alex Certify ಧೂಳಿನ ಚಂಡಮಾರುತಕ್ಕೆ ಎಲ್ಲೆಂದರಲ್ಲಿಉರುಳಿದ ವಾಹನಗಳು: ವೈರಲ್ ಆಯ್ತು ಭಯಾನಕ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧೂಳಿನ ಚಂಡಮಾರುತಕ್ಕೆ ಎಲ್ಲೆಂದರಲ್ಲಿಉರುಳಿದ ವಾಹನಗಳು: ವೈರಲ್ ಆಯ್ತು ಭಯಾನಕ ದೃಶ್ಯ

ಅಮೆರಿಕದ ಇಲಿನಾಯ್ಸ್ ರಾಜ್ಯದಲ್ಲಿ ಎದ್ದಿರುವ ಧೂಳಿನ ಬಿರುಗಾಳಿಯಿಂದಾಗಿ ಅಂತರರಾಜ್ಯ ಹೆದ್ದಾರಿಯಲ್ಲಿ ಹಲವಾರು ವಾಹನಗಳು ಡಿಕ್ಕಿ ಹೊಡೆದು ನುಜ್ಜುಗುಜ್ಜಾಗಿವೆ. ಇವುಗಳಲ್ಲಿ 80 ವಾಣಿಜ್ಯ ವಾಹನಗಳು ಮತ್ತು 60 ಕ್ಕೂ ಹೆಚ್ಚು ಕಾರುಗಳು ಸೇರಿದ್ದು. 6 ಜನರು ಸಾವನ್ನಪ್ಪಿದ್ದಾರೆ.

ಏಕಾಏಕಿ ಬೀಸಿದ ಧೂಳಿನ ಚಂಡಮಾರುತದಿಂದಾಗಿ ವಾಹನಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ವಿಡಿಯೋದಲ್ಲಿ ಗಮನಿಸುವ ಹಾಗೆ ಧೂಳಿನ ಚಂಡಮಾರುತಕ್ಕೆ ಸಿಲುಕಿದ ಕೆಲ ವಾಹನಗಳು ಬೆಂಕಿ ಹೊತ್ತು ಉರಿಯುವುದನ್ನ ನೋಡಿ ಜನರು ಬೆಚ್ಚಿಬಿದ್ದಿದ್ದಾರೆ.

ಈ ಧೂಳಿನ ಗಾಳಿಯ ಪರಿಣಾಮದಿಂದಾಗಿ ಅಂತರರಾಜ್ಯ 55ರ ಸಂಚಾರವನ್ನು ಸುಮಾರು 30 ಮೈಲುಗಳವರೆಗೆ ಎರಡೂ ದಿಕ್ಕುಗಳಲ್ಲಿ ಸ್ಥಗಿತಗೊಳಿಸಲಾಯಿತು ಎಂದು ಗವರ್ನರ್ ಜೆಬಿ ಪ್ರಿಟರ್ ವಿವರಿಸಿದ್ದಾರೆ.

ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೊ ಹಾಗೂ ಫೋಟೋಗಳಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಹೊಗೆ ಮತ್ತು ಧೂಳಿನ ನಡುವೆ ಅಸ್ತವ್ಯಸ್ತವಾಗಿರುವ ಕಾರುಗಳು ಹಾಗೂ ಟ್ರಾಕ್ಟರ್-ಟ್ರೇಲರ್‌ಗಳನ್ನು ಕಾಣಬಹುದು.

ಇಲಿನಾಯ್ ಸಾರಿಗೆ ಇಲಾಖೆಯ ಪ್ರಕಾರ, ಈ ಘಟನೆ ದಕ್ಷಿಣ-ಮಧ್ಯ ಇಲಿನಾಯ್ಸ್‌ ನ ಮೈಲಿಪೋಸ್ 76ರ ಸಮೀಪ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಇದರಿಂದ ಗೋಚರತೆ ಕಡಿಮೆಯಾಗಿ ಮೈಲಿಪೋಸ್ 52 ಮತ್ತು 80 ರ ನಡುವೆ ಟ್ರಾಫಿಕ್‌ ಹೆಚ್ಚಾಗಿರುವುದು ವಿಡಿಯೋದಲ್ಲಿ ಕಂಡು ಬಂದಿಂದೆ

ಘಟನೆಯಿಂದಾಗಿ ಕನಿಷ್ಠ 30 ಜನರು ಗಾಯಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸೆಮಿಟ್ರೇಲರ್‌ನಲ್ಲಿ ಪವರ್-ಟೂಲ್ ಬ್ಯಾಟರಿ ಬೇಜ್ ಸೇರಿದಂತೆ ಬೆಂಕಿಯನ್ನು ನಿಗ್ರಹಿಸಲು ಅಪಾಯಕಾರಿ ವಸ್ತುಗಳ ತಂಡದ ಜೊತೆಗೆ 10 ಹೆಲಿಕಾಪ್ಟರ್‌ಗಳನ್ನು ಸ್ಥಳಕ್ಕೆ ಕರೆಸಲಾಗಿದೆ ಎಂದು ಮಾಂಟ್‌ಗೊಮೆರಿ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...