alex Certify ಹೆಂಡದ ಅಮಲಿನಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪ….! ಭಯಾನಕ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೆಂಡದ ಅಮಲಿನಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪ….! ಭಯಾನಕ ವಿಡಿಯೋ ವೈರಲ್​

ಅಮಲಿನಲ್ಲಿ ಮನುಷ್ಯ ಏನು ಮಾಡಬಹುದು ಎಂಬುದು ಅವನ ಜೀವಕ್ಕೆ ಅಪಾಯವಾದಾಗ ಮಾತ್ರ ತಿಳಿಯುತ್ತದೆ. ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ.

ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. ಜಾರ್ಖಂಡ್‌ನ ಗರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಪರಿಹಾರ ಪಂಚಾಯತ್‌ನ ಕಿಟಾಸೋಟಿ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೀಡಿಯೊದಲ್ಲಿ, ಬಿರ್ಜಲಾಲ್ ರಾಮ್ ಭುಯಾನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ಹೆಬ್ಬಾವಿನ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ವಾಸ್ತವವಾಗಿ, ಈತ ಕುಡಿದ ಸ್ಥಿತಿಯಲ್ಲಿ ತನ್ನ ಕುತ್ತಿಗೆಗೆ ಹೆಬ್ಬಾವನ್ನು ಸುತ್ತಿಕೊಂಡಿದ್ದಾನೆ. ಕುಡಿದ ಅಮಲು ಹೋದ ಮೇಲೆ ಅದನ್ನು ಹೊರಹಾಕಲು ಹೆಣಗಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಬಿರ್ಜಲಾಲ್‌ನ ಮಗ ಮತ್ತು ಅವನ ಸ್ನೇಹಿತರು ಕುಡುಕನನ್ನು ರಕ್ಷಿಸಲು ಮತ್ತು ಹೆಬ್ಬಾವಿನ ಬಿಗಿಯಾದ ಹಿಡಿತದಿಂದ ಬಿಡಿಸಲು ಪ್ರಯತ್ನಿಸಿದರು. ಕೊನೆಗೂ ಮಗ ಇದರಲ್ಲಿ ಯಶಸ್ವಿಯಾಗಿದ್ದಾನೆ. ಘಟನೆಯಲ್ಲಿ ಬಿರ್ಜಲಾಲ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಗ್ರಾಮದಲ್ಲಿಯೇ ಚಿಕಿತ್ಸೆ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...