alex Certify ʼಡ್ರೋನ್ʼ​ ಕಣ್ಣಲ್ಲಿ ಕುರಿ ಹಿಂಡಿನ ಅತ್ಯದ್ಭುತ ದೃಶ್ಯ ಸೆರೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಡ್ರೋನ್ʼ​ ಕಣ್ಣಲ್ಲಿ ಕುರಿ ಹಿಂಡಿನ ಅತ್ಯದ್ಭುತ ದೃಶ್ಯ ಸೆರೆ..!

ರವಿ ಕಾಣದ್ದನ್ನ ಕವಿ ಕಂಡ ಎಂಬ ಗಾದೆ ಮಾತಿದೆ. ಪ್ರಸ್ತುತ ಸಂದರ್ಭದಲ್ಲಿ ನಾವು ಕವಿ ಕಾಣದ್ದನ್ನ ಫೋಟೋಗ್ರಾಫರ್​ ಕಂಡ ಎಂದು ಹೇಳಿದ್ರೆ ತಪ್ಪಾಗಲಿಕ್ಕಿಲ್ಲವೇನೋ.

ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಇಸ್ರೇಲ್​ ಮೂಲದ ಡ್ರೋನ್​ ಫೋಟೋಗ್ರಾಪರ್​ ಲಿಯೋರ್ ಪಟೇಲ್​ ಕುರಿಗಳ ಟೈಮ್​ ಲ್ಯಾಪ್ಸ್​ ವಿಡಿಯೋವೊಂದನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಡ್ರೋನ್ ಕ್ಯಾಮರಾದ ಮೂಲಕ ಕುರಿಗಳ ಗುಂಪು ವಿವಿಧೆಡೆ ಸಂಚರಿಸುತ್ತಿದ್ದ ದೃಶ್ಯವನ್ನ ಟೈಮ್​ ಲ್ಯಾಪ್ಸ್​ ವಿಡಿಯೋ ರೂಪದಲ್ಲಿ ಚಿತ್ರಿಕರಿಸಲಾಗಿದೆ.

ಇಸ್ರೇಲ್​ನ ಯೋಕ್ನೀಮ್​​ ಎಂಬ ಪ್ರದೇಶದಲ್ಲಿ ಈ ಅದ್ಭುತ ದೃಶ್ಯ ಸೆರೆಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಇತರೆ ವೇದಿಕೆಗಳಲ್ಲೂ ಈ ದೃಶ್ಯವನ್ನ ಹಂಚಿಕೊಳ್ತಿದ್ದಾರೆ .

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...