alex Certify BIG NEWS: ಬಿಜೆಪಿಯಾಯ್ತು ಈಗ JDS ನಿಂದಲೂ ಬರ ಅಧ್ಯಯನಕ್ಕೆ ತಂಡ ರಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿಯಾಯ್ತು ಈಗ JDS ನಿಂದಲೂ ಬರ ಅಧ್ಯಯನಕ್ಕೆ ತಂಡ ರಚನೆ

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ, ಬರಗಾಲದಿಂದ ರೈತರು, ಜನರು ಸಂಕಷ್ಟಕ್ಕೀಡಾಗಿದ್ದರೆ ರಾಜಕೀಯ ಪಕ್ಷಗಳು ಇದನ್ನೇ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿವೆ. ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿ ಪರಿಹಾರ ಕಾರ್ಯಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ವರದಿ ನೀಡುವಂತೆ ಆದೇಶ ನೀಡಿರುವ ಬೆಳವಣಿಗೆ ನಡುವೆಯೇ ಜೆಡಿಎಸ್ ಕೂಡ ಬರ ಅಧ್ಯಯನ ತಂಡ ರಚನೆ ಮಾಡಿದೆ.

ಬರ ಅಧ್ಯಯನಕ್ಕಾಗಿ ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ತೆರಳಿದ ಬೆನ್ನಲ್ಲೇ ಬಿಜೆಪಿ ಬರ ಅಧ್ಯಯನ ತಂಡವನ್ನು ರಚನೆ ಮಾಡಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬರಪೀಡಿತ ಪ್ರದೇಶಗಳ ಭೇಟಿ ಆರಂಭಿಸಿದೆ. ಈಗ ಜೆಡಿಎಸ್ ಕೂಡ ಪ್ರತ್ಯೇಕವಾಗಿ ಬರ ಅಧ್ಯಯನ ತಂಡ ರಚನೆ ಮಾಡಿದೆ.

31 ಜಿಲ್ಲೆಗಳ ಬರ ಅಧ್ಯಯನಕ್ಕೆ ಜೆಡಿಎಸ್ 24 ತಂಡಗಳನ್ನು ರಚನೆ ಮಾಡಿದೆ. ಮೈಸೂರು ಜಿಲ್ಲೆಗೆ ಶಾಸಕ ಜಿ.ಟಿ.ದೇವೇಗೌಡ, ಸಾ.ರಾಮಹೇಶ್, ಮಹದೇವ್, ಅಶ್ವಿನ್ ಕುಮಾರ್, ಮಂಜುನಾಥ್, ಮಂಡ್ಯ ಜಿಲ್ಲೆಗೆ ಟಿ.ಸಿ.ತಮ್ಮಣ್ಣ, ಜಿಲ್ಲಾಧ್ಯಕ್ಷ ರಮೇಶ್ ಗೌಡ, ಡಾ.ರವೀಂದ್ರ ಶ್ರೀಕಂಠಯ್ಯ, ಸುರೇಶ್ ಗೌಡ, ಹಾಸನಕ್ಕೆ ಎ.ಮಂಜು, ಸ್ವರೂಪ್, ಸಿ.ಎನ್.ಬಾಲಕೃಷ್ಣ, ಶಿವಮೊಗ್ಗಕ್ಕೆ ಶಾರದ ಪಿ ನಾಯ್ಕ್, ಪ್ರಸನ್ನ ಕುಮಾರ್, ಚಿಕ್ಕಮಗಳೂರಿಗೆ ವೈಎಸ್ ವಿ ದತ್ತ, ಬೋಜೇಗೌಡ, ಸುಧಾಕರ್ ಶೆಟ್ಟಿ, ಬೆಂಗಳೂರು ರಮೇಶ್ ಗೌಡ, ದಾಸರಹಳ್ಳಿ ಮಂಜುನಾಥ್, ಶರವಣ, ಜವರಾಯಿಗೌಡ ಸೇರಿದಂತೆ 31 ಜಿಲ್ಲೆಗಳಲ್ಲಿ ಬರ ಅಧ್ಯಯನಕ್ಕೆ ತಂಡ ರಚನೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...