alex Certify ಆರೋಗ್ಯಕ್ಕೆ ಉಪಯುಕ್ತ ವಿಟಮಿನ್ ಸಮೃದ್ಧ ‘ಡ್ರೈ ಫ್ರೂಟ್ಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಉಪಯುಕ್ತ ವಿಟಮಿನ್ ಸಮೃದ್ಧ ‘ಡ್ರೈ ಫ್ರೂಟ್ಸ್’

ಊಟದ ಜೊತೆ ಉಪ್ಪಿನಕಾಯಿ ಎಷ್ಟು ಮುಖ್ಯವೋ, ದೈನಂದಿನ ಆಹಾರ ಕ್ರಮದಲ್ಲಿ ಡ್ರೈ ಫ್ರೂಟ್ಸ್ ಕೂಡ ಅಷ್ಟೇ ಮುಖ್ಯ. ದೇಹದ ತೂಕದ ಸಮತೋಲನಕ್ಕೆ, ಮಿದುಳಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಹೃದಯದ ಆರೋಗ್ಯಕ್ಕೆ ಇವು ಬಹಳ ಉಪಯುಕ್ತವಾಗಿವೆ.

ಡ್ರೈ ಫ್ರೂಟ್ಸ್ ನಲ್ಲಿ ಪ್ರೋಟೀನ್ಸ್, ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ಸ್ ಗಳು ಯಥೇಚ್ಛವಾಗಿರುತ್ತದೆ. ಇಷ್ಟೇ ಅಲ್ಲದೇ ಕೆಲವು ನಟ್ಸ್ ಗಳು ವಿಟಮಿನ್ ಇ, ಬಿ2, ಫೋಲೇಟ್, ಮೆಗ್ನೀಷಿಯಂ, ಪೊಟ್ಯಾಷಿಯಂ, ಫಾಸ್ಫರಸ್ ಹೀಗೆ ಹಲವಾರು ರೀತಿಯ ಖನಿಜಾಂಶವನ್ನು ಕೂಡ ಒಳಗೊಂಡಿರುತ್ತದೆ. ನಿಮ್ಮ ಆರೋಗ್ಯಪೂರ್ಣ ದಿನಚರಿಗೆ ಪ್ರತಿ ದಿನ ಸೇವಿಸಬಹುದಾದ ಕೆಲವು ಡ್ರೈಫ್ರೂಟ್ಸ್ ಗಳ ಮಾಹಿತಿ ಇಲ್ಲದೆ.

ವಾಲ್ ನಟ್ : ಸಣ್ಣ ಮಕ್ಕಳಿಗೆ ಪ್ರತಿ ದಿನ ಇದನ್ನು ಸೇವಿಸಲು ನೀಡುವುದರಿಂದ ಮೆದುಳಿನ ಬೆಳವಣಿಗೆಗೆ ಅನುಕೂಲವಾಗುತ್ತದೆ ಹಾಗೂ ಜ್ಞಾಪಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಹೃದಯದ ಕಾರ್ಯ ನಿರ್ವಹಣೆಗೆ ಆಗುವ ಅಡೆತಡೆಗಳನ್ನು ಸಹ ತಡೆಗಟ್ಟುತ್ತದೆ.

ಪಿಸ್ತಾ : ಇದರಲ್ಲಿ ಗ್ಲೈಸಮಿಕ್ ಅಂಶ ಕಡಿಮೆಯಿರುವುದರಿಂದ ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ರಹಿತವಾಗಿದೆ. ಹೃದಯಕ್ಕೆ ರಕ್ತ ಪರಿಚಲನೆ ಸರಾಗವಾಗಿಸುತ್ತದೆ.

ಬಾದಾಮಿ : ಉತ್ತಮ ಆರೋಗ್ಯಕ್ಕೆ ಬಾದಾಮಿ ಅತ್ಯುತ್ತಮವಾಗಿದೆ. ನಿಯಮಿತವಾಗಿ ಇದನ್ನು ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಅಮೈನೋ ಆ್ಯಸಿಡ್ ರಕ್ತನಾಳಗಳ ಹರಿವನ್ನು ಸರಾಗಗೊಳಿಸಿ, ರಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ.

ಗೋಡಂಬಿ : ಇದರಲ್ಲಿ ವಿಟಮಿನ್ ಇ ಅಂಶ ಸಮೃದ್ಧವಾಗಿದ್ದು, ಇದು ನಮ್ಮ ದೇಹಕ್ಕೆ ಸರಿಯಾದ ರಕ್ತ ಪರಿಚಲನೆ ಮಾಡುವಲ್ಲಿ ಸಹಕರಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...