alex Certify ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ʼಮ್ಯಾಜಿಕ್‌ಪಿನ್ʼ ಶುರು; 45 ನಿಮಿಷಗಳಲ್ಲೇ ಫಾರ್ಮಸಿ ವಿತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ʼಮ್ಯಾಜಿಕ್‌ಪಿನ್ʼ ಶುರು; 45 ನಿಮಿಷಗಳಲ್ಲೇ ಫಾರ್ಮಸಿ ವಿತರಣೆ

ಭಾರತೀಯ ಹೈಪರ್‌ಲೋಕಲ್ ಶಾಪಿಂಗ್ ಮತ್ತು ಉಳಿತಾಯ ವೇದಿಕೆ ಮ್ಯಾಜಿಕ್‌ಪಿನ್ ಬುಧವಾರ ದೇಶಾದ್ಯಂತ 45 ನಿಮಿಷದ ಫಾರ್ಮಸಿ ವಿತರಣಾ ಸೇವೆ ಆರಂಭಿಸಿದೆ.

ಹೈಪರ್‌ ಲೋಕಲ್ ಚಿಲ್ಲರೆ ವ್ಯಾಪಾರದಲ್ಲಿ ತ್ವರಿತ ವಿತರಣೆ ಮತ್ತು ಬಳಕೆದಾರ ಸ್ನೇಹಿ ಅನುಭವದ ಹೊಸ ಮಾನದಂಡಗಳನ್ನು ಹೊಂದಿಸುವ ಉದ್ದೇಶ ಇದರದ್ದು ಎಂದು ಕಂಪನಿ ತಿಳಿಸಿವೆ.

ಅಂಗಡಿ ಮಟ್ಟದಲ್ಲಿ ಕ್ಯಾಟಲಾಗ್ ಫಾರ್ಮಸಿ ಸ್ಟಾಕ್ ಕೀಪಿಂಗ್ ಯೂನಿಟ್ (SKUs) ಗೆ ಮ್ಯಾಜಿಕ್‌ಪಿನ್ ಸಹಾಯ ಮಾಡುತ್ತದೆ, ಆಪ್‌ ಮೂಲಕ ಅನ್ವೇಷಿಸಲು ಸಹಕಾರ ನೀಡಲಾಗುತ್ತದೆ ಮತ್ತು 45 ನಿಮಿಷಗಳಲ್ಲಿ ವಿತರಣೆಯನ್ನು ಪೂರೈಸುತ್ತದೆ.

ಹೊಸ ಸೇವೆಗಾಗಿ, ಬ್ರ್ಯಾಂಡ್ ದೇಶಾದ್ಯಂತ 2000 ವಿಶ್ವಾಸಾರ್ಹ ಸ್ಥಳೀಯ ಔಷಧಾಲಯಗಳೊಂದಿಗೆ ಪಾಲುದಾರಿಕೆ ಹೊಂದಿದೆ.

ಪ್ರಸ್ತುತ, ಈ ಸೇವೆಯು ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ್, ಕೋಲ್ಕತ್ತಾ, ಪುಣೆ, ಚೆನ್ನೈ, ಹೈದರಾಬಾದ್, ಗುರ್ಗಾಂವ್, ನೋಯ್ಡಾ, ಫರೀದಾಬಾದ್, ಗಾಜಿಯಾಬಾದ್ ಮತ್ತು ಜೈಪುರ ಸೇರಿದಂತೆ 15 ನಗರಗಳಲ್ಲಿ ಲಭ್ಯವಿದ್ದು, ತಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಸುಮಾರು 10,000 ಸ್ಟೋರ್‌ಗಳಿಗೆ ಕಾರ್ಯಾಚರಣೆಯನ್ನು ವಿಸ್ತರಿಸಲು ಯೋಜಿಸಿದೆ.

BIG NEWS: ಹಿಜಾಬ್ ಧರಿಸಿ ಕಾಲೇಜಿಗೆ ಬಂದ 6 ವಿದ್ಯಾರ್ಥಿನಿಯರು ಅಮಾನತು

“ಔಷಧಿಗಳ ವಿಷಯಕ್ಕೆ ಬಂದಾಗ, ಸಮಯವೇ ಮುಖ್ಯ. ನಾವು ವೇಗ ಮತ್ತು ತ್ವರಿತತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಸೇವೆಯನ್ನು ರೂಪಿಸಿದ್ದೇವೆ. ಅಸ್ತಿತ್ವದಲ್ಲಿರುವ ಸೇವೆಗಳಿಗೆ ಗ್ರಾಹಕರು ತಮ್ಮ ಪ್ರಿಸ್ಕ್ರಿಪ್ಷನ್ ಅನ್ನು ಮನೆಗೆ ತಲುಪಿಸಲು 2 ಗಂಟೆಗಳಿಂದ 2 ದಿನಗಳವರೆಗೆ ಕಾಯಬೇಕಾಗುತ್ತದೆ. ಯಾರಾದರೂ ಅಸ್ವಸ್ಥರಾದಾಗ ಈ ರೀತಿ ಮಾಡುವುದು ಸೂಕ್ತವಲ್ಲ”ಎಂದು ಮ್ಯಾಜಿಕ್‌ಪಿನ್‌ನ ಸಿಇಒ ಮತ್ತು ಸಹ-ಸಂಸ್ಥಾಪಕ ಅಂಶೂ ಶರ್ಮಾ ಹೇಳಿದರು.

ಮ್ಯಾಜಿಕ್‌ಪಿನ್‌ ವೇದಿಕೆಯು ಲೈಟ್‌ಸ್ಪೀಡ್, ಝೊಮಾಟೊ, ವಾಟರ್‌ಬ್ರಿಡ್ಜ್ ಮತ್ತು ಗೂಗಲ್‌ನಂತಹ ಮಾರ್ಕ್ಯೂ ಹೂಡಿಕೆದಾರರಿಂದ ಹೂಡಿಕೆ ಮಾಡಿಸಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...