alex Certify ಗ್ಲಾಸ್ಗೋದಿಂದ ನಿರ್ಗಮಿಸುವ ಮುನ್ನ ಸಂಗೀತ ವಾದ್ಯ ನುಡಿಸಿದ ಪ್ರಧಾನಿ ಮೋದಿ; ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ಲಾಸ್ಗೋದಿಂದ ನಿರ್ಗಮಿಸುವ ಮುನ್ನ ಸಂಗೀತ ವಾದ್ಯ ನುಡಿಸಿದ ಪ್ರಧಾನಿ ಮೋದಿ; ವಿಡಿಯೋ ವೈರಲ್​

ವಿಶ್ವಸಂಸ್ಥೆಯ ಹವಾಮಾನ ವೈಪರಿತ್ಯ ತಡೆ ಸಮಾವೇಶದ ನಿಮಿತ್ತ 2 ದಿನಗಳ ಕಾಲ ಗ್ಲಾಸ್ಗೋ ಪ್ರವಾಸದಲ್ಲಿ ಪ್ರಧಾನಿ ಮೋದಿ ಭಾರತಕ್ಕೆ ನಿರ್ಗಮಿಸುವ ಮುನ್ನ ಸ್ಕಾಟ್ಲೆಂಡ್​ನಲ್ಲಿರುವ ಭಾರತೀಯ ಸಮುದಾಯದವರ ಜೊತೆ ಸೇರಿ ಡ್ರಮ್​ ಬಾರಿಸಿದ್ದಾರೆ.

ಭಾರತಕ್ಕೆ ನಿರ್ಗಮಿಸುವ ಮುನ್ನ, ಪ್ರಧಾನಿ ಮೋದಿಯವರನ್ನು ಸ್ಕಾಟ್ಲೆಂಡ್​​ನ ಭಾರತೀಯ ಸಮುದಾಯದ ಜನತೆ ಡ್ರಮ್​ ಸೇರಿದಂತೆ ವಿವಿಧ ಸಂಗೀತ ವಾದ್ಯಗಳನ್ನು ಬಾರಿಸುತ್ತಾ ಹಷೋದ್ಗಾರ ವ್ಯಕ್ತಪಡಿಸಿದ್ರು. ಅನೇಕರು ಭಾರತೀಯ ಸಾಂಪ್ರದಾಯಿಕ ಉಡುಗೆ ಹಾಗೂ ಪೇಟ ಧರಿಸಿದ್ದೂ ಸಹ ಕಂಡು ಬಂತು.

ಭಾರತೀಯ ಸಮುದಾಯದ ಸದಸ್ಯರ ಜೊತೆ ಕೈಕುಲುಕಿ ಮಾತನಾಡಿದ್ದು ಮಾತ್ರವಲ್ಲದೇ ಪ್ರಧಾನಿ ಮೋದಿ ಡ್ರಮ್​ನ್ನೂ ಬಾರಿಸಿದ್ದಾರೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ಹಿಂದೆ ಪ್ರಧಾನಿ ಮೋದಿ ಭಾರತದ ಆಭರಣ ಎಂದು ಸ್ಕಾಟ್ಲೆಂಡ್​​ನ ಭಾರತೀಯ ಸಮುದಾಯದವರು ಘೋಷಣೆ ಕೂಗುತ್ತಿದ್ದ ವಿಡಿಯೋ ಕೂಡ ಇದೇ ರೀತಿ ವೈರಲ್​ ಆಗಿತ್ತು.

— ANI (@ANI) November 2, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...