alex Certify ಕುಡಿದ ಮತ್ತಿನಲ್ಲಿ ಗಗನಸಖಿಯ ರಂಪಾಟ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಮತ್ತಿನಲ್ಲಿ ಗಗನಸಖಿಯ ರಂಪಾಟ; ವಿಡಿಯೋ ವೈರಲ್

ಗಗನಸಖಿಯೊಬ್ಬಳು ತನ್ನ ಮೂವರು ಸ್ನೇಹಿತರ ಜೊತೆಗೆ ಅಮಲೇರಿದ ಪರಿಸ್ಥಿತಿಯಲ್ಲಿ ರೆಸ್ಟೊರೆಂಟ್​ನಲ್ಲಿ ಗಲಾಟೆ ಆಡಿ ರಂಪಾಟ ನಡೆಸಿದ ಪ್ರಸಂಗ ನಡೆದಿದೆ.

ರಾಜಸ್ತಾನದ ಜೈಪುರದಲ್ಲಿ ಈ ಘಟನೆ ನಡೆದಿದ್ದು, ಪ್ರಾಚಿ ಸಿಂಗ್​ ಮತ್ತು ಆಕೆಯ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.

ರೆಸ್ಟೋರೆಂಟ್​ನಲ್ಲಿ ಒಂದು ಕುಟುಂಬದೊಟ್ಟಿಗೆ ಜಗಳವಾಡಿದ್ದು, ರೆಸ್ಟೊರೆಂಟ್​ನಿಂದ ಹೊರಬಂದ ಬಳಿಕ ಬಿಯರ್​ ಬಾಟಲಿಯಿಂದ ಆ ಕುಟುಂಬದವರ ಕಾರಿನ ಗಾಜು ಒಡೆದಿದ್ದಾಳೆ.

ಕುಟುಂಬದವರ ದೂರಿನ ಮೇರೆಗೆ ಪ್ರಾಚಿ ಸಿಂಗ್​, ಆಕೆಯ ಪತಿ ಕಾರ್ತಿಕ್ ಚೌಧರಿ, ವಿಕಾಸ್​ ಖಂಡೇಲ್ವಾಲ್​ ಮತ್ತು ನೇಹಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಶಾಂತಿ ಭಂಗದ ಆರೋಪದ ಮೇಲೆ ಪೊಲೀಸರು ವಿಶಾಲ್​ ದುಬೆ ಮತ್ತು ಆರ್ಯ ಅವರನ್ನು ಎದುರು ಗುಂಪಿನಿಂದ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...