alex Certify ಮದುವೆ ಆಮಂತ್ರಣ ಪತ್ರಿಕೆ ಮೂಲಕ ಡ್ರಗ್ಸ್​ ಸರಬರಾಜು: ವಿಮಾನ ಪ್ರಯಾಣಿಕರೇ ಇರಲಿ ಎಚ್ಚರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಆಮಂತ್ರಣ ಪತ್ರಿಕೆ ಮೂಲಕ ಡ್ರಗ್ಸ್​ ಸರಬರಾಜು: ವಿಮಾನ ಪ್ರಯಾಣಿಕರೇ ಇರಲಿ ಎಚ್ಚರ…!

ಬೆಂಗಳೂರು: ಡ್ರಗ್ಸ್​, ಚಿನ್ನ ಸೇರಿದಂತೆ ಕಳ್ಳ ಮಾರ್ಗದ ಮೂಲಕ ಸರಬರಾಜು ಮಾಡುವವರು ಹಲವಾರು ರೀತಿಯ ಚಾಕಚಕ್ಯತೆ ಉಪಯೋಗಿಸಿದರೂ ಕೆಲವೊಮ್ಮೆ ಸಿಕ್ಕಿಬೀಳುತ್ತಾರೆ. ಆತಂಕಕಾರಿ ಬೆಳವಣಿಗೆಯೊಂದರಲ್ಲಿ ಮದುವೆ ಆಮಂತ್ರಣ ಪತ್ರಿಕೆಗಳಲ್ಲಿ ಡ್ರಗ್ಸ್​ ಸರಬರಾಜು ಮಾಡುವವರು ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯೊಬ್ಬರಿಂದ 5 ಕೆಜಿಗೂ ಹೆಚ್ಚು ಎಫೆಡ್ರಿನ್ ಡ್ರಗ್ಸ್​ ವಶಪಡಿಸಿಕೊಂಡಿದ್ದಾರೆ. 43 ಮದುವೆಯ ಆಮಂತ್ರಣ ಕಾರ್ಡ್‌ಗಳಲ್ಲಿ ಇದನ್ನು ಸರಬರಾಜು ಮಾಡಲಾಗುತ್ತಿತ್ತು. ಈ ಘಟನೆ ಕಳೆದ ಫೆಬ್ರವರಿಯಲ್ಲಿ ನಡೆದಿದ್ದು, ಹಳೆಯ ವಿಡಿಯೋ ಮತ್ತೊಮ್ಮೆ ಇಂಟರ್ನೆಟ್‌ನಲ್ಲಿ ವೈರಲ್​ ಅಗುತ್ತಿದೆ.

ವೈರಲ್ ವಿಡಿಯೋವನ್ನು ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. “ವಿಮಾನ ನಿಲ್ದಾಣದಲ್ಲಿ ಮದುವೆ ಕಾರ್ಡ್ ಹೊಂದಿರುವ ಹುಡುಗಿ ಸಿಕ್ಕಿಬಿದ್ದಿದ್ದಾಳೆ. ಕಾರ್ಡ್‌ಗಳು ಡ್ರಗ್ಸ್​ ಒಳಗೊಂಡಿದ್ದವು. ಜಾಗರೂಕರಾಗಿರಿ…… ವಿಮಾನ ನಿಲ್ದಾಣದಲ್ಲಿ ಯಾರಿಂದಲೂ ಏನನ್ನೂ ತೆಗೆದುಕೊಳ್ಳಬೇಡಿ, ಇಲ್ಲದಿದ್ದರೆ ನಿಮಗೂ ಅಪಾಯ, ಸಿಕ್ಕಿಬೀಳುವಿರಿ” ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...