alex Certify ವಿಮಾನದಲ್ಲಿ ಮಹಿಳೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಕುಡುಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದಲ್ಲಿ ಮಹಿಳೆ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಕುಡುಕ

ಏರ್ ಇಂಡಿಯಾ ಬ್ಯುಸಿನೆಸ್ ಕ್ಲಾಸ್‌ ನಲ್ಲಿ ಮಹಿಳೆಯ ಮೇಲೆ ಕುಡುಕ ವ್ಯಕ್ತಿ ಮೂತ್ರ ವಿಸರ್ಜನೆ ಮಾಡಿದ್ದಾನೆ, ಆತನನ್ನು ‘ನೋ-ಫ್ಲೈ’ ಪಟ್ಟಿಗೆ ಸೇರಿಸಲು ಏರ್‌ಲೈನ್ ಆಗ್ರಹಿಸಿದೆ.

ವಿಮಾನದಲ್ಲಿ ದುರ್ನಡತೆಯ ಪ್ರಕರಣ ನಡೆದಿದ್ದು, ಯುಎಸ್-ದೆಹಲಿ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ್ದಾನೆ. ಆತನ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ. ಈ ಘಟನೆ ನವೆಂಬರ್ 26, 2022 ರಂದು ನಡೆದಿದೆ.

ಏರ್ ಇಂಡಿಯಾ ಅಧಿಕಾರಿಯೊಬ್ಬರು, ಈ ಘಟನೆಯಲ್ಲಿ ಏರ್ ಇಂಡಿಯಾ ಆಂತರಿಕ ಸಮಿತಿಯನ್ನು ರಚಿಸಿದೆ. ಪುರುಷ ಪ್ರಯಾಣಿಕರನ್ನು ‘ನೊ-ಫ್ಲೈ ಲಿಸ್ಟ್’ಗೆ ಸೇರಿಸಲು ಶಿಫಾರಸು ಮಾಡಿದೆ, ಈ ವಿಷಯವು ಸರ್ಕಾರದ ಸಮಿತಿಯ ಅಡಿಯಲ್ಲಿದ್ದು, ನಿರ್ಧಾರಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...