alex Certify ಈ ವ್ಯವಹಾರದಲ್ಲಿ ತಿಂಗಳಿಗೆ ಗಳಿಸಬಹುದು 1,20,000 ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವ್ಯವಹಾರದಲ್ಲಿ ತಿಂಗಳಿಗೆ ಗಳಿಸಬಹುದು 1,20,000 ರೂ.

ಸ್ವಂತ ಉದ್ಯೋಗ ಮಾಡಲು ಬಯಸುವವರಿಗೆ ಬಂಪರ್ ಲಾಭದಾಯಕ ವ್ಯವಹಾರದ ವಿವರ ಇಲ್ಲಿದೆ. ಈ ವ್ಯವಹಾರದಲ್ಲಿ ನೀವು ದಿನಕ್ಕೆ ನಾಲ್ಕು ಸಾವಿರ ರೂಪಾಯಿ ಗಳಿಕೆ ಮಾಡಬಹುದು. ತಿಂಗಳಿಗೆ 1,20,000 ರೂಪಾಯಿ ಗಳಿಸಬಹುದು. ಬಹು ಬೇಡಿಕೆಯಿರುವ, ಲಾಭದಾಯಕ ಬ್ಯುಸಿನೆಸ್ ಮಾಡಲು ಮೆಕ್ಕೆ ಜೋಳದ ಅಗತ್ಯವಿದೆ.

ಯಸ್, ಕಾರ್ನ್ ಫ್ಲೇಕ್ಸ್ ವ್ಯವಹಾರದ ಮೂಲಕ ನೀವು ಲಕ್ಷಾಂತರ ರೂಪಾಯಿ ಗಳಿಸಬಹುದಾಗಿದೆ. ಈ ವ್ಯವಹಾರ ಶುರು ಮಾಡಲು 2000 ರಿಂದ 3000 ಚದರ ಅಡಿ ಜಾಗದ ಅವಶ್ಯಕತೆಯಿದೆ. ಸ್ಟಾಕ್ ಸಂಗ್ರಹಿಸಿಡಲು ಗೋದಾಮಿನ ಅಗತ್ಯವಿರುತ್ತದೆ. ಯಂತ್ರಗಳು, ವಿದ್ಯುತ್ ಸೌಲಭ್ಯ, ಜಿಎಸ್‌ಟಿ ಸಂಖ್ಯೆ, ಕಚ್ಚಾ ವಸ್ತುಗಳು ಬೇಕಾಗುತ್ತದೆ.

ಈ ಯಂತ್ರಗಳನ್ನು ಮೆಕ್ಕೆ ಜೋಳದಿಂದ ತಯಾರಿಸಿದ ಕಾರ್ನ್ ಫ್ಲೇಕ್ಸ್ ತಯಾರಿಸಲು ಮಾತ್ರವಲ್ಲದೆ ಗೋಧಿ ಮತ್ತು ಅಕ್ಕಿಯ ಫ್ಲೇಕ್ಸ್ ಗೂ ಬಳಸಬಹುದು. ಮೆಕ್ಕೆಜೋಳದ ಹೆಚ್ಚಿನ ಇಳುವರಿ ಇರುವ ಪ್ರದೇಶದಲ್ಲಿ ಈ ವ್ಯವಹಾರವನ್ನು ಶುರು ಮಾಡುವುದು ಒಳ್ಳೆಯದು. ದೂರದಿಂದ ಮೆಕ್ಕೆಜೋಳವನ್ನು ತಂದು ಕಾರ್ನ್ ಫ್ಲೇಕ್ಸ್ ತಯಾರಿಸಿದರೆ ತುಂಬಾ ದುಬಾರಿಯಾಗುತ್ತದೆ.

ಒಂದು ಕೆಜಿ ಕಾರ್ನ್ ಫ್ಲೇಕ್ಸ್ ತಯಾರಿಸುವ ವೆಚ್ಚ ಸುಮಾರು 30 ರೂಪಾಯಿ. ಮಾರುಕಟ್ಟೆಯಲ್ಲಿ  ಪ್ರತಿ ಕೆಜಿಗೆ 70 ರೂಪಾಯಿಗೆ ಸುಲಭವಾಗಿ ಮಾರಾಟ ಮಾಡಬಹುದು. ಒಂದು ದಿನದಲ್ಲಿ 100 ಕೆಜಿ ಕಾರ್ನ್ ಫ್ಲೇಕ್ಸ್  ಮಾರಾಟ ಮಾಡಿದರೆ ಸುಮಾರು 4000 ರೂಪಾಯಿ ಗಳಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...