಯನ್ನೂ ನಿಗದಿಪಡಿಸಲಾಗಿದೆ. 1 ಕೆಜಿ ಬಿಸ್ಕೆಟ್​​ ​​ನಲ್ಲಿ 350 ಗ್ರಾಂ ಅಕ್ರಿಲಾಮೈಡ್​​ ಇದ್ದರೆ ಮಾತ್ರ ಅದನ್ನು ಸುರಕ್ಷಿತ ಎಂದು ಪರಿಗಣಿಸಬಹುದಾಗಿದೆ.

ಆದರೆ ಈ ಅಧ್ಯಯನದಲ್ಲಿ ಕನಿಷ್ಟ 4 ಬಿಸ್ಕೆಟ್​​​ ತಯಾರಕ ಕಂಪನಿಗಳು ಈ ಮಿತಿಯನ್ನು ಮೀರಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಮುಜಿಸ್​​ ಸ್ಯಾಂಡ್​ವಿಚ್​ ಕ್ರ್ಯಾಕರ್​​ನಲ್ಲಿ 620 ಗ್ರಾಂ ಅಕ್ರಿಲಾಮೈಡ್​ ಬಳಕೆಯಾಗಿದೆ. ಇದರಲ್ಲಿ ಓರಿಯೋ, ಮಾರಿ ಹಾಗೂ ಫ್ರೆಜ್​​ ವೇಫರ್ಸ್​ ಕೂಡ ಸೇರಿದೆ.

ಇದು ಮಾತ್ರವಲ್ಲದೇ ಅಧ್ಯಯನಕ್ಕೆ ಬಳಕೆ ಮಾಡಲಾದ 60 ಬಿಸ್ಕೆಟ್​​​ ಮಾದರಿಗಳಲ್ಲಿ 56ರಲ್ಲಿ 3ಎಂಸಿಪಿಡಿ ಎಂಬ ರಾಸಾಯನಿಕ ಕಾಂಪೌಂಡ್​ ಕಂಡುಬಂದಿದೆ. ಇದು ಕಿಡ್ನಿ ಹಾಗೂ ಪುರುಷರ ಸಂತಾನೋತ್ಪತ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.

60 ಕೆಜಿಗಿಂತ ಹೆಚ್ಚು ತೂಕವುಳ್ಳ ವ್ಯಕ್ತಿಯು ಒಂದು ದಿನದಲ್ಲಿ ಈ ರಾಸಾಯನಿಕ ಕಾಂಪೌಂಡ್​ನ್ನು 120 ಗ್ರಾಂಗಿಂತ ಅಧಿಕ ಸೇವನೆ ಮಾಡುವಂತಿಲ್ಲ. ಆದರೆ ಕೆಲ ಬಿಸ್ಕೆಟ್​​ ಗಳಲ್ಲಿ ಪ್ರತಿ 1 ಕೆಜಿಯಲ್ಲಿ 2000 ಗ್ರಾಂ 3ಎಂಸಿಪಿಡಿ ಕಂಡು ಬಂದಿದೆ.

33 ಬಿಸ್ಕೆಟ್​​​ ಕಂಪನಿಗಳು ಅತ್ಯಧಿಕ ಕೊಬ್ಬಿನ ಪ್ರಮಾಣವನ್ನು ಹೊಂದಿದೆ. 27 ಬಗೆಯ ಬಿಸ್ಕೆಟ್​​​ ಗಳು ಅತೀ ಹೆಚ್ಚು ಸಕ್ಕರೆ ಅಂಶ ಹಾಗೂ ಸೋಡಿಯಂ ಅಂಶವನ್ನು ಹೊಂದಿದೆ. 40 ಪ್ರತಿಶತ ಬಿಸ್ಕೆಟ್​​ ​ಗಳು ಪೋಷಕಾಂಶಗಳ ವಿಚಾರದಲ್ಲಿ ಸುಳ್ಳು ಮಾಹಿತಿಗಳನ್ನು ನಮೂದಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...